ಕೊಲೊಂಬೊ: ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಹೊರ ಹಾಕಿದ್ದ ಜಿಂಬಾಬ್ವೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹಿಂದಿನ ಪಂದ್ಯದ ಹೀರೋ ಪಥುಮ ನಿಸಂಕ 62 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಪವನ್ ರತ್ನನಾಯಕೆ 44, ಕುಸಾಲ್ ಪೆರೇರ 22 ರನ್ ಗಳಿಸಿ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 178 ಆಗುವಂತೆ ಮಾಡಿದರು.

ಇದನ್ನೂ ಓದಿ: ಪುತ್ತೂರು ಬಾರ್ ಅಸೋಸಿಯೇಶನ್‌ಗೆ 1ಕೋಟಿ, 2 ಮಸೀದಿಗಳಿಗೆ 55 ಲಕ್ಷ ಮಂಜೂರು: ಅಶೋಕ್ ರೈ
ಜಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಜರಬಾನಿ, ಬ್ರಾಡ್ ಈವನ್ಸ್ ಮತ್ತು ಗ್ರೀಮ್ ಕ್ರೀಮರ್ ತಲಾ 2, ಮತ್ತು ರಾಯನ್ ಬರ್ಲ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ಬ್ರಿಯಾನ್ ಬೆನೆಟ್ ಅಜೇಯ 63 ಮತ್ತು ತಡಿವನಶೆ ಮರುಮನಿ 34 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ನಾಯಕ ಸಿಕಂದರ್ ರಾಜಾ 45 ಮತ್ತು ರಾಯನ್ ಬರ್ಲ್ 23 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಶ್ರೀಲಂಕಾ ಪರ ದುಶನ್ ಹೇಮಂತ 2, ದುನಿತ್ ವೆಲ್ಲಲಗೆ ಮತ್ತು ದಾಸುನ್ ಶನಕ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

