Breaking News

WPL: ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು

WPL RCB wins against UP Warriors

ನವಿ ಮುಂಬೈನ ಡಿ.ವೈ. ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಐಪಿಎಲ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೯ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟ್ ಮಾಡಿದ ಯುಪಿ, ೨೦ ಓವರ್‌ಗಳಲ್ಲಿ ೫ ವಿಕೆಟ್‌ಗಳನ್ನು ಕಳೆದುಕೊಂಡು ೧೪೩ ರನ್ ಬಾರಿಸಿತು. ೧೪೪ ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, ಕೇವಲ ೧ ವಿಕೆಟ್ ಕಳೆದುಕೊಂಡು ೧೨.೧ ಓವರ್‌ಗಳಲ್ಲಿ ೧೪೫ ರನ್ ಬಾರಿಸಿ ಗೆಲುವಿನ ನಗೆ ಬೀರಿತು.

Advertisement

ಇದನ್ನೂ ಓದಿ:WPL: ಡೆಲ್ಲಿ ವಿರುದ್ಧ ಗುಜರಾತ್‌ಗೆ 4 ರನ್‌ಗಳ ಜಯ

ಆರ್‌ಸಿಬಿ ಪರ ಗ್ರಾಸ್ ಹಾರ್ರಿಸ್ ೮೫ ರನ್‌ಗಳನ್ನು ಸಿಡಿಸುವ ಮೂಲಕ ತಂಡದ ಶೀಘ್ರ ಗೆಲುವಿಗೆ ಕಾರಣರಾದರು. ಇವರು ೫ ಸಿಕ್ಸರ್ ಹಾಗೂ ೧೦ ಬೌಂಡರಿಗಳನ್ನು ಸಿಡಿಸಿದರು. ನಾಯಕಿ ಸ್ಮೃತಿ ಮಂದನಾ ೪೭ ರನ್ (ಅಜೇಯ) ಹಾಗೂ ರಿಚಾ ಘೋಷ್ ೪ ರನ್ (ಅಜೇಯ) ಬಾರಿಸಿದರು.

ಯುಪಿ ಪರ ದೀಪ್ತಿ ಶರ್ಮಾ ೪೫, ಡ್ಯಾಂಡ್ರ ಡೊಟ್ಟಿನ್ ೪೦ ರನ್ ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ರನ್‌ಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್, ನಾಡಿನ್ ಡಿ ಕ್ಲರ್ಕ್ ತಲಾ ೨, ಲಾರೆನ್ ಬೆಲ್ ೧ ವಿಕೆಟ್ ಪಡೆದರು. ಯುಪಿ ಪರ ಶಿಖಾ ಪಾಂಡೆ ೧ ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು