ಕಾಸರಗೋಡು: ಮೊಬೈಲ್ ರಿಪೇರಿ ಮಾಡಿಕೊಡದ್ದಕ್ಕೆ ಮನನೊಂದು 17ರ ಪಿಯುಸಿ ವಿದ್ಯಾರ್ಥಿನಿ ಆತ್ಮ*ಹತ್ಯೆ

ಕಾಸರಗೋಡು: ಮೊಬೈಲ್ ಫೋನ್‌ನ ಡಿಸ್ಪ್ಲೇ ಕೆಟ್ಟುಹೋಗಿದ್ದು, ಅದನ್ನು ಸರಿಪಡಿಸಿಕೊಡಲು ಮನೆಯವರು ವಿಳಂಬ ಮಾಡಿದರೆಂಬ ಕಾರಣಕ್ಕೆ 17 ವರ್ಷದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಸರಗೋಡಿನ ಕಳತ್ತೂರಿನಲ್ಲಿ ವರದಿಯಾಗಿದೆ. ಕಳತ್ತೂರು ಕಿದೂರಿನ ಎಂ. ಡಿ. ಪೂಜಾ (17) ಎಂಬಾಕೆಯೇ ಮೃತಪಟ್ಟ ದುರ್ದೈವಿ. ಈಕೆ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.

ಇತ್ತೀಚೆಗೆ ಕಾಮಾಲೆ ರೋಗದಿಂದಾಗಿ ಶಿಕ್ಷಣಕ್ಕೆ ವಿರಾಮ ಬಿದ್ದಿತ್ತು. ಆರೋಗ್ಯ ಸುಧಾರಿಸಿದ ನಂತರ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮತ್ತೆ ಕಾಲೇಜಿಗೆ ಸೇರಲು ಆಕೆ ಸಿದ್ಧತೆ ನಡೆಸುತ್ತಿದ್ದಳು. ಕೆಲವು ದಿನಗಳ ಹಿಂದೆ ಆಕೆಯ ಮೊಬೈಲ್ ಫೋನ್‌ನ ಡಿಸ್ಪ್ಲೇ ಕೆಟ್ಟುಹೋಗಿತ್ತು. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿ ಇಲ್ಲದ ಕಾರಣ ತಕ್ಷಣವೇ ಅದನ್ನು ಸರಿಪಡಿಸಿಕೊಡಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ತಂದೆಯನ್ನೇ ಕೊಡಲಿಯಿಂದ ಕಡಿದು ಕೊಂದು, ಟ್ಯಾಂಕ್‌ಗೆ ಶವ ಎಸೆದು ಬಿರಿಯಾನಿ ತಿಂದ ಮಗ!

ಮೊಬೈಲ್ ಸರಿಪಡಿಸಿಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಈ ಹಿಂದೆಯೂ ಬೆದರಿಕೆ ಹಾಕಿದ್ದಳು. ಆದರೆ, ಮನೆಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದ ಬುಧವಾರ ರಾತ್ರಿ ಇಲಿಪಾಷಾಣ ಸೇವಿಸಿದ್ದ ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಕೊನೆಯುಸಿರೆಳೆದಿದ್ದಾಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು