ಬೆಂಗಳೂರು: ‘ಕಾಂತಾರ’ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಬ್ಯುಸಿಯಾಗಿರುವ ನ್ಯಾಷನಲ್ ಅವಾರ್ಡ್ ವಿನ್ನರ್ ರಿಷಬ್ ಶೆಟ್ಟಿ (Rishab Shetty) ಅವರ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರದ ಬಗ್ಗೆ ಒಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಮರಾಠ ಸಾಮ್ರಾಜ್ಯದ ವೀರ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನಾಧಾರಿತ ಚಿತ್ರ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಸಿನಿಮಾ ಈಗ ಎರಡು ಭಾಗಗಳ ದೃಶ್ಯ ಕಾವ್ಯವಾಗಿ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಹೌದು, ಭಾರತೀಯ ಇತಿಹಾಸದ ಶ್ರೇಷ್ಠ ರಣಧೀರನ ಕಥೆಯನ್ನು ಕೇವಲ ಮೂರು ಗಂಟೆಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಚಿತ್ರತಂಡ ಈಗ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ (Two Parts) ತೆರೆಗೆ ತರಲು ನಿರ್ಧರಿಸಿದೆ. ಮೊದಲ ಭಾಗದಲ್ಲಿ ಶಿವಾಜಿ ಮಹಾರಾಜರ ಬಾಲ್ಯ, ಮಾವಳಿ ಯೋಧರ ಸಂಘಟನೆ ಹಾಗೂ ಸ್ವರಾಜ್ಯದ ಕನಸಿನ ಬಿತ್ತನೆ ಇರಲಿದ್ದು, ಎರಡನೇ ಭಾಗದಲ್ಲಿ ಅವರ ಭವ್ಯ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿ ಮತ್ತು ರಣರಂಗದ ರೋಚಕ ಯುದ್ಧಗಳ ದೃಶ್ಯಾವಳಿಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಬಿರುಕು? ಇನ್‌ಸ್ಟಾಗ್ರಾಂನಲ್ಲಿ ;ಅನ್‌ಫಾಲೋ; ವದಂತಿ; ಅಸಲಿ ವಿಷಯವೇನು?
ಕಾಂತಾರ’ ಸಿನಿಮಾದ ನಟನೆ ಮತ್ತು ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರಿಷಬ್ ಶೆಟ್ಟಿ, ಶಿವಾಜಿ ಮಹಾರಾಜರ ಪಾತ್ರಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕುದುರೆ ಸವಾರಿ, ಕತ್ತಿ ವರಸೆ ಹಾಗೂ ಮರಾಠಿ ಭಾಷೆಯ ಶೈಲಿಯ ಬಗ್ಗೆ ಅವರು ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಈ ಚಿತ್ರವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅದ್ದೂರಿ ಬಜೆಟ್‌ನಲ್ಲಿ ಮೂಡಿಬರಲಿದ್ದು, ಭಾರತೀಯ ಚಿತ್ರರಂಗದಲ್ಲೇ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆಯಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


