ಮೇಘಾಲಯ ಗಡಿಯಲ್ಲಿ ಬಿಗುವಿನ ವಾತಾವರಣ, ಬಿಎಸ್‌ಎಫ್-ಬಿಜಿಬಿ ಮುಖಾಮುಖಿ!: ‘ನೋ-ಮ್ಯಾನ್ಸ್ ಲ್ಯಾಂಡ್’ನಲ್ಲಿ ಸಿಲುಕಿದ 55 ವರ್ಷದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ!

ಶಿಲ್ಲಾಂಗ್: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಿದ್ದ ವ್ಯಕ್ತಿಯೊಬ್ಬನನ್ನು ಮರಳಿ ಕಳುಹಿಸುವ ಪ್ರಕ್ರಿಯೆಯಲ್ಲಿ ಭಾರತದ ಗಡಿ ಭದ್ರತಾ ಪಡೆ (BSF) ಮತ್ತು ಬಾಂಗ್ಲಾದೇಶದ ಗಡಿ ಕಾವಲು ಪಡೆ (BGB) ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸದ್ಯ ಆ ವ್ಯಕ್ತಿ ಉಭಯ ದೇಶಗಳ ಗಡಿಯ ಮಧ್ಯೆ ಇರುವ ‘ನೋ-ಮ್ಯಾನ್ಸ್ ಲ್ಯಾಂಡ್’ (ಯಾರಿಗೂ ಸೇರದ ಭೂಮಿ) ನಲ್ಲಿ ಸಿಲುಕಿಕೊಂಡಿದ್ದಾನೆ.

ಮೇಘಾಲಯದ ದಕ್ಷಿಣ-ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯ ಮಹೇಂದ್ರಗಂಜ್ ಬಳಿಯ ನಂದಿರ್ಚಾರ್ ಗಡಿ ವಲಯದಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. 55 ವರ್ಷದ ಸತಿ ರಾಜ್‌ಬಂಶಿ ಎಂಬ ಹಿಂದೂ ವ್ಯಕ್ತಿ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಚಾಲ್ನಾ ಗ್ರಾಮದ ನಿವಾಸಿಯಾಗಿದ್ದು, ಗಡಿ ದಾಟಿ ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾಗ ಬಿಎಸ್‌ಎಫ್ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದರು.

ಇಲ್ಲಿದೆ ನೋಡಿ ವಿಡಿಯೋ (ಕೃಪೆ: news hub)

ನಿಯಮಾವಳಿಗಳ ಪ್ರಕಾರ ಬಿಎಸ್‌ಎಫ್ ಅಧಿಕಾರಿಗಳು ಆತನನ್ನು ಬಾಂಗ್ಲಾದೇಶದ ಗಡಿಯೊಳಗೆ ಮರಳಿ ಕಳುಹಿಸಲು (Push back) ಯತ್ನಿಸಿದಾಗ, ಬಾಂಗ್ಲಾದೇಶದ ಬಿಜಿಬಿ ಪಡೆಗಳು ಆತನನ್ನು ಸ್ವೀಕರಿಸಲು ನಿರಾಕರಿಸಿವೆ. “ಈ ವ್ಯಕ್ತಿ ಬಾಂಗ್ಲಾದೇಶದವನಲ್ಲ, ಈತ ಭಾರತದ ನಾಗರಿಕ” ಎಂದು ಬಿಜಿಬಿ ಅಧಿಕಾರಿಗಳು ವಾದಿಸಿದ್ದಾರೆ. ಆದರೆ ಬಿಎಸ್‌ಎಫ್ ಮೂಲಗಳ ಪ್ರಕಾರ, ಆ ವ್ಯಕ್ತಿ ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಸೇರಿದವನಾಗಿದ್ದು, ಅಲ್ಲಿನ ಅಧಿಕಾರಿಗಳೇ ಆತನನ್ನು ಉದ್ದೇಶಪೂರ್ವಕವಾಗಿ ಭಾರತದ ಕಡೆಗೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭಾಷಣ: ಕಾಂಗ್ರೆಸ್‌ನಿಂದ ದೇಶಕ್ಕೆ ವಿಶ್ವಾಸದ್ರೋಹ; ಯುದ್ಧದ ನಡುವೆಯೂ ಭಾರತದ ಜಿಡಿಪಿ ಶೇ. 7.7 ಕ್ಕೆ ಏರಿಕೆ!

ಬಾಂಗ್ಲಾದೇಶದ ಜಮಾಲ್‌ಪುರ ವಲಯದ ಬಿಜಿಬಿ ಪಡೆಗಳು ಹಾಗೂ ಭಾರತದ ಬಿಎಸ್‌ಎಫ್ ಸಿಬ್ಬಂದಿ ಗಡಿರೇಖೆಯ ಮೇಲೆ ನಿಂತು ಅತ್ಯಂತ ಆಕ್ರೋಶದಿಂದ ಪರಸ್ಪರ ವಾದ ಮಂಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಉಭಯ ಪಡೆಗಳ ಕಮಾಂಡರ್ ಮಟ್ಟದ ಧ್ವಜ ಸಭೆ (Flag Meeting) ನಡೆದಿದ್ದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಪರಿಣಾಮವಾಗಿ, ಆ ನಿರಪರಾಧಿ ವ್ಯಕ್ತಿ ಕಳೆದ ಹಲವು ಗಂಟೆಗಳಿಂದ ತೆರೆದ ಆಕಾಶದಡಿ, ಗಡಿಯ ಶೂನ್ಯ ರೇಖೆಯಲ್ಲೇ (Zero Line) ಸಿಲುಕಿ ಪರದಾಡುವಂತಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು