ಕರ್ನಾಟಕದ ಹಲವು ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್!; ಮಂಗಳೂರು, ಚಾಮರಾಜನಗರ ಹಾಗೂ ಹಾವೇರಿಯಲ್ಲಿ ಆತಂಕದ ವಾತಾವರಣ

ಮಂಗಳೂರು: ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ ಇಮೇಲ್‌ಗಳು (Bomb Threat Emails) ಬಂದಿದ್ದು, ಸೋಮವಾರ ಕೋರ್ಟ್ ಆವರಣಗಳಲ್ಲಿ ಭಾರಿ ಆತಂಕ ಮತ್ತು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಂಗಳೂರು, ಚಾಮರಾಜನಗರ ಮತ್ತು ಹಾವೇರಿ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲಾ ನ್ಯಾಯಾಲಯಗಳಿಗೆ ಈ ಅನಾಮಧೇಯ ಬೆದರಿಕೆ ಸಂದೇಶಗಳು ಬಂದಿವೆ.

ಚಾಮರಾಜನಗರದಲ್ಲಿ ಒಂದೇ ವಾರದಲ್ಲಿ ಮೂರನೇ ಬೆದರಿಕೆ!:

Advertisement

ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಇಮೇಲ್ ಬಂದಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಬಂದಿರುವ ಮೂರನೇ ಬೆದರಿಕೆ ಸಂದೇಶ ಇದಾಗಿದೆ. ವರದಿಗಳ ಪ್ರಕಾರ, ಇದಕ್ಕೂ ಮುನ್ನ ಬಂದಿದ್ದ ಎರಡು ಇಮೇಲ್‌ಗಳು ಒಂದೇ ವಿಳಾಸದಿಂದ ಬಂದಿದ್ದರೆ, ಇತ್ತೀಚಿನ ಮೂರನೇ ಸಂದೇಶವು ಬೇರೆ ಇಮೇಲ್ ಐಡಿಯಿಂದ ಬಂದಿದೆ. ಮಾಹಿತಿ ಸಿಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಹಾಗೂ ಶ್ವಾನ ದಳದೊಂದಿಗೆ ಕೋರ್ಟ್ ಆವರಣದಲ್ಲಿ ಜಂಟಿಯಾಗಿ ಹೈ ಅಲರ್ಟ್ ತಪಾಸಣೆ ನಡೆಸಿದರು.

ಇದನ್ನೂ ಓದಿ:ಒಂದೇ ವಾರದಲ್ಲಿ 3ನೇ ಬಾರಿ ಉಡುಪಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್!; ಪೊಲೀಸರಿಂದ ಬಿಗಿ ತಪಾಸಣೆ; ತನಿಖೆಯಲ್ಲಿ ಬಯಲಾಯ್ತು ಹುಸಿ ಬೆದರಿಕೆ!

ಮಂಗಳೂರಿನಲ್ಲೂ  ಬಾಂಬ್ ಭೀತಿ: ತಪಾಸಣೆ ತೀವ್ರ

ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೂ ಇಮೇಲ್ ಮೂಲಕ ಬಾಂಬ್ ಇಡು ವಂಚನೆಯ ಸಂದೇಶ ಬಂದಿದೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಮಂಗಳೂರು ನಗರ ಪೊಲೀಸರು ಹಾಗೂ ಶ್ವಾನ ದಳದ ಸಿಬ್ಬಂದಿ ಇಡೀ ಕೋರ್ಟ್ ಕಟ್ಟಡವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದರು. ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದು ಕೇವಲ ಹುಸಿ ಬಾಂಬ್ ಬೆದರಿಕೆ (Hoax Threat) ಎಂದು ಪೊಲೀಸರು ಖಚಿತಪಡಿಸಿದ್ದು, ವಕೀಲರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *