ದುಬೈನ ಶೇಖ್ ಯಾರಾದರೂ 10-15 ಕೋಟಿ ರೂ ನೀಡಿದ್ರೆ ಮಲಗೋಕೆ ರೆಡಿ ಎಂದ ಅಪೂರ್ವಾ ಮಖೀಜಾ

ಮುಂಬೈ: ಪ್ರಸಿದ್ಧ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಪೂರ್ವಾ ಮಖೀಜಾ (Apoorva Mukhija) ಅವರ ಹಳೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರಿ ವಿವಾದ ಹಾಗೂ ಟ್ರೋಲ್‌ಗಳಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಆಕೆ ನೀಡಿರುವ ವಿಲಕ್ಷಣ ಹೇಳಿಕೆಯನ್ನು ಹಿಡಿದುಕೊಂಡು ನೆಟ್ಟಿಗರು ಹಾಗೂ ಟ್ರೋಲರ್‌ಗಳು ಆಕೆಯ ಇನ್‌ಸ್ಟಾಗ್ರಾಮ್ ಖಾತೆಯ ಕಮೆಂಟ್ ಸೆಕ್ಷನ್‌ನಲ್ಲಿ ಅತ್ಯಂತ ಕೆಟ್ಟದಾಗಿ ಲೇವಡಿ ಮಾಡಲು ಆರಂಭಿಸಿದ್ದಾರೆ.

ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ಹಳೆಯ ವಿಡಿಯೋ ಕ್ಲಿಪ್‌ನಲ್ಲಿ ಅಪೂರ್ವಾ ಮಖೀಜಾ ಅವರು, “ನಾನು ಕೇವಲ 2 ರೂಪಾಯಿಗಾಗಿ ಯಾರೊಂದಿಗೂ ಮಲಗುವುದಿಲ್ಲ. ಆದರೆ ದುಬೈನ ಶೇಖ್ ಯಾರಾದರೂ ನನ್ನ ಮೇಲೆ 10-15 ಕೋಟಿ ರೂಪಾಯಿ ಎಸೆದರೆ, ನಾನು ಬಹುಶಃ ಆ ಬಗ್ಗೆ ಯೋಚಿಸಬಹುದು” ಎಂದು ಮುಕ್ತವಾಗಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಬರ್ತಿದ್ದಾರೆ ರಿಷಬ್ ಶೆಟ್ಟಿ!; ‘ಕಾಂತಾರ’ ಬೆನ್ನಲ್ಲೇ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ 2 ಭಾಗಗಳಲ್ಲಿ ರಿಲೀಸ್!

ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಪೂರ್ವಾ ಅವರ ಇನ್‌ಸ್ಟಾಗ್ರಾಮ್ ಖಾತೆಯ ಮೇಲೆ ಮುಗಿಬಿದ್ದಿದ್ದಾರೆ. ಆಕೆಯ ಪೋಸ್ಟ್‌ಗಳ ಅಡಿಯಲ್ಲಿ ಅಸಭ್ಯವಾಗಿ ಕಮೆಂಟ್ ಮಾಡಲು ಹಾಗೂ ಇನ್‌ಬಾಕ್ಸ್‌ಗೆ ಮೆಸೇಜ್ ಕಳುಹಿಸಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋದಲ್ಲಿ ಆಕೆ ಕೋಟಿಗಳ ಲೆಕ್ಕ ಇಟ್ಟಿದ್ದನ್ನು ಟ್ರೋಲ್ ಮಾಡಿರುವ ಹಲವರು, ಆಕೆಗೆ ವಿಭಿನ್ನ ರೇಟ್‌ಗಳನ್ನು ಆಫರ್ ಮಾಡುವ ಮೂಲಕ ಸಾರ್ವಜನಿಕವಾಗಿ ಅವಮಾನಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಶಾಂತ್ ಎಂಬ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ “ನಿನ್ನನ್ನು 12 ಸಾವಿರ ರೂಪಾಯಿಗೆ ಕೊಂಡುಕೊಳ್ಳುತ್ತೇನೆ” ಎಂದು ಅತ್ಯಂತ ಆಕ್ಷೇಪಾರ್ಹ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದು, ಇದು ಆನ್‌ಲೈನ್‌ನಲ್ಲಿ ಇನ್‌ಫ್ಲುಯೆನ್ಸರ್‌ಗಳು ಎದುರಿಸುತ್ತಿರುವ ಸೈಬರ್ ಬುಲ್ಲಿಂಗ್ ಮತ್ತು ಕಿರುಕುಳದ ತೀವ್ರತೆಯನ್ನು ಎತ್ತಿ ತೋರಿಸಿದೆ. ಸದ್ಯ ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು