ಸುಳ್ಯ: ಭಾರತೀಯ ಮಜ್ದೂರ್ ಸಂಘದ 71ನೇ ಸಂಸ್ಥಾಪನಾ ದಿನಾಚರಣೆಯನ್ನು ಬಿಎಂಎಸ್ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಗುರುವಾರ ಬೆಳಗ್ಗೆ ಸಂಘದ ಕಚೇರಿ ತಿಲಕ ಭವನ, ಹಳೇಗೇಟ್‌ನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಬೌದ್ಧಿಕರಾಗಿ ವಕೀಲ ಭಾಸ್ಕರ್ ರಾವ್ ಮಾತನಾಡಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಮಜ್ದೂರ್ ಸಂಘದ ಪಾತ್ರವನ್ನು ವಿವರಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಹೈ-ಅಲರ್ಟ್: ಸಾರ್ವಜನಿಕರಿಗೆ ಜಿಲ್ಲಾಡಳಿತದ ಸೂಚನೆ
ಮುಖ್ಯ ಅತಿಥಿಗಳಾಗಿ ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಭಟ್ (ಪಿ. ಪೈಚಾರ್), ಟ್ರಸ್ಟ್ ಸದಸ್ಯ ರಾಧಾಕೃಷ್ಣ ಬೈತಡ್ಕ ಹಾಗೂ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಜನಾರ್ದನ ಶ್ರೀರಾಮ್ ಪೇಟೆ, ರೋಹಿತ್ (ಗಾಂಧಿನಗರ), ಶಿವಾನಂದ ಗೋಪಿಕಾ, ಮಾಜಿ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಲೋಕೇಶ್ (ಬಸ್ ನಿಲ್ದಾಣ), ಪ್ರದೀಪ್ (ರಥಬೀದಿ), ಜಗದೀಶ್ ಎನ್.ಆರ್. (ಪೈಚಾರ್), ಚಾಮಯ್ಯ (ಮಾರ್ಕೆಟ್ ರಸ್ತೆ), ಪ್ರಸನ್ನ (ರಥಬೀದಿ), ರಾಧಾಕೃಷ್ಣ (ಕುರುಂಜಿಭಾಗ್), ಶಂಕರ (ಕುರುಂಜಿಭಾಗ್), ವೇಣುಗೋಪಾಲ ನಾಯರ್, ಚಿದಾನಂದ ಮಾಣಿಕ್ಯ, ಚಿದಾನಂದ (ಕುರುಂಜಿಭಾಗ್) ಸೇರಿದಂತೆ ಸಂಘದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸುರೇಂದ್ರ ಕಾಮತ್ ಸ್ವಾಗತಿಸಿ, ರವಿ ಎಸ್. ವಂದಿಸಿದರು. ನಾರಾಯಣ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಹಂಚಿ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

