Breaking News

WPL ಇತಿಹಾಸದಲ್ಲೇ ಪ್ರಮುಖ ಸಾಧನೆ ಮಾಡಿದ ಹರ್ಮನ್‌ಪ್ರೀತ್‌ ಕೌರ್‌

Harmanpreet Kaur achieves a major feat in WPL history

ನವಿ ಮುಂಬೈಇಲ್ಲಿ ನಡೆದ ಗುಜರಾಜ್‌ ಜೈಂಟ್ಸ್‌ ವಿರುದ್ಧದ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅವರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಹರ್ಮನ್‌ಪ್ರೀತ್ ಕೌರ್ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ೧೦೦೦ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗುಜರಾತ್‌ ನೀಡಿದ 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆತಿಥೇಯರು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದರು. ಆದರೆ ಹರ್ಮನ್‌ಪ್ರೀತ್ ಮತ್ತು ಡಿವೈ ಪಾಟೀಲ್ ಅವರ ಜೊತೆಯಾಟದ ನಂತರ ತಂಡುವ ಲಯಕ್ಕೆ ಮರಳಿತು. ಅಂತಿಮವಾಗಿ 7 ವಿಕೆಟ್‌ಗಳ ಗೆಲುವು ದಾಖಲಿಸಿತು.

Advertisement

ಇದನ್ನೂ ಓದಿ: WPL: ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಗೆಲುವು

ಹರ್ಮನ್‌ಪ್ರೀತ್ 43 ಎಸೆತಗಳಲ್ಲಿ 71 ರನ್ (ಅಜೇಯ) ಗಳಿಸಿದರು ಮತ್ತು ಅದರೊಂದಿಗೆ, WPL ಇತಿಹಾಸದಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಕ್ರಿಕೆಟ್‌ ಆಟಗಾರ್ತಿ ಎಂದೆನಿಸಿಕೊಂಡರು. ಒಟ್ಟಾರೆಯಾಗಿ, ನ್ಯಾಟ್ ಸಿವರ್-ಬ್ರಂಟ್ ನಂತರ ಈ ಮೈಲಿಗಲ್ಲು ದಾಖಲಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸ್ತುತ UP ವಾರಿಯರ್ಜ್ ನಾಯಕಿ ಮೆಗ್ ಲ್ಯಾನಿಂಗ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

WPL ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳು

ಡಬ್ಲ್ಯುಪಿಎಲ್‌ ಇತಿಹಾಸದಲ್ಲಿ ಅತ್ಯದಿಕ ರನ್‌ಗಳನ್ನು ಬಾರಿಸಿದವರ ಸಾಲಿನಲ್ಲಿ ನ್ಯಾಟ್‌ ಸಿವರ್‌ ಬ್ರಂಟ್‌ ಅಗ್ರಸ್ಥಾನದಲ್ಲಿದ್ದಾರೆ. ಇವರು 1101 ರನ್‌ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಹರ್ಮನ್‌ಪ್ರೀತ್‌ ಕೌರ್‌ (1016‌ ರನ್), ಮೂರನೇ ಸ್ಥಾನದಲ್ಲಿ ಮೆಗ್‌ ಲ್ಯಾನಿಂಗ್‌ (996 ರನ್), ನಂತರದ ಸ್ಥಾನದಲ್ಲಿ ಎಲಿಸ್‌ ಪೆರ್ರಿ (972 ರನ್‌) ಹಾಗೂ ಶಫಾಲಿ ವರ್ಮಾ (887 ರನ್‌) ಇದ್ದಾರೆ.

ಮುಂಬೈ ತಂಡಕ್ಕೆ ಅತಿ ದೊಡ್ಡ ಗೆಲುವು

ಗುಜರಾತ್ ವಿರುದ್ಧ ಮುಂಬೈ ತಂಡವು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ತಮ್ಮ ಅತ್ಯಧಿಕ ಯಶಸ್ವಿ ಚೇಸಿಂಗ್ ದಾಖಲೆಯನ್ನು ದಾಖಲಿಸಿತು. ಇದು ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಚೇಸಿಂಗ್ ಆಗಿದ್ದು, ಆರ್‌ಸಿಬಿ ಅಗ್ರ ಸ್ಥಾನವನ್ನು ಹೊಂದಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು