ಅಂಗವಿಕಲನಂತೆ ನಟಿಸಿ ಭಿಕ್ಷೆ, ಮೊಬೈಲ್ ಕಳ್ಳತನ: ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಕಳ್ಳನಿಗೆ ಧರ್ಮದೇಟು

ಬೆಂಗಳೂರು: ದೈಹಿಕವಾಗಿ ಅಂಗವಿಕಲನಂತೆ ನಟಿಸಿ ಅನುಕಂಪ ಗಿಟ್ಟಿಸಿಕೊಂಡು ಭಿಕ್ಷೆ ಬೇಡುತ್ತಾ ಜನರ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಸ್ಥಳೀಯ ನಿವಾಸಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬ್ಯಾಟರಾಯನಪುರ ಸಮೀಪದ ಐಟಿಐ ಲೇಔಟ್ (ITI Layout) ನಲ್ಲಿ ಈ ಘಟನೆ ನಡೆದಿದ್ದು, ಸಿಕ್ಕಿಬಿದ್ದ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಮುಕೇಶ್ ಎಂದು ಗುರುತಿಸಲಾಗಿದೆ.

ಆರೋಪಿ ಮುಕೇಶ್, ತನಗೆ ಕಾಲು ಊನವಾಗಿದೆ ಎಂಬಂತೆ ನಟಿಸುತ್ತಾ, ಕುಂಟುತ್ತಾ ನಡೆದು ಸಾರ್ವಜನಿಕರ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದ. ಭಿಕ್ಷೆ ಬೇಡುವ ನೆಪದಲ್ಲಿ ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆದು ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

ಇತ್ತೀಚಿನ ದಿನಗಳಲ್ಲಿ ಆತನ ನಡೆ-ನುಡಿ ಹಾಗೂ ಚಲನವಲನಗಳ ಮೇಲೆ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಆತನನ್ನು ತಡೆದು ತೀವ್ರವಾಗಿ ಪ್ರಶ್ನಿಸಿದಾಗ, ಆತನಿಗೆ ఎలాంటి ಅಂಗವೈಕಲ್ಯವೂ ಇಲ್ಲದಿರುವುದು ಹಾಗೂ ಆತ ದೈಹಿಕವಾಗಿ ಸಂಪೂರ್ಣ ಸಶಕ್ತನಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯರು ಸತ್ಯ ಹೊರಹಾಕುತ್ತಿದ್ದಂತೆ ಆತಕ್ಷಣವೇ ತಾನು ನಟಿಸುತ್ತಿದ್ದ ‘ಕುಂಟುವ’ ನಾಟಕವನ್ನು ನಿಲ್ಲಿಸಿ, ನೇರವಾಗಿ ನಿಂತುಕೊಂಡು ಎರಡು ಕೈಮುಗಿದು ಕ್ಷಮೆ ಕೋರಿದ್ದಾನೆ. ತಕ್ಷಣವೇ ನಿವಾಸಿಗಳು ಆತನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ಫುಟ್‌ಪಾತ್‌ನಲ್ಲಿ ಬೈಕ್ ಓಡಿಸಿದರೆ ಬೀಳಲಿದೆ 5,000 ರೂ. ದಂಡ
ಆರೋಪಿ ಕ್ಷಮೆ ಕೇಳುವ ಹಾಗೂ ಸ್ಥಳೀಯರು ಆತನನ್ನು ವಿಚಾರಣೆ ನಡೆಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಪೊಲೀಸರು ವೀಡಿಯೊ ಹಾಗೂ ಸ್ಥಳೀಯರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *