ಭಾರತೀಯ ಸನಾತನ ಧರ್ಮ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರವಾರವನ್ನು ಮಹಾಲಕ್ಷ್ಮಿ ದೇವಿಯ ಪವಿತ್ರ ದಿನ ಎಂದು ಪೂಜಿಸಲಾಗುತ್ತದೆ. ಈ ದಿನ ಮನೆಗೆ ಸುಖ, ಶಾಂತಿ, ಐಶ್ವರ್ಯ ಹಾಗೂ ಧನ ಕನಕಗಳನ್ನು ಕರುಣಿಸುವ ಲಕ್ಷ್ಮಿ ದೇವಿಯ ಕೃಪೆ ಅಪಾರವಾಗಿರುತ್ತದೆ. ಆದರೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಶುಕ್ರವಾರದ ದಿನ ಕೆಲವು ಹಣಕಾಸಿನ ವ್ಯವಹಾರಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಶುಕ್ರವಾರ ಯಾರಿಗೂ ಸಾಲದ ರೂಪದಲ್ಲಿ ಹಣವನ್ನು ನೀಡಬಾರದು ಎಂಬ ನಿಯಮ ಪ್ರಮುಖವಾದದ್ದು.
ಶುಕ್ರವಾರ ಸಾಲ ನೀಡಬಾರದು ಎಂಬುದಕ್ಕೆ ಜ್ಯೋತಿಷ್ಯದ ಮುಖ್ಯ ಕಾರಣಗಳು:
ಧನಲಕ್ಷ್ಮಿಯ ಹೊರಹೋಗುವಿಕೆ: ಶುಕ್ರವಾರ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ದಿನ. ಈ ದಿನ ನಿಮ್ಮ ಕೈಯಿಂದ ಹಣವನ್ನು ಇನ್ನೊಬ್ಬರಿಗೆ ಸಾಲವಾಗಿ ನೀಡಿದರೆ, ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ಅಥವಾ ಧನ-ಸಂಪತ್ತು ಹೊರಗೆ ಹೋಗುತ್ತದೆ ಮತ್ತು ಮನೆಯಲ್ಲಿ ದರಿದ್ರತನ ಅಥವಾ ಆರ್ಥಿಕ ಅಭಾವ ಎದುರಾಗುತ್ತದೆ ಎಂಬ ನಂಬಿಕೆಯಿದೆ.
ಕೊಟ್ಟ ಹಣ ಮರಳಿ ಬರುವುದು ಕಷ್ಟ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರದ ದಿನ ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯುವುದು ಅತ್ಯಂತ ಕಷ್ಟಕರ. ಆ ಹಣವು ಬಹುಬೇಗನೆ ವಾಪಸ್ ಬರುವುದಿಲ್ಲ ಅಥವಾ ವಿನಾಕಾರಣ ಸಿಲುಕಿಕೊಳ್ಳುತ್ತದೆ.
ಶುಕ್ರ ಗ್ರಹದ ದೋಷ: ಶುಕ್ರವಾರವು ‘ಶುಕ್ರ ಗ್ರಹ’ಕ್ಕೆ ಸಂಬಂಧಿಸಿದ್ದು. ಶುಕ್ರನು ಭೋಗ, ಐಶ್ವರ್ಯ ಮತ್ತು ಆಕರ್ಷಣೆಯ ಸಂಕೇತ. ಶುಕ್ರವಾರದಂದು ಧನ ಕೈಚೆಲ್ಲಿದರೆ ಜಾತಕದಲ್ಲಿ ಶುಕ್ರ ಗ್ರಹದ ಬಲ ಕುಗ್ಗಿ, ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ.
ಇದನ್ನೂ ಓದಿ: ಅಮಾವಾಸ್ಯೆಯ ಮರುದಿನ ತಪ್ಪದೇ ಮಾಡಬೇಕಾದ ಮುಖ್ಯ ಕೆಲಸಗಳು
ಶುಕ್ರವಾರ ಧನ ಸಮೃದ್ಧಿಗಾಗಿ ಮಾಡಬೇಕಾದ ಶುಭ ಕಾರ್ಯಗಳು:
ದಾನ ಮಾಡಬಹುದು, ಸಾಲವಲ್ಲ: ಶುಕ್ರವಾರದ ದಿನ ಬಡವರಿಗೆ ಅಥವಾ ಅಗತ್ಯವಿರುವವರಿಗೆ ಅನ್ನದಾನ, ವಸ್ತ್ರದಾನ ಅಥವಾ ಧಾನ್ಯ ದಾನ ಮಾಡುವುದು ಅತ್ಯಂತ ಶುಭ. ಆದರೆ ಹಣವನ್ನು ‘ಸಾಲದ ರೂಪದಲ್ಲಿ’ ನೀಡುವುದು ಯೋಗ್ಯವಲ್ಲ.
ಮನೆಯಲ್ಲಿ ದೀಪಾರಾಧನೆ: ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪ ಹಚ್ಚಿ, ಕುಂಕುಮಾರ್ಚನೆ ಅಥವಾ ಪೂಜೆ ಮಾಡುವುದರಿಂದ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಹಾಗೂ ಐಶ್ವರ್ಯ ನೆಲೆಸುತ್ತದೆ.
ಅಧ್ಯಾತ್ಮ ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ

