ಕಾಂಪನ್ವೆಲ್ತ್‌ನಲ್ಲಿ ಮೀರಾಬಾಯಿ ಚಾನು ‘ಸ್ವರ್ಣ ಹ್ಯಾಟ್ರಿಕ್’: ಭಾರತಕ್ಕೆ ಒಲಿದ ಗ್ಲಾಸ್ಗೋ ಗೇಮ್ಸ್‌ನ ಮೊದಲ ಚಿನ್ನ

ಸ್ಗೋ (ಸ್ಕಾಟ್‌ಲ್ಯಾಂಡ್): ಭಾರತದ ಹೆಮ್ಮೆಯ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಕಾಂಪನ್ವೆಲ್ತ್ ಗೇಮ್ಸ್ 2026ರಲ್ಲಿ (Commonwealth Games 2026) ಐತಿಹಾಸಿಕ ‘ಸ್ವರ್ಣ ಹ್ಯಾಟ್ರಿಕ್’ (Golden Hat-Trick) ಸಾಧನೆ ಮಾಡಿದ್ದಾರೆ. ಮಹಿಳೆಯರ ೪೮ ಕೆಜಿ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಅವರು, ಸತತ ಮೂರನೇ ಬಾರಿಗೆ ಕಾಂಪನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟು ಭಾರತದ ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಈ ಅಭೂತಪೂರ್ವ ಸಾಧನೆಯೊಂದಿಗೆ, ಕಾಂಪನ್ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರು ಚಿನ್ನದ ಪದಕ ಗೆದ್ದ ಭಾರತದ ಮೊದಲ ವೇಟ್‌ಲಿಫ್ಟರ್ ಎಂಬ ನೂತನ ಮೈಲಿಗಲ್ಲಿಗೆ ಮೀರಾಬಾಯಿ ಭಾಜನರಾಗಿದ್ದಾರೆ. ಒಟ್ಟು 190 ಕೆಜಿ ತೂಕ ಎತ್ತುವ ಮೂಲಕ ಮೀರಾಬಾಯಿ ಚಾನು ಜಾಗತಿಕ ವೇದಿಕೆಯಲ್ಲಿ ತಮ್ಮ ಮೇಲುಗೈ ಸಾಧಿಸಿದರು.

85 ಕೆಜಿ ಎತ್ತುವ ಮೂಲಕ ಗೇಮ್ಸ್ ಮತ್ತು ಕಾಂಪನ್ವೆಲ್ತ್ ದಾಖಲೆ ಬರೆದರು.105 ಕೆಜಿ ತೂಕ ಎತ್ತಿ ಪ್ರಥಮ ಸ್ಥಾನ ಪಡೆದರು. ಪದಕ ಸ್ವೀಕರಿಸಿದ ಬಳಿಕ ಭಾವುಕರಾದ ಮೀರಾಬಾಯಿ ಚಾನು. “ನನಗೆ ಅತ್ಯಂತ ಸಂತೋಷವಾಗುತ್ತಿದೆ. ಗಾಯಗಳು ಹಾಗೂ ತೀವ್ರ ಒತ್ತಡದ ನಡುವೆಯೂ ದೇಶಕ್ಕಾಗಿ ಪದಕ ಗೆಲ್ಲಲು ಹಲವು ತ್ಯಾಗಗಳನ್ನು ಮಾಡಿದ್ದೇನೆ. ದೇಶದ ರಾಷ್ಟ್ರಗೀತೆ ಮೊಳಗಿದಾಗ ಕಣ್ಣೀರು ತಡೆಯಲಾಗಲಿಲ್ಲ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮುಟ್ಟಿನ ನೋವಿದ್ದರೂ ಮ್ಯಾರಥಾನ್ ಪೂರ್ಣಗೊಳಿಸಿದ ಅಥ್ಲೀಟ್: ವಿಶ್ವದೆಲ್ಲಡೆ ಲಿ ಮೇಝೆನ್ ಸಾಧನೆಗೆ ಶ್ಲಾಘನೆ

ಇಲ್ಲಿದೆ ನೋಡಿ ವಿಡಿಯೋ:


ಮೀರಾಬಾಯಿ ಚಾನು ಅವರ ಈ ಅಪ್ರತಿಮ ಸಂಕಲ್ಪ, ಶಿಸ್ತು ಮತ್ತು ನಿರಂತರ ಚಲವು ದೇಶದ ಕೋಟ್ಯಂತರ ಯುವಜನತೆಗೆ ಪ್ರೇರಣೆಯಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *