Breaking News

ಶಾಲೆಯಿಂದ ಬಂದ ಅಣ್ಣನನ್ನು ಬರಮಾಡಿಕೊಳ್ಳಲು ಓಡಿಬಂದ ತಂಗಿ: ಖಾಸಗಿ ಶಾಲಾ ಬಸ್‌ಗೆ ಸಿಲುಕಿ 3 ವರ್ಷದ ಕಂದಮ್ಮ ದಾರುಣ ಸಾವು


ವಿಜಯಪುರ: ಶಾಲೆಯಿಂದ ಮನೆಗೆ ಮರಳಿದ ಅಣ್ಣನನ್ನು ನೋಡುವ ತವಕದಲ್ಲಿದ್ದ 3 ವರ್ಷದ ಮುದ್ದು ತಂಗಿಯೊಬ್ಬಳು, ಖಾಸಗಿ ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಅತ್ಯಂತ ಹೃದಯವಿದ್ರಾವಕ ಘಟನೆ ವಿಜಯಪುರ ನಗರದ ಕೈಗಾರಿಕಾ ಪ್ರದೇಶದ ಪದಂ ನಗರದಲ್ಲಿ ಸಂಭವಿಸಿದೆ.

ಮೃತ ದುರದೃಷ್ಟಕರ ಕಂದಮ್ಮನನ್ನು ಶೀರ್ಷಾ ಸುಹಾಸ ವಾಡಿ (3) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯ ಅಣ್ಣ ಖಾಸಗಿ ಶಾಲಾ ಬಸ್ಸಿನಲ್ಲಿ ಶಾಲೆಯಿಂದ ಮನೆಗೆ ಮರಳಿದ್ದನು. ಬಸ್ ಪದಂ ನಗರದ ನಿಲ್ದಾಣಕ್ಕೆ ಬಂದಾಗ ಅಣ್ಣ ಬಸ್ಸಿನಿಂದ ಕೆಳಗೆ ಇಳಿದಿದ್ದಾನೆ.

ಅಣ್ಣ ಮನೆಗೆ ಬಂದಿರುವುದನ್ನು ಕಂಡು ತಂಗಿ ಶೀರ್ಷಾ, ಖುಷಿಯಿಂದ ಅಣ್ಣನನ್ನು ನೋಡಲು ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ವೇಳೆ ಚಾಲಕ ಬಸ್ ಅನ್ನು ಮುಂದೆ ಚಲಾಯಿಸಿದ್ದಾನೆ. ದುರಾದೃಷ್ಟವಶಾತ್ ಬಾಲಕಿ ಬಸ್‌ನ ಮುಂಭಾಗದಲ್ಲೇ ಬಂದು ನಿಂತಿದ್ದು, ಇದನ್ನು ಗಮನಿಸದ ಚಾಲಕ ವಾಹನ ಮುನ್ನಡೆಸಿದ ಪರಿಣಾಮ ಬಾಲಕಿ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಇದನ್ನೂ ಓದಿ:Crime : ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ

ಘಟನೆ ನಡೆಯುತ್ತಿದ್ದಂತೆ ಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಖಾಸಗಿ ಶಾಲಾ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *