ಹೈದರಾಬಾದ್: ನಟಿ ಸಮಂತಾ (Samantha) ಅವರ ಜೀವನದಲ್ಲಿ ಈಗ ಸಂಭ್ರಮದ ಅಲೆ ಎದ್ದಿದೆ. ಒಂದೆಡೆ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಮತ್ತೊಂದೆಡೆ ಅವರು ತಾಯಿ ಆಗುತ್ತಿರುವ ಸಿಹಿ ಸುದ್ದಿ ಹೊರಬಿದ್ದಿದೆ. ಈ ಮೂಲಕ ಸಮಂತಾ ಅವರ ವೈಯಕ್ತಿಕ ಹಾಗೂ ವೃತ್ತಿಜೀವನ ಎರಡರಲ್ಲೂ ಏಕಕಾಲಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.
ದೊಡ್ಡ ಮಟ್ಟದ ಹೈಪ್ ಸೃಷ್ಟಿ ಮಾಡಿದ್ದ ‘ಮಾ ಇಂಟಿ ಬಂಗಾರಂ’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಈ ಚಿತ್ರ ಜಾಗತಿಕವಾಗಿ 40 ಪ್ಲಸ್ ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಸಮಂತಾ ಅವರ ಸ್ಟಾರ್ ವ್ಯಾಲ್ಯೂ ಮತ್ತು ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ದಿಗಂತ್ (Diganth) ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ನಡೆದ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ (Success Meet) ಸಮಂತಾ ಅವರ ಲುಕ್ ನೋಡಿ ನೆಟ್ಟಿಗರು ಅವರು ಗರ್ಭಿಣಿಯಾಗಿದ್ದಾರೆ ಎಂದು ಊಹಿಸಿದ್ದರು. ಈಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಸಮಂತಾ ಅವರ ಆಪ್ತ ಗೆಳತಿ ಹಾಗೂ ‘ಮಾ ಇಂಟಿ ಬಂಗಾರಂ’ ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ (Nandini Reddy) ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಂದಿನಿ, “ಅವಳ ಪ್ರೆಗ್ನೆನ್ಸಿ ಅತ್ಯಂತ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಮಾ ಇಂಟಿ ಬಂಗಾರಂ ದೊಡ್ಡ ಯುಶಸ್ಸು ಕಂಡಿರುವ ಬೆನ್ನಲ್ಲೇ ಈ ಗುಡ್ ನ್ಯೂಸ್ ಸಿಕ್ಕಿರುವುದು ಖುಷಿ ತಂದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಕಿನಿ ಧರಿಸಿ ಫೋಟೋ ಹಾಕಲು ಹೆದರುವ ಭಾರತೀಯ ಮಹಿಳೆಯರಿಗೆ ಇನ್‌ಫ್ಲುಯೆನ್ಸರ್ ರೀಟಾ ಖಡಕ್ ಸಂದೇಶ
ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಖ್ಯಾತ ನಿರ್ದೇಶಕ ರಾಜ್ ನಿಧಿಮೋರು (Raj Nidimoru) ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಕಳೆದ ವರ್ಷ ಡಿಸೆಂಬರ್ 1ರಂದು ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಇವರ ಮದುವೆ ಸರಳವಾಗಿ ನೆರವೇರಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸಮಂತಾ ತಾಯಿ ಆಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸದ್ಯದಲ್ಲೇ ಸಮಂತಾ ಕಡೆಯಿಂದಲೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

