ದೆಹಲಿಯಲ್ಲಿ ಸೆಪ್ಟೆಂಬರ್ 12-13 ಕ್ಕೆ ‘ಬ್ರಿಕ್ಸ್’ ಶೃಂಗಸಭೆ: ಪುಟಿನ್, ಷಿ ಜಿನ್‌ಪಿಂಗ್, ಪೆಜೆಶ್ಕಿಯಾನ್ ಭಾಗಿ ಸಾಧ್ಯತೆ

ದೆಹಲಿ: ಭಾರತವು ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ ಆಯೋಜಿಸಲಿರುವ ಪ್ರತಿಷ್ಠಿತ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾಗವಹಿಸುವ ನಿರೀಕ್ಷೆಯಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಇರಾನ್ ಮತ್ತು ಯುಎಇ ನಡುವೆ ಭಿನ್ನಾಭಿಪ್ರಾಯ ತೀವ್ರಗೊಂಡಿರುವ ಬೆನ್ನಲ್ಲೇ ಈ ಶೃಂಗಸಭೆ ಆಯೋಜನೆಗೊಳ್ಳುತ್ತಿರುವುದು ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿದೆ.

ಈ ಶೃಂಗಸಭೆಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಜಾಗತಿಕ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ (Bilateral Meetings) ನಡೆಸುವ ಸಾಧ್ಯತೆಯಿದೆ ಎಂದು ಸಿದ್ಧತೆಗಳ ಕುರಿತು ತಿಳಿದಿರುವ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮೇಲ್ಮನವಿಗೆ ರಾಜ್ಯ ಸರ್ಕಾರ ತೀರ್ಮಾನ

ಒಂದು ವೇಳೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ದೆಹಲಿ ಭೇಟಿ ಅಧಿಕೃತಗೊಂಡರೆ, ಇದು 2019 ರ ಅಕ್ಟೋಬರ್ (ತಮಿಳುನಾಡಿನ ಮಾಮಲ್ಲಪುರಂ ಸಭೆ) ಬಳಿಕ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಪ್ರವಾಸವಾಗಲಿದೆ. 2020 ರ ಲಡಾಖ್ ಗಡಿ ಸಂಘರ್ಷದ ನಂತರ ಉಭಯ ದೇಶಗಳ ಬಾಂಧವ್ಯ ತೀವ್ರ ಹರಿದುಹೋಗಿತ್ತು.ಕಳೆದ ಕೆಲ ತಿಂಗಳುಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ಶಮನಗೊಂಡಿದ್ದು, ಮೋದಿ ಹಾಗೂ ಷಿ ಜಿನ್‌ಪಿಂಗ್ ಅವರು ಇತ್ತೀಚೆಗೆ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ವೇಳೆ ಭೇಟಿಯಾಗಿ ಚರ್ಚಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *