ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದರ ನಡುವೆ ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಚಿತ್ರದ ಮೊದಲ ಸಾಂಗ್ ‘ತಬಾಹಿ’ (Tabaahi) ಮಾರ್ಚ್ 2 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಈ ಹಾಡಿನ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಿಂದ ಯಶ್ ಅವರಿಗೆ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.
‘ಟಾಕ್ಸಿಕ್’ ಟೀಸರ್‌ನಲ್ಲಿ ಆಕ್ಷನ್ ಮತ್ತು ಕ್ರೈಂ ಛಾಯೆ ಹೆಚ್ಚಿತ್ತು. ಆದರೆ ಈಗ ಬಿಡುಗಡೆಯಾಗಲಿರುವ ‘ತಬಾಹಿ’ ಹಾಡು ಒಂದು ಸುಂದರ ಪ್ರೇಮಗೀತೆಯಾಗಿದ್ದು, ಸಿನಿಮಾದಲ್ಲಿ ಪ್ರೀತಿಯ ಕಥೆಯೂ ಇದೆ ಎಂಬ ಸುಳಿವು ನೀಡಿದೆ.ಚಿತ್ರವು ಮಾರ್ಚ್ 19, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಹಾಡು ಚಿತ್ರದ ಪ್ರಚಾರಕ್ಕೆ ಭರ್ಜರಿ ಆರಂಭ ನೀಡಲಿದೆ.

ಇದನ್ನೂ ಓದಿ: ಅಖಿಲಾ ಪಜಿಮಣ್ಣು ವಿಚ್ಛೇದನದ ಹಿಂದಿನ ಅಸಲಿ ಸತ್ಯ ಏನು? ಮೌನ ಮುರಿದ ‘ಕನ್ನಡ ಕೋಗಿಲೆ’
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಅವರಲ್ಲದೆ ನಯನತಾರಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಅಂತಹ ದೊಡ್ಡ ತಾರಾಗಣವೇ ಇದೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅಡಿಯಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

