ಆನ್‌ಲೈನ್ ವಂಚನೆಗೆ ಒಳಗಾದವರಿಗೆ ಆರ್‌ಬಿಐ ಭರ್ಜರಿ ರಿಲೀಫ್!: ಇನ್ಮುಂದೆ ನಷ್ಟದ ಶೇ. 85 ರಷ್ಟು ಹಣ ವಾಪಸ್; ಹೊಸ ರೂಲ್ಸ್ ಜಾರಿ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನ್‌ಲೈನ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳಿಗೆ ಬ್ರೇಕ್ ಹಾಕಲು ಮತ್ತು ಗ್ರಾಹಕರ ಹಿತರಕ್ಷಣೆ ಕಾಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ಡಿಜಿಟಲ್ ವಂಚನೆಗಳಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು (Customer Liability) ಮಿತಿಗೊಳಿಸಲು ತನ್ನ ನಿಯಮಾವಳಿಗಳನ್ನು ವಿಸ್ತರಿಸಿರುವ ಆರ್‌ಬಿಐ, ಸಣ್ಣ ಮೊತ್ತದ ಡಿಜಿಟಲ್ ವಂಚನೆಗೆ ಒಳಗಾದವರಿಗಾಗಿ ವಿಶೇಷ ಪರಿಹಾರ ವ್ಯವಸ್ಥೆಯನ್ನು ಪರಿಚಯಿಸಿದೆ.

ಇದರ ಅಡಿಯಲ್ಲಿ ಸೈಬರ್ ವಂಚಕರು ಬ್ಯಾಂಕ್ ಅಧಿಕಾರಿಗಳಂತೆ ಅಥವಾ ಅಧಿಕೃತ ವ್ಯಕ್ತಿಗಳಂತೆ ನಟಿಸಿ ಗ್ರಾಹಕರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ (Scams) ಪ್ರಕರಣಗಳನ್ನು ಸಹ ಈ ಹೊಸ ನಿಯಮಗಳ ವ್ಯಾಪ್ತಿಗೆ ತರಲಾಗಿದೆ.

Advertisement

ಸಣ್ಣ ಮೊತ್ತದ ವಂಚನೆಗೆ ಸಿಗಲಿದೆ ಶೇ. 85 ರಷ್ಟು ಪರಿಹಾರ!

ಆರ್‌ಬಿಐ ಪರಿಚಯಿಸಿರುವ ಹೊಸ ನಿಯಮದ ಪ್ರಕಾರ, ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ವಂಚನೆಯಿಂದಾಗಿ 50,000 ರೂಪಾಯಿಗಳವರೆಗೆ ನಷ್ಟ ಅನುಭವಿಸಿದ ನೈಜ ಸಂತ್ರಸ್ತರು (Bona fide victims) ಈ ವಿಶೇಷ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇಂತಹ ಸಂತ್ರಸ್ತರು ತಾವು ಕಳೆದುಕೊಂಡ ಒಟ್ಟು ನಷ್ಟದ ಶೇ. 85 ರಷ್ಟು ಹಣವನ್ನು ಪರಿಹಾರದ ರೂಪದಲ್ಲಿ ಮರಳಿ ಪಡೆಯಬಹುದು.

ಆದರೆ, ಈ ವಿಶೇಷ ವ್ಯವಸ್ಥೆಯಡಿ ಒಬ್ಬ ಗ್ರಾಹಕರಿಗೆ ಸಿಗುವ ಗರಿಷ್ಠ ಪರಿಹಾರದ ಮಿತಿಯನ್ನು 25,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ:ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್!: ಸತತವಾಗಿ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ಜೀವನದಲ್ಲಿ ಒಂದೇ ಬಾರಿ ಅವಕಾಶ:

ಬ್ಯಾಂಕಿಂಗ್ ವ್ಯವಸ್ಥೆಯ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರ್‌ಬಿಐ ಈ ನಿಯಮಕ್ಕೆ ಒಂದು ಕಟ್ಟುನಿಟ್ಟಿನ ಶರತ್ತನ್ನು ವಿಧಿಸಿದೆ. ಈ ವಿಶೇಷ ಪರಿಹಾರ ಯೋಜನೆಯ ಲಾಭವನ್ನು ಒಬ್ಬ ಗ್ರಾಹಕರು ತಮ್ಮ ಇಡೀ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿರುತ್ತದೆ. ಆನ್‌ಲೈನ್ ವಂಚನೆಗೆ ಒಳಗಾದ ತಕ್ಷಣ ಗ್ರಾಹಕರು ಬ್ಯಾಂಕ್ ಹಾಗೂ ಸೈಬರ್ ಕ್ರೈಂ ವಿಭಾಗಕ್ಕೆ ಅಧಿಕೃತ ದೂರು ನೀಡುವುದು ಕಡ್ಡಾಯವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *