ಲೀಕ್ ಆಯ್ತು ‘ಜೀರೋ ಲೊಂಪಿಕೊ’ ಎಲೆಕ್ಟ್ರಿಕ್ ಬೈಕ್‌ನ ಲುಕ್; ಹೀರೋ ವೀಡಾ ಜೊತೆ ಮೈತ್ರಿ, ಭಾರತದಲ್ಲೇ ತಯಾರಾಗಲಿದೆ ಹೊಸ ದ್ವಿಚಕ್ರ ವಾಹನ!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದ್ದ ‘ಜೀರೋ ಲೊಂಪಿಕೊ’ (Zero Lompico) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಅಧಿಕೃತ ಬಿಡುಗಡೆಗೂ ಮುನ್ನವೇ, ಅದರ ಪ್ರೊಡಕ್ಷನ್-ಸ್ಪೆಕ್ ವಿನ್ಯಾಸದ ಪೇಟೆಂಟ್ ಚಿತ್ರಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಈ ಲೀಕ್ ಆಗಿರುವ ರೇಖಾಚಿತ್ರಗಳು ಜೀರೋ ಲೊಂಪಿಕೊ ಬೈಕ್, ಹೀರೋ ಮೋಟೋಕಾರ್ಪ್‌ನ ‘ವೀಡಾ ವಿಎಕ್ಸ್‌ಝಡ್’ (Hero Vida VxZ) ಮಾದರಿಯೊಂದಿಗೆ ಪ್ರಮುಖ ತಾಂತ್ರಿಕ ಮತ್ತು ಯಾಂತ್ರಿಕ ಭಾಗಗಳನ್ನು ಹಂಚಿಕೊಂಡಿರುವುದನ್ನು ಖಚಿತಪಡಿಸಿವೆ. ಇದು ‘ವೀಡಾ x ಜೀರೋ’ ಮೈತ್ರಿಯ ಮುನ್ಸೂಚನೆಯಾಗಿದೆ.

ಜೀರೋ ಲೊಂಪಿಕೊ ಮತ್ತು ಹೀರೋ ವೀಡಾ VxZ ಎರಡೂ ಬೈಕ್‌ಗಳನ್ನು ಒಂದೇ ರೀತಿಯ ಟ್ರೆಲ್ಲಿಸ್ ಫ್ರೇಮ್ (Trellis Frame) ಆಧಾರದ ಮೇಲೆ ನಿರ್ಮಿಸಲಾಗಿದೆ. ಇವೆರಡೂ ಒಂದೇ ರೀತಿಯ ವೀಲ್ಸ್, ಬ್ರೇಕಿಂಗ್ ಸಿಸ್ಟಮ್, ಮುಂಭಾಗದ ಯುಎಸ್‌ಡಿ (USD) ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದ ಮೊನೊ-ಶಾಕ್ ಸಸ್ಪೆನ್ಷನ್ ಮತ್ತು ಸ್ಕಲ್ಪ್ಟೆಡ್ ಸ್ವಿಂಗ್ ಆರ್ಮ್ ಅನ್ನು ಹೊಂದಿವೆ. ಇದರೊಂದಿಗೆ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ (TFT Display), ಸ್ಟ್ರೀಟ್-ಸ್ಟೈಲ್ ಹ್ಯಾಂಡಲ್‌ಬಾರ್ ಮತ್ತು ಸ್ವಿಂಗ್ ಆರ್ಮ್ ಮೇಲೆಯೇ ಅಳವಡಿಸಲಾದ ರೇರ್ ಲೈಸೆನ್ಸ್ ಪ್ಲೇಟ್ ಹೋಲ್ಡರ್ ಇವೆರಡರಲ್ಲೂ ಸಾಮಾನ್ಯವಾಗಿದೆ.

ಬಲಿಷ್ಠ ಬ್ಯಾಟರಿ ಮತ್ತು ಪವರ್ ಫುಲ್ ಮೋಟಾರ್:

ಜೀರೋ ಮೋಟೊಸೈಕಲ್ಸ್ ಖಚಿತಪಡಿಸಿರುವಂತೆ, ಲೊಂಪಿಕೊ ಬೈಕ್‌ನಲ್ಲಿ 8.8 kWh ಸಾಮರ್ಥ್ಯದ ಬೃಹತ್ ಬ್ಯಾಟರಿ ಪ್ಯಾಕ್ ಇರಲಿದ್ದು, ಇದು ಮಿಡ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗೆ ಸಂಪರ್ಕ ಹೊಂದಿರಲಿದೆ. ಇದು ಸುಮಾರು 40 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದೇ ರೀತಿಯ ವೈಶಿಷ್ಟ್ಯಗಳು ವೀಡಾ VxZ ನಲ್ಲೂ ಇರಲಿವೆ ಎನ್ನಲಾಗಿದೆ.

ಆದರೆ, ವಿನ್ಯಾಸದ ವಿಷಯದಲ್ಲಿ ವೀಡಾ ಬೈಕ್ ಸ್ಪೋರ್ಟಿ ಮತ್ತು ಮಾಡರ್ನ್ ಲುಕ್ ಹೊಂದಿದ್ದರೆ, ಜೀರೋ ಲೊಂಪಿಕೊ ಬೋಲ್ಡ್ ಆದ ರೆಟ್ರೋ-ಫ್ಯೂಚರಿಸ್ಟಿಕ್ (Retro-Futuristic) ಥೀಮ್ ಅಳವಡಿಸಿಕೊಂಡಿದೆ. ಲೊಂಪಿಕೊ ಮುಂಭಾಗದಲ್ಲಿ ಅಗಲವಾದ ಎಲ್‌ಇಡಿ ಡಿಆರ್‌ಎಲ್ (LED DRL), ಸೆಂಟ್ರಲ್ ಹೆಡ್‌ಲೈಟ್ ಮತ್ತು ಚೌಕಾಕಾರದ ಟಿಎಫ್‌ಟಿ ಡಿಸ್ಪ್ಲೇ ಹೊಂದಿದೆ. ಇದರ ಇಂಧನ ಟ್ಯಾಂಕ್ ಮಾದರಿಯ ವಿನ್ಯಾಸವು ಸಿಂಗಲ್-ಪೀಸ್‌ನಂತೆ ಕಾಣಲಿದ್ದು, ವಿಶಿಷ್ಟ ಲುಕ್ ನೀಡುತ್ತದೆ.

ಇದನ್ನೂ ಓದಿ: ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ!: ದೇಶದ ಮೊದಲ 100% ಎಥನಾಲ್ ಚಾಲಿತ ‘ಮಾರುತಿ ವ್ಯಾಗನ್ಆರ್ ಫ್ಲೆಕ್ಸ್-ಫ್ಯುಯೆಲ್’ ಕಾರ್ ಬಿಡುಗಡೆ

ಭಾರತದಲ್ಲೇ ಉತ್ಪಾದನೆ, ಅಮೆರಿಕಕ್ಕೆ ರಫ್ತು!:

ಲೀಕ್ ಆಗಿರುವ ಪೇಟೆಂಟ್ ಮಾಹಿತಿ ಪ್ರಕಾರ, ಜೀರೋ ಲೊಂಪಿಕೊ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಹೀರೋ ಮೋಟೋಕಾರ್ಪ್ (Hero MotoCorp) ಸಂಸ್ಥೆಯಿಂದ ತಯಾರಿಸಲ್ಪಟ್ಟು, ಇಲ್ಲಿಂದ ಅಮೆರಿಕ (United States) ಮಾರುಕಟ್ಟೆಗೆ ರಫ್ತಾಗುವ ಸಾಧ್ಯತೆಯಿದೆ. ಇದು 2023 ರಲ್ಲಿ ಆರಂಭವಾದ ಹೀರೋ ಮತ್ತು ಜೀರೋ ಮೋಟೊಸೈಕಲ್ಸ್ ನಡುವಿನ ಬರೋಬ್ಬರಿ 60 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹500 ಕೋಟಿಗೂ ಅಧಿಕ) ಹೂಡಿಕೆಯ ಕಾರ್ಯತಂತ್ರದ ಭಾಗವಾಗಿದೆ. ವೀಡಾ ಬ್ರಾಂಡ್ ಕೇವಲ ಸ್ಕೂಟರ್‌ಗಳಿಗೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಮೋಟಾರ್‌ಸೈಕಲ್ ಮಾರುಕಟ್ಟೆಗೂ ಲಗ್ಗೆ ಇಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು