ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಂಗಾರದ ದರ ಗುರುವಾರವೂ (ಜುಲೈ ೨೩) ಮತ್ತಷ್ಟು ದುಬಾರಿಯಾಗಿದೆ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಐದು ದಿನಗಳಿಂದ ಏರಿಕೆಯ ಹಾದಿಯಲ್ಲೇ ಸಾಗಿದಂತಾಗಿದೆ.
ಬುಧವಾರ ಬರೋಬ್ಬರಿ 210 ರೂ. ಗಳಷ್ಟು ಏರಿಕೆಯಾಗಿದ್ದ ಚಿನ್ನದ ದರ, ಗುರುವಾರ ಗ್ರಾಮ್‌ಗೆ ಮತ್ತಷ್ಟು 70 ರೂ. ಹೆಚ್ಚಳ ಕಂಡಿದೆ. ಈ ದಿಢೀರ್ ಏರಿಕೆಯಿಂದಾಗಿ 18 ಕ್ಯಾರಟ್ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 11,000 ದ ಗಡಿ ದಾಟಿದೆ. ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಸ್ವರ್ಣ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ.
ಚಿನ್ನದ ಇಂದಿನ ದರ ವಿವರ (10 ಗ್ರಾಮ್ & 1 ಗ್ರಾಮ್)
22 ಕ್ಯಾರಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ 1,35,000 ಇದ್ದು, 1 ಗ್ರಾಮ್‌ಗೆ 13,500 ತಲುಪಿದೆ. 24 ಕ್ಯಾರಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ 1,47,280 ರೂ. ಇದ್ದು, 1 ಗ್ರಾಮ್‌ಗೆ 14,728 ರೂ. ಆಗಿದೆ. 18 ಕ್ಯಾರಟ್ ಚಿನ್ನ 1 ಗ್ರಾಂಗೆ 11,046 ಏರಿಕೆಯಾಗಿದೆ.
ಇದನ್ನೂ ಓದಿ: ಅಮೆರಿಕ-ಇರಾನ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಡಿ: ಇರಾನ್ ಮೇಲೆ ಯುಎಸ್ ಭೀಕರ ವೈಮಾನಿಕ ದಾಳಿ; ಕಚ್ಚಾ ತೈಲ ಪರವಾನಗಿ ರದ್ದು
ಯಥಾಸ್ಥಿತಿಯಲ್ಲೇ ಉಳಿದ ಬೆಳ್ಳಿ ಬೆಲೆ:
ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಮಹತ್ತರ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ದರದಲ್ಲಿ1 ಗ್ರಾಮ್‌ಗೆ 235 ರೂ. ಇದ್ದು, 100 ಗ್ರಾಮ್ ಬೆಳ್ಳಿಯ ಬೆಲೆ 24,000 ರೂ. ರಷ್ಟಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

