ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕದಲ್ಲಿ ಏರಿಕೆ; ದಂಡದ ಮೊತ್ತ, ಅಂಕಪಟ್ಟಿ ಶುಲ್ಕವೂ ಹೆಚ್ಚಳ

karnataka-puc-2-exam-fee-hike-new-rates

ಬೆಂಗಳೂರು: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ (II PUC) ವಿದ್ಯಾರ್ಥಿಗಳಿಗೆ ಮಹತ್ವದ ಬದಲಾವಣೆಯಾಗಿದ್ದು, ಪರೀಕ್ಷಾ ಶುಲ್ಕವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದ್ದು, ಮಾರ್ಚ್/ಏಪ್ರಿಲ್ 2027ರಲ್ಲಿ ನಡೆಯಲಿರುವ ಅಂತಿಮ ಪರೀಕ್ಷೆಗಳಿಗೂ ಹೊಸ ದರ ಅನ್ವಯವಾಗಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ಹೊಸದಾಗಿ ಪರೀಕ್ಷೆ ಬರೆಯುವ (Fresh) ಹಾಗೂ ಖಾಸಗಿ ಅಭ್ಯರ್ಥಿಗಳ II PUC ಪರೀಕ್ಷಾ ಶುಲ್ಕವನ್ನು ಈ ಹಿಂದಿನ ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ.

ಸುಮಾರು ಎಂಟು ವರ್ಷಗಳ ಬಳಿಕ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಹಿಂದೆ 2018ರಲ್ಲಿ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಲಾಗಿತ್ತು.

ಇದನ್ನೂ ಓದಿ: ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ

ತಡವಾಗಿ ಶುಲ್ಕ ಪಾವತಿಸಿದರೆ ದಂಡವೂ ಹೆಚ್ಚಳ

ಪರೀಕ್ಷಾ ಶುಲ್ಕ ಪಾವತಿಸಲು ನಿಗದಿಪಡಿಸಿದ ಗಡುವು ಮೀರಿದ ಬಳಿಕ ಶುಲ್ಕ ಪಾವತಿಸುವ ಅಭ್ಯರ್ಥಿಗಳಿಗೆ ವಿಧಿಸುವ ದಂಡದ ಮೊತ್ತವನ್ನೂ ಹೆಚ್ಚಿಸಲಾಗಿದೆ. ಪರೀಕ್ಷಾ ಶುಲ್ಕವನ್ನು 10 ದಿನ ತಡವಾಗಿ ಪಾವತಿಸುವ ಅಭ್ಯರ್ಥಿಗಳು ₹750 ಪಾವತಿಸಬೇಕಾಗುತ್ತದೆ. ವಿಶೇಷ ದಂಡವನ್ನು ₹1,980ಕ್ಕೆ ನಿಗದಿಪಡಿಸಲಾಗಿದೆ.

ಅಂಕಪಟ್ಟಿ ಸೇರಿದಂತೆ ವಿವಿಧ ಸೇವೆಗಳ ಶುಲ್ಕ ಏರಿಕೆ

ಪರೀಕ್ಷಾ ಶುಲ್ಕದ ಜೊತೆಗೆ ಅಂಕಪಟ್ಟಿ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಹಲವು ಸೇವೆಗಳ ಶುಲ್ಕವನ್ನೂ ಶೇ.50ರಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ಅಂಕಪಟ್ಟಿ ಪರಿಶೀಲನೆಗೆ ನಿಗದಿತ ಶುಲ್ಕ ಇರಲಿಲ್ಲ. ಆದರೆ ಪರಿಷ್ಕೃತ ದರದಂತೆ DGCA ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಿಗೆ ಸಲ್ಲಿಸುವ ಉದ್ದೇಶಕ್ಕಾಗಿ ಅಂಕಪಟ್ಟಿ ಪರಿಶೀಲನೆಗೆ ₹2,000 ಶುಲ್ಕ ನಿಗದಿಪಡಿಸಲಾಗಿದೆ.

ಹೊಸ ಶುಲ್ಕ ದರಗಳು 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದ್ದು, ಮುಂದಿನ II PUC ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರಿಷ್ಕೃತ ದರದಂತೆ ಶುಲ್ಕ ಪಾವತಿಸಬೇಕಾಗುತ್ತದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *