Breaking News

WPL: ಮುಂಬೈ ಮಣಿಸಿದ ವಾರಿಯರ್ಸ್‌ಗೆ ಭರ್ಜರಿ ಗೆಲುವು

WPL UP Warriors won against Mumbai by 7 wickets

ನವಿ ಮುಂಬೈ: ಇಲ್ಲಿನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್ ೭ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ, ೨೦ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೧೬೧ ರನ್ ಬಾರಿಸಿತು. ತಂಡದ ಪರ ನ್ಯಾಟ್ ಸಿವರ್ ಬ್ರಂಟ್ ಅವರು ಅತ್ಯಧಿಕ ರನ್ (೬೫) ಗಳಿಸಿದರು. ಅಮನ್‌ಜೋತ್ ಕೌರ್ ೩೮, ಗುಣಲನ್ ಕಮಲಿನಿ ೫, ಹರ್ಮನ್‌ಪ್ರೀತ್ ಕೌರ್ ೧೬, ನಿಕೋಲಾ ಕ್ಯಾರಿ ೩೨ ರನ್ ಗಳಿಸಿದರು.

Advertisement

ಇದನ್ನೂ ಓದಿ: U19 Worldcup: ಹೆನಿಲ್ ದಾಳಿಗೆ 5 ವಿಕೆಟ್ ಪತನ: ಯುಎಸ್ಎ ವಿರುದ್ಧ ಭಾರತಕ್ಕೆ ಗೆಲುವು

೧೬೨ ರನ್‌ಗಳ ಗುರಿ ಬೆನ್ನಟ್ಟಿದ ವಾರಿಯರ್ಸ್, ೧೮.೧ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ ಅವರು (೬೪ ರನ್) ಅತ್ಯಧಿಕ ರನ್ ಗಳಿಸಿದರು. ಉಳಿದಂತೆ, ಮೆಗ್ ಲ್ಯಾನಿಂಗ್ ೨೫, ಕಿರಣ್ ನವಗಿರೆ ೧೦, ಫೋಬೆ ಲಿಚ್‌ಫೀಲ್ಡ್ ೨೫ ಕ್ಲೋಯ್ ಟ್ರಯಾನ್ ೨೭ ರನ್ ಬಾರಿಸಿದರು.

ಮುಂಬೈ ಪರ ನ್ಯಾಟ್ ಸ್ಕಿವರ್ ಬ್ರಂಟ್ ೨ ಮತ್ತು ಅಮೆಲಿಯಾ ಕೆರ್ ೧ ವಿಕೆಟ್ ಪಡೆದರು. ವಾರಿಯರ್ಸ್ ಪರ ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಮತ್ತು ಆಶಾ ಸೋಭಾನ ತಲಾ ೧ ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು