ಯಾವ ಕಾರಣಕ್ಕೂ ಈ ದಿನಗಳಲ್ಲಿ ಮನೆಯಲ್ಲಿ ಮಾಂಸಾಹಾರ ಮಾಡಬೇಡಿ

ಸನಾತನ ಧರ್ಮ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ, ವಾರದ ಕೆಲವು ನಿರ್ದಿಷ್ಟ ದಿನಗಳು ಮತ್ತು ವಿಶೇಷ ತಿಥಿಗಳಂದು ಮನೆಯಲ್ಲಿ ಮಾಂಸಾಹಾರ ಮಾಡುವುದು ಅಥವಾ ಸೇವಿಸುವುದು ಅಶುಭ ಎಂದು ನಂಬಲಾಗುತ್ತದೆ. ಈ ದಿನಗಳಲ್ಲಿ ಮಾಂಸಾಹಾರ ಸಿದ್ಧಪಡಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಲಕ್ಷ್ಮಿ ದೇವಿಯ ಅನುಗ್ರಹ ತಪ್ಪುತ್ತದೆ ಎಂಬುದು ಜ್ಯೋತಿಷ್ಯ ಹಾಗೂ ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ.

ಹಾಗಿದ್ದರೆ, ವಾರದ ಯಾವ್ಯಾವ ದಿನಗಳಲ್ಲಿ ಮನೆಯಲ್ಲಿ ಮಾಂಸಾಹಾರ ಮಾಡಲೇಬಾರದು? ಇಲ್ಲಿದೆ ಸಂಪೂರ್ಣ ವಿವರ

ಮಾಂಸಾಹಾರ ವರ್ಜಿಸಬೇಕಾದ ಪ್ರಮುಖ ದಿನಗಳು:

ಸೋಮವಾರ

ಸೋಮವಾರವನ್ನು ಶಿವನಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಸಾತ್ವಿಕ ಆಹಾರ ಸೇವನೆ ಮಾಡುವುದು ಉತ್ತಮ. ಸೋಮವಾರ ಮಾಂಸಾಹಾರ ಮಾಡುವುದರಿಂದ ಮಾನಸಿಕ ಶಾಂತಿ ಭಂಗವಾಗಿ, ಮನೆಯಲ್ಲಿ ಕ್ಲೇಶ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಮಂಗಳವಾರ

ಮಂಗಳವಾರ ಮಂಗಳ ಗ್ರಹ ಹಾಗೂ ಹನುಮಂತ ಮತ್ತು ಶಕ್ತಿ ದೇವತೆಯ ಆರಾಧನೆಯ ದಿನ. ಈ ದಿನ ಮಾಂಸಾಹಾರ ಸೇವನೆಯಿಂದ ಕೋಪ, ಉದ್ವೇಗ ಹೆಚ್ಚಾಗುವುದಲ್ಲದೆ, ಜಾತಕದಲ್ಲಿ ಮಂಗಳ ದೋಷದ ಪ್ರಭಾವ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ಗುರುವಾರ

ಗುರುವಾರ ಬೃಹಸ್ಪತಿ (ಗುರು) ಹಾಗೂ ಶ್ರೀಮನ್ನಾರಾಯಣ, ರಾಘವೇಂದ್ರ ಸ್ವಾಮಿಗಳ ವಿಶೇಷ ದಿನ. ಈ ದಿನ ಮನೆಯಲ್ಲಿ ಯಾವುದೇ ಕಾರಣಕ್ಕೂ ಅಮಿಷ ಉಣ್ಣಬಾರದು. ಇದರಿಂದ ಗುರು ಬಲ ಕಡಿಮೆಯಾಗಿ, ಧನ ಹಾನಿಯಾಗುವ ಸಾಧ್ಯತೆಯಿರುತ್ತದೆ.

ಶನಿವಾರ

ಶನಿವಾರ ಶನಿ ದೇವ ಹಾಗೂ ಶ್ರೀನಿವಾಸನ ಕೃಪೆಗೆ ಪಾತ್ರವಾಗುವ ದಿನ. ಈ ದಿನ ಮಾಂಸಾಹಾರ ವರ್ಜಿಸುವುದರಿಂದ ಶನಿ ದೋಷದ ತೀವ್ರತೆ ಕಡಿಮೆಯಾಗುತ್ತದೆ. ಶನಿವಾರ ಮಾಂಸಾಹಾರ ಸೇವಿಸಿದರೆ ಶಾಪ ಹಾಗೂ ದಾರಿದ್ರ್ಯ ಬರುತ್ತದೆ ಎಂಬ ಭೀತಿಯಿದೆ.

ಇದನ್ನೂ ಓದಿ: ದೇವಸ್ಥಾನಕ್ಕೆ ಹೋಗುವಾಗ ಈ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ

ವಿಶೇಷ ಪವಿತ್ರ ದಿನಗಳು

ವಾರದ ದಿನಗಳಷ್ಟೇ ಅಲ್ಲದೆ, ಕೆಳಗಿನ ಪ್ರಮುಖ ದಿನಗಳಲ್ಲೂ ಮಾಂಸಾಹಾರ ವರ್ಜಿಸುವುದು ಕಡ್ಡಾಯ:

ಅಮಾವಾಸ್ಯೆ ಮತ್ತು ಹುಣ್ಣಿಮೆ: ಈ ದಿನಗಳಲ್ಲಿ ಚಂದ್ರನ ಪ್ರಭಾವದಿಂದ ಮನಸ್ಸು ಮತ್ತು ಸೃಷ್ಟಿಯಲ್ಲಿ ಬದಲಾವಣೆಗಳಾಗುತ್ತವೆ. ಆದ್ದರಿಂದ ಈ ದಿನಗಳಲ್ಲಿ ಮಾಂಸಾಹಾರ ಮಾಡುವುದು ಅಶುಭ.

ಏಕಾದಶಿ ಹಾಗೂ ಸಂಕಷ್ಟಹರ ಚತುರ್ಥಿ: ವ್ರತದ ಪವಿತ್ರ ದಿನಗಳಾದ್ದರಿಂದ ಸಂಪೂರ್ಣ ಸಾತ್ವಿಕ ಆಹಾರವೇ ಇರಬೇಕು.

ಗ್ರಹಣದ ಸಮಯ: ಸೂರ್ಯ ಅಥವಾ ಚಂದ್ರ ಗ್ರಹಣದ ದಿನಗಳಲ್ಲಿ ಮಾಂಸಾಹಾರ ಸೇವನೆ ಆರೋಗ್ಯಕ್ಕೂ ಭಂಗ ತರುತ್ತದೆ.

 

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *