Breaking News

ಬಿಕಿನಿ ಧರಿಸಿ ಫೋಟೋ ಹಾಕಲು ಹೆದರುವ ಭಾರತೀಯ ಮಹಿಳೆಯರಿಗೆ ಇನ್‌ಫ್ಲುಯೆನ್ಸರ್ ರೀಟಾ ಖಡಕ್ ಸಂದೇಶ

ಮುಂಬೈ: ವಿದೇಶಿ ಬೀಚ್‌ಗಳಿಗೆ ಹೋದಾಗ ಭಾರತೀಯ ಮಹಿಳೆಯರು ಬಿಕಿನಿ ಅಥವಾ ಈಜುಡುಗೆ ಧರಿಸಿ ಸಾವಿರಾರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ, ಆದರೆ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಮಾತ್ರ ನೂರು ಬಾರಿ ಯೋಚಿಸುತ್ತಾರೆ. “ಸಮಾಜ ಏನು ಅಂದುಕೊಂಡೀತು? ಅಕ್ಕಪಕ್ಕದ ಮನೆಯವರು ನೋಡಿದರೆ ಚಾರಿತ್ರ್ಯದ ಬಗ್ಗೆ ಮಾತನಾಡಬಹುದೇ?” ಎಂಬ ಭಯವೇ ಇದಕ್ಕೆ ಕಾರಣ. ಇದೇ ಸಾಲಿಗೆ ಸೇರಿದ ಟ್ರಾವೆಲ್ ಇನ್‌ಫ್ಲುಯೆನ್ಸರ್ ರೀಟಾ (Rita) ಈಗ ತಮ್ಮ ಸಾಮಾಜಿಕ ಹದ ಹದಗೊಳಿಸುವಿಕೆಯನ್ನು (Conditioning) ಮುರಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಮತ್ತು ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರೀಟಾ, “ಭಾರತದಲ್ಲಿ ಕಳೆದ 24 ವರ್ಷಗಳ ಜೀವನ ನನಗೆ ಬಟ್ಟೆ ಧರಿಸುವಾಗ ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಕಲಿಸಿದೆ” ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು, “ಬಿಕಿನಿ ಧರಿಸಿದ ಫೋಟೋ ಹಾಕಿದರೆ ಏನಾಗಬಹುದು ಎಂದು ನಾನು ತುಂಬಾ ದಿನಗಳಿಂದ ಯೋಚಿಸುತ್ತಿದ್ದೆ. ಆದರೆ ನಂತರ ನನಗೆ ‘ದೇಶಕ್ಕೆ ತಕ್ಕ ವೇಷ’ ಎಂಬ ಮಾತು ನೆನಪಾಯಿತು. ನಾನು ಬಿಕಿನಿಯನ್ನು ಫರೀದಾಬಾದ್‌ನಲ್ಲಿ ಧರಿಸಲು ಸಾಧ್ಯವಿಲ್ಲ, ಬೀಚ್‌ನಲ್ಲಿ ಮಾತ್ರ ಧರಿಸಬಹುದು. ಬೀಚ್‌ನಲ್ಲಿ ಪೂರ್ತಿ ಬಟ್ಟೆ ಹಾಕಿಕೊಂಡು ನೀರಿಗೆ ಇಳಿಯಲು ಸಾಧ್ಯವಿಲ್ಲ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಇಲ್ಲಿದೆ ನೋಡಿ ಇನ್ಸ್ಟಾ ಪೋಸ್ಟ್​:


