ತೋಳುಗಳನ್ನು ಅಗಲವಾಗಿ ಚಾಚಿ, ಡೊನಾಲ್ಡ್ ಟ್ರಂಪ್ ಅವರ ಧ್ವನಿಯೊಂದಿಗೆ, ರಯಾನ್ ಚೆನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಪಡೆಯುತ್ತಿದ್ದಾರೆ. ನೈಋತ್ಯ ಚೀನಾದ ಚಾಂಗ್ಕಿಂಗ್‌ನ 42 ವರ್ಷದ ಬ್ಲಾಗರ್ ರಯಾನ್, ರಾಜಕೀಯ ವಿಡಂಬನೆಯನ್ನು ಹೊರತುಪಡಿಸಿ, ಅಮೆರಿಕದ ಅಧ್ಯಕ್ಷರ ಅನುಕರಣೆಗಾಗಿ ಜಾಲತಾಣದಲ್ಲಿ ಸುದ್ದು ಮಾಡುತ್ತಿದ್ದಾರೆ.
ರಾಜಕೀಯ ವಿಡಂಬನೆ ಅಪಾಯಕಾರಿಯಾಗಬಹುದಾದ ದೇಶದಲ್ಲಿ, ಚೆನ್ ತನ್ನ ವಿಷಯವನ್ನು ಹಾಸ್ಯಮಯವಾಗಿ ಮತ್ತು ಸಾಂಸ್ಕೃತಿಕವಾಗಿ ಕೇಂದ್ರೀಕರಿಸಿದ್ದಾರೆ. ನೀತಿಗಳು ಅಥವಾ ರಾಜಕೀಯವನ್ನು ಅಪಹಾಸ್ಯ ಮಾಡುವ ಬದಲು, ಅವರ ವಿಡಿಯೋಗಳು ಚೀನೀ ಆಹಾರ, ದೈನಂದಿನ ಜೀವನ ಮತ್ತು ಅಂತರ್-ಸಾಂಸ್ಕೃತಿಕ ಹಾಸ್ಯವನ್ನು ಎತ್ತಿ ತೋರಿಸುತ್ತವೆ.

VIDEO: 🇨🇳 🇺🇸 The viral ‘Chinese Trump’ drawing millions of views online
Outstretching his hands in a signature Donald Trump pose, impersonator Ryan Chen mimics the US president’s voice and gestures with such accuracy that he has become a social media phenomenon with his videos… pic.twitter.com/x74dOtUUJH
— AFP News Agency (@AFP) January 8, 2026
ಚೆನ್ ಅವರ ಈ ತಂತ್ರಗಾರಿಕೆ ಫಲ ನೀಡಿದೆ. ಅವರು ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಲ್ಲಿ ತಲಾ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದಾರೆ ಮತ್ತು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಟೈರ್ ಸ್ಫೋಟ: ರಸ್ತೆಯಿಂದ ಮನೆಯಂಗಳಕ್ಕೆ ಕಾರು ಹೈಜಂಪ್
Have you seen Ryan Chen yet?
Nicknamed “Chinese Trump,” he’s a viral sensation known for parodying Trump’s speech patterns with scary accuracy!! 🤭 pic.twitter.com/ePZpANT8Ek— Chasing Pink Skies (@SheHeartsGod) January 9, 2026
ಚೆನ್ AFP ಗೆ ಹೇಳಿದಂತೆ, ಇಂಟರ್ನೆಟ್ ಖ್ಯಾತಿಗೆ ಮುಂಚೆ, ಚೆನ್ ವಾಸ್ತುಶಿಲ್ಪದಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಅವರು ಫ್ರೆಂಡ್ಸ್ ಮತ್ತು ದಿ ಬಿಗ್ ಬ್ಯಾಂಗ್ ಥಿಯರಿಯಂತಹ ಅಮೇರಿಕನ್ ಸಿಟ್‌ಕಾಮ್‌ಗಳಿಂದ ಪಡೆದ ಭಾಷಾ ಕೌಶಲ್ಯಗಳನ್ನು ಬಳಸಿಕೊಂಡು ಇಂಗ್ಲಿಷ್ ಭಾಷೆಯ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಒಬ್ಬಾತ ಡೊನಾಲ್ಡ್ ಟ್ರಂಪ್ ಅವರನ್ನು ಅನುಕರಿಸಲು ಧೈರ್ಯ ಮಾಡಿದಾಗ ಈ ಉಪಾಯ ಚೆನ್‌ಗೆ ಹೊಳೆಯಿತು.
ಚೀನಾ ಭೇಟಿಯ ಸಮಯದಲ್ಲಿ ಅಮೇರಿಕನ್ ಯೂಟ್ಯೂಬರ್ ಐಶೋಸ್ಪೀಡ್ ಆಯೋಜಿಸಿದ್ದ ಲೈವ್‌ಸ್ಟ್ರೀಮ್‌ನಲ್ಲಿ ಚೆನ್ ಕಾಣಿಸಿಕೊಂಡಿದ್ದು ಅವರನ್ನು ಜಾಗತಿಕವಾಗಿ ಬೆಳಕಿಗೆ ತಂದಿತು. ಚೆನ್ ತನ್ನನ್ನು ತಾನು ಒಬ್ಬ ಸಾಂಸ್ಕೃತಿಕ ಸಂಪರ್ಕಕಾರ ಎಂದು ಹೇಳಿಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಆಧುನಿಕ ನಗರ ಚೀನಾವನ್ನು ಪರಿಚಯಿಸುತ್ತಿದ್ದಾರೆ. ಅಲ್ಲದೆ, ಚೀನೀ ವೀಕ್ಷಕರಿಗೆ ಪಾಶ್ಚಿಮಾತ್ಯ ಹಾಸ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಅವರ ವಿಡಿಯೋಗಳು ಹೆಚ್ಚಾಗಿ ಮಸಾಲೆಯುಕ್ತ ಚಾಂಗ್ಕಿಂಗ್ ಹಾಟ್‌ಪಾಟ್, ಬೀದಿ ಆಹಾರ ಮತ್ತು ವಿದೇಶಿಯರೊಂದಿಗೆ ತಮಾಷೆಯ ಸಂವಹನಗಳನ್ನು ಒಳಗೊಂಡಿರುತ್ತವೆ.
So China made a copy of Donald Trump and somehow, it’s better quality than the original American one😅😅 pic.twitter.com/eQPulxYig9
— Kadi🇪🇪🌻 (@TheFl0orIsLaVa) April 25, 2025
ಬ್ಲಾಗರ್ ಆಗಿರುವ ಚೆನ್, ಬ್ರ್ಯಾಂಡ್ ಪ್ರಚಾರ, ಈವೆಂಟ್ ಮತ್ತು ಕಾರ್ಪೊರೇಟ್ ಪ್ರದರ್ಶನಗಳ ಮೂಲಕ ಹಣ ಗಳಿಸುತ್ತಾರೆ. ತಂತ್ರಜ್ಞಾನ ಸಂಸ್ಥೆಗಳಿಂದ ಹಿಡಿದು ಆಹಾರ ಮತ್ತು ಆಟೋಮೊಬೈಲ್ ಕಂಪನಿಗಳವರೆಗೆ ಜಾಹೀರಾತುದಾರರು ಇದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

