ದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು, ಮೆಟ್ರೋ ನಿಲ್ದಾಣಗಳು ಹಾಗೂ ಬಸ್ ತಂಗುದಾಣಗಳು ಜಲಾವೃತಗೊಂಡು ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಅನೇಕ ಪ್ರದೇಶಗಳಲ್ಲಿ ನೀರು ನಿಂತು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿದ್ದು, ವಾಹನ ಸವಾರರು ಮತ್ತು ಉದ್ಯೋಗಿಗಳು ತೀವ್ರ ಪರದಾಟ ನಡೆಸುವಂತಾಯಿತು.
ದಿಢೀರ್ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮೆಟ್ರೋ ಪ್ರವೇಶ ದ್ವಾರಗಳು ಹಾಗೂ ರಸ್ತೆಗಳಲ್ಲೇ ನೀರು ತುಂಬಿ ಸಂಚಾರಕ್ಕೆ ಅಡಚಣೆಯಾಯಿತು.
ಸರ್ಕಾರದ ಮೂಲಸೌಕರ್ಯ ನಿರ್ವಹಣೆಯ ಲೋಪದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಗಳು ಕೇವಲ ಉಚಿತ ಕೊಡುಗೆಗಳ (Freebies) ಮೇಲೆ ಗಮನ ಹರಿಸುವ ಬದಲು, ಶಾಶ್ವತ ಹಾಗೂ ಬಲವಾದ ನಗರ ಮೂಲಸೌಕರ್ಯ ಮತ್ತು ಮೂಲಭೂತ ನಾಗರಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು ಎಂದು ಅಂದಿನ ಮುಖ್ಯಮಂತ್ರಿ, ಅರವಿಂದ್ ಕ್ರೆಜಿವಾಲ್ ಅವರ ಸರ್ಕಾರವನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ‘ಆರ್‌ಎಸ್‌ಎಸ್‌ಗೆ ಸೇರಿ, ದೇಶಪ್ರೇಮ ಕಲಿಯಿರಿ’: ಪ್ರಿಯಾಂಕಾ ಗಾಂಧಿ ಬೆವರಿಳಿಸಿದ ಅನುರಾಗ್ ಠಾಕೂರ್
ಅತ್ಯಗತ್ಯ ಸಂದರ್ಭಗಳಲ್ಲಿ ಕೆಲಸ ಮಾಡುವ ಹಾಗೂ ಸಾರ್ವಜನಿಕರಿಗೆ ನೆರವಾಗುವ ನೈಜ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸುಧಾರಣಾವಾದಿಗಳು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

