ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ (VIP) ದರ್ಶನ ಕೊಡಿಸುವುದಾಗಿ ನಂಬಿಸಿ ಕರ್ನಾಟಕ ಮೂಲದ ಮಹಿಳೆಯೊಬ್ಬರಿಗೆ ವಂಚಿಸಿದ್ದ ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮಹಿಳೆಯಿಂದ ಪಡೆಯಲಾಗಿದ್ದ 4,000 ರೂ. ಹಣವನ್ನು ಪೂರ್ಣವಾಗಿ ವಾಪಸ್ ಕೊಡಿಸಿ, ಅವರಿಗೆ ಉಚಿತವಾಗಿ ದೇವಸ್ಥಾನದ ದರ್ಶನ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ. ಪೊಲೀಸರ ಈ ತಕ್ಷಣದ ಕಾರ್ಯಾಚರಣೆಗೆ ಹಾಗೂ ಮಾನವೀಯತೆಗೆ ಸಾರ್ವಜನಿಕರು ಮತ್ತು ಭಕ್ತಾದಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಿಂದ ಕಾಶಿ ಯಾತ್ರೆಗೆ ತೆರಳಿದ್ದ ಮಹಿಳೆಯನ್ನು ದೇವಾಲಯದ ಹೊರಭಾಗದಲ್ಲಿದ್ದ ಮಧ್ಯವರ್ತಿಯೊಬ್ಬ (Broker) ಸಂಪರ್ಕಿಸಿದ್ದ. ಬೇಗನೆ ಹಾಗೂ ಹತ್ತಿರದಿಂದ ವಿಐಪಿ ದರ್ಶನ ಮಾಡಿಸುವುದಾಗಿ ನಂಬಿಸಿ ಆಕೆಯಿಂದ 4,000 ರೂ. ಪಡೆದುಕೊಂಡಿದ್ದ. ಹಣ ಪಡೆದ ನಂತರ ಮಧ್ಯವರ್ತಿ ಕಾಲ್ಕಿತ್ತಿದ್ದರಿಂದ ತಮಗಾದ ವಂಚನೆಯನ್ನು ಅರಿತ ಮಹಿಳೆ ತಕ್ಷಣವೇ ಅಲ್ಲಿದ್ದ ಪೊಲೀಸ್ ಚೌಕಿಗೆ ತೆರಳಿ ದೂರು ನೀಡಿದ್ದರು.
ಇದನ್ನೂ ಓದಿ:‘ಗಡಾಯಿಕಲ್ಲು’ ಚಾರಣಕ್ಕೆ ತಾತ್ಕಾಲಿಕ ನಿಷೇಧ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ, ಗುಡ್ಡ ಕುಸಿತ ಆಗುವ ಸಾಧ್ಯತೆ
ಇಲ್ಲಿದೆ ನೋಡಿ ವಿಡಿಯೋ:
वाराणसी: के काशी विश्वनाथ मंदिर में एक दलाल ने VIP दर्शन करने का झांसा देकर महिला से 4000 रुपया ले लिया ,
वक्त रहते पुलिस वाले ने दलाल को पकड़ कर महिला के 4000 रुपया वापिस दिलवाया ,
अंधभक्ति में लोग डूब चुके है , pic.twitter.com/NqBMGdwed4
— Rakesh Baroha (@RBaroha2000) August 3, 2026
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಾರಣಾಸಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಮಧ್ಯವರ್ತಿಯನ್ನು ಹಿಡಿದು ಆತನಿಂದ 4,000 ರೂ. ಹಣವನ್ನು ವಶಪಡಿಸಿಕೊಂಡರು. ಬಳಿಕ ಮಹಿಳೆಗೆ ಹಣ ಹಿಂತಿರುಗಿಸಿ, ಗೌರವಯುತವಾಗಿ ಉಚಿತ ವಿಐಪಿ ದರ್ಶನದ ವ್ಯವಸ್ಥೆ ಮಾಡಿಕೊಟ್ಟರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

