‘ಆರ್‌ಎಸ್‌ಎಸ್‌ಗೆ ಸೇರಿ, ದೇಶಪ್ರೇಮ ಕಲಿಯಿರಿ’: ಪ್ರಿಯಾಂಕಾ ಗಾಂಧಿ ಬೆವರಿಳಿಸಿದ ಅನುರಾಗ್ ಠಾಕೂರ್

ದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ‘ಗೋಮೂತ್ರ ಎಕ್ಸ್‌ಪರ್ಟ್’ (Gaumutra Expert) ಹೇಳಿಕೆಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹರಿತವಾದ ಮಾತುಗಳಿಂದ ತಿರುಗೇಟು ನೀಡಿದ್ದಾರೆ. ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, “ಪ್ರಿಯಾಂಕಾ ಗಾಂಧಿ ಅವರು ಗಂಭೀರ ವಿಚಾರಗಳ ಬಗ್ಗೆ ಮಾತನಾಡುವಾಗಲೂ ನಿಗೂಢವಾಗಿ ನಗುತ್ತಾ, ನಿಷ್ಕಪಟ ಮುಖ ಮಾಡಿಕೊಂಡು ಜನರನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಾರೆ. ತಮ್ಮ ಸರ್ಕಾರದ ಗಂಭೀರ ಲೋಪದೋಷಗಳು ಹಾಗೂ ವೈಫಲ್ಯಗಳನ್ನು ಮುಚ್ಚಿಹಾಕಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತದ ಶ್ರೇಷ್ಠ ವಿಜ್ಞಾನಿ ಹಾಗೂ ಐಐಟಿ ಮದ್ರಾಸ್ (IIT Madras) ನಿರ್ದೇಶಕರಾದ ಪ್ರೊ. ವಿ. ಕಾಮಕೋಟಿ ಅವರ ಕುರಿತು ಅವರು ಮಾಡಿರುವ ಅಸಂವೇದನಾಶೀಲ ಹೇಳಿಕೆ ನನಗೆ ತೀವ್ರ ಬೇಸರ ತಂದಿದೆ,” ಎಂದರು.

“ಪ್ರೊ. ಕಾಮಕೋಟಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆ ಗುರುತಿಸಿಕೊಂಡಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಪ್ರಿಯಾಂಕಾ ಗಾಂಧಿ ಅವರೂ ಆರ್‌ಎಸ್‌ಎಸ್‌ಗೆ ಸೇರುವುದು ಒಳ್ಳೆಯದು, ಇದರಿಂದ ಅವರಿಗೆ ಉತ್ತಮ ಸಂಸ್ಕಾರ ಸಿಗುತ್ತದೆ ಹಾಗೂ ದೇಶದ ಬಗ್ಗೆ ಆಲೋಚಿಸುವುದನ್ನು ಕಲಿಯುತ್ತಾರೆ,” ಎಂದು ತಿರುಗೇಟು ನೀಡಿದರು.

“ರಾಹುಲ್ ಗಾಂಧಿಗಿಂತ ಪ್ರಿಯಾಂಕಾ ಗಾಂಧಿ ಕೊಂಚ ಭಿನ್ನ ಹಾಗೂ ಉತ್ತಮ ಇರಬಹುದು, ಕನಿಷ್ಠ ಪಕ್ಷ ನಗುತ್ತಾರಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಐಐಟಿ ಮದ್ರಾಸ್ ನಿರ್ದೇಶಕರ ಬಗ್ಗೆ ಅವರು ನೀಡಿದ ಹೇಳಿಕೆಯನ್ನು ನೋಡಿದರೆ ಅಣ್ಣ-ತಂಗಿ ಇಬ್ಬರೂ ಒಂದೇ ಹಾದಿಯಲ್ಲಿದ್ದಾರೆ ಎನಿಸುತ್ತದೆ.”

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮೇಲ್ಮನವಿಗೆ ರಾಜ್ಯ ಸರ್ಕಾರ ತೀರ್ಮಾನ

“ಇಬ್ಬರ ಮಿದುಳು ಸರಿಯಾಗಿ ಕೆಲಸ ಮಾಡದಂತೆ ತಡೆಯುವ ಯಾವುದೋ ವಸ್ತುವನ್ನು ಬಹುಶಃ ಅವರಿಬ್ಬರೂ ಸೇವಿಸುತ್ತಿದ್ದಾರೆ ಎನಿಸುತ್ತದೆ. ಅದಕ್ಕೆ ಬದಲಾಗಿ ಅವರು ‘ಗೋಮೂತ್ರ’ ಸೇವಿಸಿದರೆ ಉತ್ತಮವೇನೋ,” ಎಂದು ಠಾಕೂರ್ ವ್ಯಂಗ್ಯವಾಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *