Breaking News

ಮೋಂತಿಮಾರಿನಲ್ಲಿ ಆ.9ರಂದು ಆಧಾರ್, ಆಯುಷ್ಮಾನ್, ಆರೋಗ್ಯ ವಿಮೆ, ಇ-ಶ್ರಮ ಕಾರ್ಡ್ ನೋಂದಣಿ ಶಿಬಿರ, ಬೇಕಾದ ದಾಖಲೆಗಳು ಹೀಗಿವೆ

ಬಂಟ್ವಾಳ: ದುರ್ಗಿ ಸೇವಾ ವೇದಿಕೆ, ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಪುತ್ತೂರು ಅಂಚೆ ಇಲಾಖೆಯ ಸಹಯೋಗದಲ್ಲಿ ಆಧಾರ್ ಸೇವೆಗಳು, ಆಯುಷ್ಮಾನ್ ಕಾರ್ಡ್, ಆರೋಗ್ಯ ವಿಮೆ, ಅಪಘಾತ ವಿಮೆ ಹಾಗೂ ಇ-ಶ್ರಮ ಕಾರ್ಡ್ ನೋಂದಣಿ ಶಿಬಿರವನ್ನು ಆ.9ರಂದು ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳದ ಸಹಯೋಗದಲ್ಲಿ ವನಮಹೋತ್ಸವ ಹಾಗೂ ಉಚಿತ ಸಸಿ ವಿತರಣೆ ಕಾರ್ಯಕ್ರಮವೂ ನಡೆಯಲಿದೆ.

ಶಿಬಿರದಲ್ಲಿ ಹೊಸ ಆಧಾರ್ ನೋಂದಣಿ, ಆಧಾರ್ ತಿದ್ದುಪಡಿ, ಆಯುಷ್ಮಾನ್ ಕಾರ್ಡ್, ಆರೋಗ್ಯ ವಿಮೆ, ಅಪಘಾತ ವಿಮೆ ಹಾಗೂ ಇ-ಶ್ರಮ ಕಾರ್ಡ್ ನೋಂದಣಿ ಸೌಲಭ್ಯಗಳು ಲಭ್ಯವಿರಲಿವೆ. ಪ್ರತಿ ಸೇವೆಗೆ ಅಗತ್ಯ ದಾಖಲೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ತರಬೇಕು. ಶಿಬಿರವು ಬೆಳಗ್ಗೆ 9ರಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ಆಧಾರ್ (18 ವರ್ಷದೊಳಗಿನವರಿಗೆ): ಜನನ ಪ್ರಮಾಣಪತ್ರ, ಪೋಷಕರ ಆಧಾರ್ ಕಾರ್ಡ್ ಹಾಗೂ ಪೋಷಕರ ಉಪಸ್ಥಿತಿ ಕಡ್ಡಾಯ.

ಜನ್ಮದಿನಾಂಕ ತಿದ್ದುಪಡಿ: ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ/ಪಿಯುಸಿ ಪ್ರಮಾಣಪತ್ರ, ಪಿಂಚಣಿ ಪಾವತಿ ಆದೇಶದ ಮೂಲ ಪ್ರತಿ

ದಾಖಲೆ ಅಗತ್ಯವಿಲ್ಲದ ಸೇವೆಗಳು: ಇ-ಮೇಲ್ ತಿದ್ದುಪಡಿ, ಲಿಂಗ ಬದಲಾವಣೆ, ಮೊಬೈಲ್ ಸಂಖ್ಯೆ ತಿದ್ದುಪಡಿ ಹಾಗೂ ಬಯೋಮೆಟ್ರಿಕ್ (ಫೋಟೋ, ಫಿಂಗರ್‌ಪ್ರಿಂಟ್) ಅಪ್‌ಡೇಟ್.

ಹೆಸರು ತಿದ್ದುಪಡಿ: ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ರೇಷನ್ ಕಾರ್ಡ್ ಅಥವಾ ಚಾಲನಾ ಪರವಾನಗಿ.

ವಿಳಾಸ ಬದಲಾವಣೆ: ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಅಥವಾ ವಾಸ್ತವ್ಯ ದೃಢೀಕರಣ ಪತ್ರ.

ಆಯುಷ್ಮಾನ್ ಕಾರ್ಡ್: ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಫಲಾನುಭವಿಯ ಉಪಸ್ಥಿತಿ (ಲೈವ್ ಫೋಟೋ ಕಡ್ಡಾಯ).

ಅಪಘಾತ ವಿಮೆ: 18ರಿಂದ 65 ವರ್ಷದವರಿಗೆ 10 ಲಕ್ಷ ರೂ. ಕವರೇಜ್‌ಗೆ ವಾರ್ಷಿಕ ಪ್ರೀಮಿಯಂ ₹549/₹550 ಹಾಗೂ 15 ಲಕ್ಷ ರೂ. ಕವರೇಜ್‌ಗೆ ₹749 ನಿಗದಿಪಡಿಸಲಾಗಿದೆ. ಆಧಾರ್ ಕಾರ್ಡ್, ನಾಮಿನಿಯ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಅಗತ್ಯ.

ಇದನ್ನೂ ಓದಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಆರೋಗ್ಯ ವಿಮೆ: 18ರಿಂದ 65 ವರ್ಷದವರಿಗೆ ಒಬ್ಬರಿಗೆ ₹776, ಪತಿ-ಪತ್ನಿಗೆ ₹1,247, ಪತಿ-ಪತ್ನಿ ಹಾಗೂ ಒಂದು ಮಗುವಿಗೆ ₹1,604, ಪತಿ-ಪತ್ನಿ ಹಾಗೂ ಎರಡು ಮಕ್ಕಳಿಗೆ ₹1,956 ಪ್ರೀಮಿಯಂ ನಿಗದಿಯಾಗಿದ್ದು, ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಇ-ಶ್ರಮ ಕಾರ್ಡ್: ಆಧಾರ್ ಕಾರ್ಡ್, ನಾಮಿನಿಯ ಆಧಾರ್, ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್ ಹಾಗೂ ಫಲಾನುಭವಿಯ ಉಪಸ್ಥಿತಿ ಕಡ್ಡಾಯವಾಗಿದ್ದು, ಬಯೋಮೆಟ್ರಿಕ್ ಪ್ರಕ್ರಿಯೆ ನಡೆಯಲಿದೆ.

ಇದಲ್ಲದೆ, ವಾರ್ಷಿಕ 1,306 ರೂ. ಪ್ರೀಮಿಯಂ ಪಾವತಿಸುವ ಮೂಲಕ ಅಂಚೆ ಇಲಾಖೆಯ 10 ಲಕ್ಷ ರೂ. ಅಪಘಾತ ವಿಮೆ ಹಾಗೂ 15 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಆಧಾರ್ ನೋಂದಣಿ ಅಥವಾ ತಿದ್ದುಪಡಿಗಳಿಗೆ ಅಂಚೆ ಇಲಾಖೆ ನಿಗದಿಪಡಿಸಿರುವ ಶುಲ್ಕವನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8277651395, 8904227771, 9945668752 ಸಂಖ್ಯೆಗೆ ಸಂಪರ್ಕಿಸಬಹುದು.

ಮತ್ತಷ್ಟು  ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *