ಭಾರತೀಯ ಚಿತ್ರರಂಗ ಮತ್ತೊಂದು ಭಾರೀ ಸಿನೆಮಾಟಿಕ್ ಬಿರುಗಾಳಿಗೆ ಸಿದ್ಧವಾಗುತ್ತಿದೆ. ಆ ಬಿರುಗಾಳಿಯ ಹೆಸರು ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಬಹು ನಿರೀಕ್ಷಿತ ಚಿತ್ರ, ದೇಶದ ಅತ್ಯಂತ ವೈಟೆಡ್ (ಕಾಯಲಾಗುತ್ತಿರುವ) ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ರಿಯಲ್-ಟೈಂ ಜನಪ್ರಿಯತೆಯಲ್ಲಿ ಶೇಕಡಾ 28 ದಾಖಲೆ ಮಾಡಿದೆ.
ಚಿತ್ರದ ಟೀಸ್ ಬಿಡುಗಡೆಯಾದ ನಂತರವೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಕೊಂಡಿದೆ. ‘ಡ್ಯಾಡಿ ಇಸ್ ಹೋಮ್’ ಎಂಬ ಡೈಲಾಗ್‌ನೊಂದಿಗೆ ಅಂತ್ಯಗೊಳ್ಳುವ ಟೀಸ್, ಡಾರ್ಕ್, ಡೇಂಜರಸ್ ಮತ್ತು ಫಿಯರ್‌ಲೆಸ್ ಕಥನದ ಸೂಚನೆ ನೀಡಿದೆ.

ಟಾಕ್ಸಿಕ್ ಕೇವಲ ಸ್ಟಾರ್ ಸಿನಿಮಾ ಮಾತ್ರವಲ್ಲ, ಘಟಾನುಘಟಿ ನಟ ದಂಡೇ ಇದರಲ್ಲಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ವಿವಿಧ ಚಿತ್ರರಂಗಗಳ ದೊಡ್ಡ ನಟಿಯರ ಬಳಗ ಚಿತ್ರಕ್ಕೆ ಮತ್ತಷ್ಟು ತೂಕ ನೀಡಿದೆ.
ಇದನ್ನೂ ಓದಿ: Dhurandhar: ಧುರಂಧರ್ ಸಿನಿಮಾ ವೀಕ್ಷಣೆಯಲ್ಲಿ ಪಾಕಿಸ್ತಾನ ನಂ.1!
ತಾಂತ್ರಿಕವಾಗಿ ಕೂಡ ಟಾಕ್ಸಿಕ್ ಅಂತರರಾಷ್ಟ್ರೀಯ ಮಟ್ಟದ ತಂಡವನ್ನು ಹೊಂದಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ರಾಜೀವ್ ರವಿ, ಸಂಗೀತ ನಿರ್ದೇಶಕ ರವಿ ಬಸ್ರೂರ್, ಎಡಿಟಿಂಗ್ ಉಜ್ವಲ್ ಕುಲಕರ್ಣಿ ಹಾಗೂ ಪ್ರೊಡಕ್ಷನ್ ಡಿಸೈನ್ ಟಿಪಿ ಅಬೀದ್ ಅವರ ಕೈಚಳಕವೂ ಸಿನಿಮಾದಲ್ಲಿದೆ.
ಆಕ್ಷನ್ ವಿಚಾರದಲ್ಲಿ ಟಾಕ್ಸಿಕ್ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಹಾಲಿವುಡ್‌ನ ‘ಜಾನ್ ವಿಕ್’ ಖ್ಯಾತಿಯ ಆಕ್ಷನ್ ನಿರ್ದೇಶಕ ಜೆ.ಜೆ. ಪೆರಿ ಜೊತೆಗೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಅನ್ಬರಿವ್ ಮತ್ತು ಕೀಚಾ ಖಾಂಪಾಕ್‌ಡಿ ಅವರ ಸಂಯೋಜನೆ ಚಿತ್ರಕ್ಕೆ ಅಂತರರಾಷ್ಟ್ರೀಯ ಆಕ್ಷನ್ ಸ್ಕೇಲ್ ನೀಡಿದೆ.
ಯಶ್ ಮತ್ತು ಗೀತು ಮೋಹಂದಾಸ್ ಕಥೆ-ಕಥನ ಬರೆದಿರುವ ಈ ಚಿತ್ರವನ್ನು ಗೀತು ಮೋಹಂದಾಸ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಟಾಕ್ಸಿಕ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿರುವ ‘ಟಾಕ್ಸಿಕ್ ಸಿನಿಮಾ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ಮತ್ತಷ್ಟು ಸಿನಿಮಾಗಳ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

