ಪುತ್ತೂರು: ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ನೆಹರುನಗರದ ಕಲ್ಲೇಗದಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಜೂ.29 ರಂದು ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಶಾಖೆ ಉದ್ಘಾಟಿಸಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಅಶ್ವಿನಿ ಕಾಂಪ್ಲೆಕ್ಸ್ ಮಾಲಕ ಕೆ.ರಾಜಾರಾಮ್ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕನಿಷ್ಠ ವೇತನ ಹೆಚ್ಚಳ, ಬೆಂಗಳೂರಿನ ಕಾರ್ಮಿಕರಿಗೆ 23,376 ವೇತನ ಕಡ್ಡಾಯ
ದರ್ಬೆ, ಸುಳ್ಯ, ಎಂಎಸ್ ರಸ್ತೆ, ಬಿಸಿ ರೋಡ್, ಮಂಗಳೂರು, ಶೇಷಾದ್ರಿಪುರಂ, ಬೆಳ್ತಂಗಡಿ, ಶಿರ್ವ, ಜಯನಗರ, ಬೆಳ್ಳಾರೆ, ಕಡಬ, ವಿಟ್ಲ, ವಿರಾಜಪೇಟೆ, ಗುರುಪುರ ಕೈಕಂಬ, ಟಿ ದಾಸರಹಳ್ಳಿ, ಸುರತ್ಕಲ್, ಮಾಚೋಹಳ್ಳಿ, ಮಡಂತ್ಯಾರು, ಮುಡಿಪು, ಕಲ್ಲಡ್ಕದಲ್ಲಿ ಶಾಖೆಗಳನ್ನು ಹೊಂದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


