ಟಿಕ್‌ಟಾಕ್‌ನಲ್ಲಿ 1.4 ಕೋಟಿ ಫಾಲೋವರ್ಸ್: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕೃತ ಟಿಕ್‌ಟಾಕ್ ಖಾತೆಯಲ್ಲಿ (@realdonaldtrump) 14 ಮಿಲಿಯನ್‌ಗೂ (1.4 ಕೋಟಿ) ಹೆಚ್ಚು ಫಾಲೋವರ್ಸ್‌ಗಳನ್ನು ತಲುಪಿದ ಸಂದರ್ಭದಲ್ಲಿ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಯುವ ಮತದಾರರನ್ನು ಹಾಗೂ ಸಾರ್ವಜನಿಕರನ್ನು ತಲುಪಲು ಟ್ರಂಪ್ ಟಿಕ್‌ಟಾಕ್‌ಗೆ ಪಾದಾರ್ಪಣೆ ಮಾಡಿದ್ದರು. ಟಿಕ್‌ಟಾಕ್‌ಗೆ ಬಂದ ಕೆಲವೇ ತಿಂಗಳುಗಳಲ್ಲಿ ಅವರ ಫಾಲೋವರ್ಸ್‌ಗಳ ಸಂಖ್ಯೆ ಕೋಟಿಗೆ ತಲುಪಿತು.

ಅಮೆರಿಕದಲ್ಲಿ ಟಿಕ್‌ಟಾಕ್ ನಿಷೇಧಿಸುವ ಕಾನೂನು ಜಾರಿಗೆ ಬಂದಾಗ, ಟ್ರಂಪ್ ಅದನ್ನು ವಿರೋಧಿಸಿ “ನಾನು ಟಿಕ್‌ಟಾಕ್ ಉಳಿಸುತ್ತೇನೆ” ಎಂದು ವೀಡಿಯೊ ಹಂಚಿಕೊಂಡಿದ್ದರು. ತಮ್ಮ 14 ಮಿಲಿಯನ್ ಫಾಲೋವರ್ಸ್‌ಗಳು ಮತ್ತು ಶತಕೋಟಿ ವೀಕ್ಷಣೆಗಳನ್ನು (Views) ಉಲ್ಲೇಖಿಸಿ, ಈ ವೇದಿಕೆಯು ಲಕ್ಷಾಂತರ ಜನರಿಗೆ ಸಂವಹನದ ಮಾಧ್ಯಮವಾಗಿದೆ ಎಂದು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಮುಟ್ಟಿನ ನೋವಿದ್ದರೂ ಮ್ಯಾರಥಾನ್ ಪೂರ್ಣಗೊಳಿಸಿದ ಅಥ್ಲೀಟ್: ವಿಶ್ವದೆಲ್ಲಡೆ ಲಿ ಮೇಝೆನ್ ಸಾಧನೆಗೆ ಶ್ಲಾಘನೆ

ಇಲ್ಲಿದೆ ನೋಡಿ ಸ್ಟೋರಿ:

 

View this post on Instagram

 

A post shared by Team Trump (@teamtrump)

ಪ್ರಸ್ತುತ ಟಿಕ್‌ಟಾಕ್‌ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಮತ್ತು ಫಾಲೋವರ್ಸ್‌ಗಳನ್ನು ಹೊಂದಿರುವ ಜಾಗತಿಕ ರಾಜಕೀಯ ನಾಯಕರಲ್ಲಿ ಡೊನಾಲ್ಡ್ ಟ್ರಂಪ್ ಮುಂಚೂಣಿಯಲ್ಲಿದ್ದಾರೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *