ಬೆಂಗಳೂರು : ಜಗತ್ತಿನ ಪ್ರಮುಖ ಕ್ರೀಡಾ ಹಬ್ಬಗಳಲ್ಲಿ ಒಂದಾದ ಕಾಮನ್‌ವೆಲ್ತ್ ಗೇಮ್ಸ್ 2026 ಇಂದಿನಿಂದ (ಜುಲೈ 23) ಅಧಿಕೃತವಾಗಿ ಚಾಲನೆ ಪಡೆಯುತ್ತಿದೆ. ಬಜೆಟ್ ಉಳಿತಾಯದ ಉದ್ದೇಶದಿಂದ ಈ ಬಾರಿಯ ಕ್ರೀಡಾಕೂಟವನ್ನು ಅತ್ಯಂತ ಸರಳ ಹಾಗೂ ನವೀಕೃತ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಭಾರತಕ್ಕೆ ಸದಾ ಹೆಚ್ಚಿನ ಪದಕ ತಂದುಕೊಡುತ್ತಿದ್ದ ಕುಸ್ತಿ, ಬ್ಯಾಡ್ಮಿನ್ಟನ್, ಹಾಕಿ, ಕ್ರಿಕೆಟ್, ಶೂಟಿಂಗ್ ಮತ್ತು ಟೇಬಲ್ ಟೆನಿಸ್‌ನಂತಹ ಪ್ರಮುಖ ಕ್ರೀಡೆಗಳನ್ನು ಈ ಬಾರಿ ಕೈಬಿಡಲಾಗಿದ್ದರೂ, ಭಾರತದ 126 ಅಥ್ಲೀಟ್‌ಗಳ ಬಲಿಷ್ಠ ಪಡೆ ಒಟ್ಟು 13 ಕ್ರೀಡಾ ವಿಭಾಗಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿದೆ.
ಇಂದಿನ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಧ್ವಜಧಾರಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ 2026: ಭಾರತೀಯ ಸ್ಪರ್ಧಿಗಳ ದಿನಾವಾರು ವೇಳಾಪಟ್ಟಿ
ಜುಲೈ 23 (ಇಂದು)
ಮಧ್ಯಾಹ್ನ 4:50: ಲಾನ್ ಬೌಲ್ಸ್ (ಮಹಿಳೆಯರ ಡಬಲ್ಸ್) – ಪಿಂಕಿ ಸಿಂಗ್ ಮತ್ತು ರೂಪಾ ರಾಣಿ ತಿರ್ಕಿ ತಂಡ vs ಮಾಲ್ಟಾ.
ಸಂಜೆ 6:15: ಲಾನ್ ಬೌಲ್ಸ್ (ಪುರುಷರ ಸಿಂಗಲ್ಸ್) – ಪುಟುಲ್ ಸೋನೊವಾಲ್ vs ಕೆನಡಾ.
ರಾತ್ರಿ 10:30: ಅದ್ಧೂರಿ ಉದ್ಘಾಟನಾ ಸಮಾರಂಭ (ಧ್ವಜಧಾರಿ: ಮೀರಾಬಾಯಿ ಚಾನು).
ಜುಲೈ 24 (ಶುಕ್ರವಾರ)
ಮಧ್ಯಾಹ್ನ 1:30: ಈಜು ಸ್ಪರ್ಧೆಯ ಹೀಟ್ಸ್‌ನಲ್ಲಿ ಶ್ರೀಹರಿ ನಟರಾಜ್ ಕಣಕ್ಕೆ.
ಸಂಜೆ: ಪ್ಯಾರಾ ಪವರ್‌ಲಿಫ್ಟಿಂಗ್ ಫೈನಲ್ಸ್ (ಪರಂಜೀತ್ ಕುಮಾರ್ ಮತ್ತು ಸುಮಾ ದೇವಿ ಸ್ಪರ್ಧೆ).
ಜುಲೈ 25 (ಶನಿವಾರ)
ಮಧ್ಯಾಹ್ನ 3:30: ಬಾಕ್ಸಿಂಗ್ ಪ್ರಾಥಮಿಕ ಸುತ್ತುಗಳು (ಪ್ರೀತಿ ಪವಾರ್, ಜೈಸ್ಮಿನ್ ಲಂಬೋರಿಯಾ).
ಸಂಜೆ: ಜಿಮ್ನಾಸ್ಟಿಕ್ಸ್ ತಂಡದ ಫೈನಲ್ ಪಂದ್ಯಗಳು.
ಜುಲೈ 26 (ಭಾನುವಾರ)
ಜಿಮ್ನಾಸ್ಟಿಕ್ಸ್ ವೈಯಕ್ತಿಕ ಫೈನಲ್ಸ್ ಪಂದ್ಯಗಳು.
ಸಂಜೆಯ ಸೆಷನ್: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಭರವಸೆ ಮೀರಾಬಾಯಿ ಚಾನು ಅವರ ಪದಕದ ಪಂದ್ಯ.
ಜುಲೈ 27 (ಸೋಮವಾರ)
ಮಧ್ಯಾಹ್ನ 2:30: ಅಥ್ಲೆಟಿಕ್ಸ್ (ಟ್ರ್ಯಾಕ್ ಅಂಡ್ ಫೀಲ್ಡ್) ಸ್ಪರ್ಧೆಗಳು ಆರಂಭ.
4×400 ಮೀಟರ್ ಮಿಶ್ರ ರಿಲೇ ಹೀಟ್ಸ್ ಸ್ಪರ್ಧೆ.
ಜುಲೈ 28 (ಮಂಗಳವಾರ)
ಜಿಮ್ನಾಸ್ಟಿಕ್ಸ್ ಅಪಾರಾಟಸ್ ಫೈನಲ್ಸ್.
ಸಂಜೆ 6:30 ನಂತರ: ಪುರುಷರ ಮತ್ತು ಮಹಿಳೆಯರ ಅತ್ಯಂತ ಕುತೂಹಲಕಾರಿ 100 ಮೀಟರ್ ಓಟದ ಫೈನಲ್ಸ್.
ಜುಲೈ 29 (ಬುಧವಾರ)
ಮುಂಜಾನೆ 11:30: 3×3 ಬಾಸ್ಕೆಟ್‌ಬಾಲ್ ಸೆಮಿಫೈನಲ್ಸ್ ಹಾಗೂ ಸಂಜೆ ಪದಕದ ಪಂದ್ಯಗಳು.
ಲಾಂಗ್ ಜಂಪ್ ಫೈನಲ್ಸ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಪದಕದ ರೇಸ್‌ನಲ್ಲಿ.
ಜುಲೈ 30 (ಗುರುವಾರ)
ಮಧ್ಯಾಹ್ನ 2:00: ವೇಟ್‌ಲಿಫ್ಟಿಂಗ್ ಹೆವಿವೇಟ್ ವಿಭಾಗದ ಪಂದ್ಯಗಳು.
ವೆಲೋಡ್ರೋಮ್‌ನಲ್ಲಿ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಗಳು ಪ್ರಾರಂಭ.
ಜುಲೈ 31 (ಶುಕ್ರವಾರ)
ಮಧ್ಯಾಹ್ನ 2:30: ಜೂಡೋ ಪ್ರಾಥಮಿಕ ಸುತ್ತಿನ ಸ್ಪರ್ಧೆಗಳು.
ರಾತ್ರಿ 7:30: ಜೂಡೋ ಪದಕದ ಪ್ರಮುಖ ಪಂದ್ಯಗಳು.
ಆಗಸ್ಟ್ 1 (ಶನಿವಾರ)
ರಾತ್ರಿ 11:00: ಜಾವೆಲಿನ್ ಥ್ರೋ ಅಖಾಡದಲ್ಲಿ ಒಲಿಂಪಿಕ್ ಹೀರೋ ನೀರಜ್ ಚೋಪ್ರಾ ಕಣಕ್ಕೆ.
ಬಾಕ್ಸಿಂಗ್ ವಿಭಾಗದ ಗೋಲ್ಡ್ ಮೆಡಲ್ (ಚಿನ್ನದ ಪದಕ) ಪಂದ್ಯಗಳು.
ಆಗಸ್ಟ್ 2 (ಭಾನುವಾರ)
ಸೈಕ್ಲಿಂಗ್ ಹಾಗೂ ಜೂಡೋ ಹೆವಿವೇಟ್ (ತುಲಿಕಾ ಮಾನ್) ಫೈನಲ್ ಸ್ಪರ್ಧೆಗಳು.
ತಡರಾತ್ರಿ: ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಿರುವ ಸಮಾರೋಪ ಸಮಾರಂಭ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

