ಬ್ರೆಜಿಲ್: ಬ್ರೆಜಿಲ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಕಾನೂನು ಮತ್ತು ನೈತಿಕತೆಯ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ತನ್ನ ಪುಟ್ಟ ಮಗಳ ಜೀವ ರಕ್ಷಣೆಗಾಗಿ ವ್ಯಕ್ತಿಯೋಬ್ಬರು ನಡೆಸಿದ ಪ್ರತಿದಾಳಿಯಲ್ಲಿ ರಸ್ತೆ ಬದಿಯ ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ವ್ಯಕ್ತಿ ತನ್ನ ಪುಟ್ಟ ಮಗಳನ್ನು ಸ್ಟ್ರೋಲರ್‌ನಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ರಸ್ತೆ ಬದಿಯ ವ್ಯಾಪಾರಿಯೊಬ್ಬ ತನ್ನ ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಾಯಿಸಿದ್ದಾನೆ. ಆದರೆ, ಕುಟುಂಬದವರು ಆತನ ವಸ್ತುಗಳನ್ನು ಖರೀದಿಸಲು ನಿರಾಕರಿಸಿದ್ದಾರೆ.
ಖರೀದಿಸಲು ನಿರಾಕರಿಸಿದ್ದರಿಂದ ತೀವ್ರ ಕೋಪಗೊಂಡ ವ್ಯಾಪಾರಿ, ಮಗು ಕುಳಿತಿದ್ದ ಸ್ಟ್ರೋಲರ್ ಅನ್ನು ಜೋರಾಗಿ ಕಾಲಿನಿಂದ ಒದ್ದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ತನ್ನ ಬಳಿಯಿದ್ದ ಚಾಕುವನ್ನು ಹೊರತೆಗೆದು ಅವರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ.
ಇದನ್ನೂ ಓದಿ: ‘ನೀನು ಮುಸ್ಲಿಮಾ?’ ಎಂದು ಪ್ರಶ್ನಿಸಿ ಭಾರತೀಯ ಯುವಕನಿಗೆ 15 ಬಾರಿ ಚಾಕು ಇರಿದ ವ್ಯಕ್ತಿ
ಆದರೆ, ಆ ಹೆಣ್ಣುಮಗಳೊಂದಿಗಿದ್ದ ವ್ಯಕ್ತಿ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ, ಅವರು ಸಮರ ಕಲೆಗಳಲ್ಲಿ (Martial Arts) ಅಪಾರ ಪರಿಣತಿ ಹೊಂದಿದ ತಜ್ಞರಾಗಿದ್ದರು. ವ್ಯಾಪಾರಿ ಚಾಕುವಿನಿಂದ ಇರಿಯಲು ಬಂದ ತಕ್ಷಣ ಕಾರ್ಯಪ್ರವೃತ್ತರಾದ ವ್ಯಕ್ತಿ, ಅತ್ಯಂತ ವೇಗವಾಗಿ ಆತನ ಕೈಯಲ್ಲಿದ್ದ ಚಾಕುವನ್ನು ಕಸಿದುಕೊಂಡಿದ್ದಾರೆ. ಮಗಳ ಪ್ರಾಣಕ್ಕೆ ಕುತ್ತು ಬಂದ ಆತಂಕದಲ್ಲಿ ಅವರು ಅದೇ ಚಾಕುವಿನಿಂದ ವ್ಯಾಪಾರಿಯ ಮೇಲೆ ತೀವ್ರವಾಗಿ ಪ್ರತಿದಾಳಿ ನಡೆಸಿದ್ದು, ಪರಿಣಾಮವಾಗಿ ವ್ಯಾಪಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ ಜಗತ್ತಿನಾದ್ಯಂತ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ತಂದೆಯ ನಡೆ ಸರಿಯೇ ಎಂಬ ಪ್ರಶ್ನೆಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇಲ್ಲಿದೆ ನೋಡಿ ಸ್ಟೋರಿ;
⚠️🔞 En Brasil, un vendedor se acercó a un padre que caminaba con su hija pequeña, pateó el cochecito y sacó un cuchillo cuando la familia se negó a comprar sus productos.
El padre, experto en artes marciales, le quitó el cuchillo y lo mató.
¿Estuvo bien el padre? pic.twitter.com/juTO2qiPtl
— Isaac (@isaacrrr7) July 17, 2026
ಒಂದು ಕಡೆ, ಕಾನೂನು ತಜ್ಞರು ಮತ್ತು ಸಾರ್ವಜನಿಕರ ಒಂದು ವರ್ಗವು ತಂದೆಯ ನಡೆಯನ್ನು ಸಮರ್ಥಿಸಿದೆ. “ಯಾವುದೇ ಪೋಷಕರು ತಮ್ಮ ಕಣ್ಣೆದುರೇ ಮಗಳ ಮೇಲೆ ಚಾಕು ಇರಿಯಲು ಬರುವಾಗ ಸುಮ್ಮನಿರಲು ಸಾಧ್ಯವಿಲ್ಲ. ಅದು ಅತ್ಯಂತ ತುರ್ತು ಪರಿಸ್ಥಿತಿಯಾಗಿದ್ದು, ಕೇವಲ ಮಗಳು ಮತ್ತು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಆತ್ಮರಕ್ಷಣೆಗಾಗಿ ಕೈಗೊಂಡ ಅನಿವಾರ್ಯ ಕ್ರಮ” ಎಂದು ಅವರು ವಾದಿಸುತ್ತಿದ್ದಾರೆ.
ಇನ್ನೊಂದೆಡೆ, “ತಂದೆಯು ಮಾರ್ಷಲ್ ಆರ್ಟ್ಸ್ ತಜ್ಞರಾಗಿದ್ದರಿಂದ ಆತನನ್ನು ಕೇವಲ ಕಟ್ಟಿಹಾಕಬಹುದಿತ್ತು ಅಥವಾ ಚಾಕು ಕಸಿದುಕೊಂಡ ಬಳಿಕ ಸುಮ್ಮನಾಗಬಹುದಿತ್ತು. ಚಾಕು ಕಸಿದುಕೊಂಡ ಮೇಲೆಯೂ ಆತನನ್ನು ಕೊಲ್ಲುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ” ಎಂಬ ವಾದಗಳೂ ಕೇಳಿಬರುತ್ತಿವೆ.
ಬ್ರೆಜಿಲ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಇದು ಸಂಪೂರ್ಣವಾಗಿ ಸ್ವಯಂರಕ್ಷಣೆಯ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಅತಿಯಾದ ಬಲಪ್ರಯೋಗವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