ಜನರು ಏನು ಕಾಮೆಂಟ್ ಮಾಡುತ್ತಾರೆಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ವಿಡಿಯೋ ಪೋಸ್ಟ್ ಮಾಡುವುದಾಗಿ ಧೈರ್ಯದಿಂದ ಹೇಳಿರುವ ರೀಟಾ, “ಭಾರತೀಯ ಅಂಕಲ್‌ಗಳು ಕೇವಲ ಶಾರ್ಟ್ಸ್ ಧರಿಸಿ, ಸರಿಯಾದ ಈಜುಡುಗೆಯೂ ಇಲ್ಲದೆ ಈಜುಕೊಳ, ಸಮುದ್ರ, ಸಾಗರಗಳಿಗೆ ಧುಮುಕುತ್ತಾರೆ. ಆದರೆ ಮಹಿಳೆಯರಿಗೇಕೆ ಇಷ್ಟೊಂದು ನಿರ್ಬಂಧ?” ಎಂದು ನೇರವಾಗಿ ಕೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ತಾವು ಈ ಹಿಂದೆ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ಬೀಚ್‌ಗಳಿಗೆ ಹೋದಾಗಲೂ ಬಿಕಿನಿ ಧರಿಸಿದ್ದಾಗಿ, ಆದರೆ ಅಲ್ಲಿ ಯಾರೂ ತಮ್ಮನ್ನು ವಿಚಿತ್ರವಾಗಿ ನೋಡದ ಕಾರಣ ಸಂಪೂರ್ಣ ಸಹಜ ಭಾವನೆ ಮೂಡಿತು ಎಂದಿದ್ದಾರೆ. “ನಮ್ಮ ದೇಶದಲ್ಲಿ ನೀವು ಪೂರ್ತಿ ಬಟ್ಟೆ ಧರಿಸಿದ್ದರೂ ಜನರು ನಿಮ್ಮನ್ನು ದಿಟ್ಟಿಸಿ ನೋಡುತ್ತಾರೆ, ಜಡ್ಜ್ ಮಾಡುತ್ತಾರೆ. ಆದರೆ ವಿದೇಶದ ಬೀಚ್‌ಗಳಲ್ಲಿ ಜನರು ತಮ್ಮ ಪಾಡಿಗೆ ತಾವು ಈಜುತ್ತಾ, ಓದುತ್ತಾ ಎಂಜಾಯ್ ಮಾಡುತ್ತಾರೆ. ನಾವು ಅನುಭವಿಸುವ ಅರ್ಧದಷ್ಟು ಒತ್ತಡವು ಸಮಾಜದ ಭಯದಿಂದ ನಮ್ಮ ಮನಸ್ಸಿನಲ್ಲಿ ನಾವೇ ಸೃಷ್ಟಿಸಿಕೊಂಡಿರುವುದು” ಎಂದು ರೀಟಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರುಕ್ಮಿಣಿ ವಸಂತ್ ಡೀಪ್‌ಫೇಕ್ ಪ್ರಕರಣ: 20 ಲಕ್ಷ ವೇತನವಿದ್ದರೂ ಮನರಂಜನೆಗಾಗಿ ವಿಡಿಯೋಗಳ ಸೃಷ್ಟಿಸುತ್ತಿದ್ದ ಆರೋಪಿಗಳು 

“ಇದು ಕೇವಲ ಬಿಕಿನಿ ಬಗ್ಗೆ ಅಲ್ಲ. ನಮ್ಮ ಸ್ವಂತ ಚರ್ಮದಲ್ಲಿ (ದೇಹದಲ್ಲಿ) ನಾವು ಕಂಫರ್ಟಬಲ್ ಆಗಿ ಇರುವುದು ಮತ್ತು ಯಾವುದೇ ಭಯವಿಲ್ಲದೆ ಜೀವನದ ಅನುಭವವನ್ನು ಆನಂದಿಸುವುದರ ಬಗ್ಗೆ ಆಗಿದೆ” ಎಂದು ರೀಟಾ ನೀಡಿರುವ ಸಂದೇಶಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅನೇಕ ಮಹಿಳೆಯರು ರೀಟಾ ಅವರ ಧೈರ್ಯವನ್ನು ಶ್ಲಾಘಿಸಿದ್ದು, “ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಮತ್ತು ಯಾರೂ ದಿಟ್ಟಿಸಿ ನೋಡುವುದಿಲ್ಲ” ಎಂದು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *