ಹೆಲ್ಸಿಂಕಿ: ಇಂದಿನ ರೀಲ್ಸ್ ಜಗತ್ತಿನಲ್ಲಿ ಪ್ರೇಮಿಗಳನ್ನು ನೋಡಿ “ನಮಗಿನ್ನೂ ಯಾರೂ ಸಿಗಲಿಲ್ಲವಲ್ಲಾ” ಎಂದು ಕೊರಗುವ ಸಿಂಗಲ್ಸ್ಗೆ ಫಿನ್ಲ್ಯಾಂಡ್ ದೇಶದ ದಿನಸಿ ಅಂಗಡಿಗಳು ಭರ್ಜರಿ ಆಫರ್ ನೀಡಿವೆ. ಹೌದು, ಈಗ ಪ್ರೀತಿಯನ್ನು ಹುಡುಕಲು ಯಾವುದೇ ಪಬ್, ಕ್ಲಬ್ಗಳಿಗೆ ಅಲೆಯಬೇಕಾಗಿಲ್ಲ ಅಥವಾ ದುಬಾರಿ ಡೇಟಿಂಗ್ ಆ್ಯಪ್ಗಳಿಗೆ ಹಣ ಸುರಿಯಬೇಕಾಗಿಲ್ಲ! ಬದಲಿಗೆ ಹತ್ತಿರದ ಸೂಪರ್ ಮಾರ್ಕೆಟ್ಗೆ ಹೋಗಿ ಒಂದು ‘ಗುಲಾಬಿ ಬಣ್ಣದ ಬಾಸ್ಕೆಟ್’ (Pink Basket) ಹಿಡಿದು ಶಾಪಿಂಗ್ ಮಾಡಿದರೆ ಸಾಕು, ನಿಮ್ಮ ಒಂಟಿತನಕ್ಕೆ ಬ್ರೇಕ್ ಬೀಳುವುದು ಪಕ್ಕಾ.
ಫಿನ್ಲ್ಯಾಂಡ್ನ ಅತಿ ದೊಡ್ಡ ಸೂಪರ್ ಮಾರ್ಕೆಟ್ ಸರಪಳಿಗಳಾದ ‘ಕೆ. ಸೂಪರ್ ಮಾರ್ಕೆಟ್’ ಮತ್ತು ‘ಎಸ್ ಸೂಪರ್ ಮಾರ್ಕೆಟ್’ ತಮ್ಮ ಮಳಿಗೆಗಳಲ್ಲಿ ಈ ವಿಶಿಷ್ಟ ಸೌಲಭ್ಯವನ್ನು ಪರಿಚಯಿಸಿ ಭಾರಿ ಪ್ರಸಿದ್ಧಿ ಪಡೆದಿವೆ.
ಇಲ್ಲಿದೆ ನೋಡಿಮ ವಿಡಿಯೋ:
View this post on Instagram
ಏನಿದು ‘ಪಿಂಕ್ ಬಾಸ್ಕೆಟ್’ ಮ್ಯಾಜಿಕ್?
ಸಾಮಾನ್ಯವಾಗಿ ಸೂಪರ್ ಮಾರ್ಕೆಟ್ಗಳಲ್ಲಿ ಕಪ್ಪು, ನೀಲಿ ಅಥವಾ ಬೂದು ಬಣ್ಣದ ಶಾಪಿಂಗ್ ಬುಟ್ಟಿಗಳಿರುತ್ತವೆ. ಆದರೆ ಅವುಗಳ ಪಕ್ಕದಲ್ಲೇ ಈಗ ಪ್ರಕಾಶಮಾನವಾದ ‘ಗುಲಾಬಿ ಬಣ್ಣದ ಬುಟ್ಟಿಗಳನ್ನು’ ವಿಶೇಷವಾಗಿ ಇಡಲಾಗಿದೆ. ಯಾರೆಲ್ಲಾ ಪ್ರಸ್ತುತ ಸಿಂಗಲ್ ಆಗಿದ್ದು, ಹೊಸ ಸಂಗಾತಿಯನ್ನು ಭೇಟಿಯಾಗಲು ಹಾಗೂ ಮಾತನಾಡಿಸಲು ಮುಕ್ತವಾಗಿದ್ದಾರೋ, ಅವರು ಮಾತ್ರ ಅಂಗಡಿಯೊಳಗೆ ಹೋಗುವಾಗ ಈ ಪಿಂಕ್ ಬಾಸ್ಕೆಟ್ ಅನ್ನು ಆಯ್ದುಕೊಳ್ಳುತ್ತಾರೆ.
ಈ ಗುಲಾಬಿ ಬಣ್ಣವು ಕಿರಾಣಿ ಅಂಗಡಿಯ ಕಾರಿಡಾರ್ಗಳಲ್ಲಿ ಓಡಾಡುವ ಇತರ ಸಿಂಗಲ್ಸ್ಗೆ “ನಾನು ಸಿಂಗಲ್ ಇದ್ದೇನೆ, ನಿಮ್ಮೊಂದಿಗೆ ಮಾತನಾಡಲು ಸಿದ್ಧನಿದ್ದೇನೆ” ಎಂದು ಸದ್ದಿಲ್ಲದೆ ತಿಳಿಸುವ ಸೂಕ್ಷ್ಮ ಸಂಕೇತವಾಗಿದೆ.ಅಂಗಡಿಯಲ್ಲಿ ತರಕಾರಿ ಅಥವಾ ದಿನಸಿ ಖರೀದಿಸುತ್ತಾ ಇಬ್ಬರು ಪಿಂಕ್ ಬಾಸ್ಕೆಟ್ ಹೊಂದಿರುವ ವ್ಯಕ್ತಿಗಳು ಎದುರಾದಾಗ, ಯಾವುದೇ ಮುಜುಗರವಿಲ್ಲದೆ ನೇರವಾಗಿ ಮಾತುಕತೆ ಆರಂಭಿಸಬಹುದು. ಪರಸ್ಪರರ ಆಲೋಚನೆಗಳು ಇಷ್ಟವಾದರೆ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಪ್ರೇಮಕಥೆ ಮುಂದುವರಿಸಬಹುದು. ಈಗಾಗಲೇ ಹತ್ತಾರು ಜನ ಈ ವಿಶಿಷ್ಟ ಐಡಿಯಾ ಮೂಲಕ ತಮ್ಮ ‘ಸೋಲ್ ಮೇಟ್’ (Soulmate) ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಪೂಜೆ, ಅಭಿಷೇಕ; ವೈರಲ್ ವಿಡಿಯೋ ಬೆನ್ನಲ್ಲೇ ಸತ್ಯ ಬಿಚ್ಚಿಟ್ಟ ಭಾರತೀಯ ರೈಲ್ವೆ
ಸಾಮಾಜಿಕ ತಾಣಗಳಲ್ಲಿ ಈ ವಿಶಿಷ್ಟ ಮಾರ್ಕೆಟಿಂಗ್ ಮತ್ತು ಡೇಟಿಂಗ್ ಐಡಿಯಾ ಭಾರಿ ವೈರಲ್ ಆಗುತ್ತಿದ್ದು, “ನಮ್ಮ ದೇಶದಲ್ಲೂ ಇಂತಹ ವ್ಯವಸ್ಥೆ ಬರಲಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

