Breaking News

ಚಿನ್ನ ಪ್ರಿಯರಿಗೆ ಇದು ಮಹತ್ವದ ಸುದ್ದಿ; ಇಲ್ಲಿದೆ ನೋಡಿ

ಕಳೆದ ವಾರ ಬರೋಬ್ಬರಿ ಭಾರಿ ಏರಿಕೆ ಕಂಡು ಗ್ರಾಹಕರಿಗೆ ಶಾಕ್ ನೀಡಿದ್ದ ಚಿನ್ನದ ಬೆಲೆಯಲ್ಲಿ ಇಂದಿನ ವಾರದ ಮೊದಲ ದಿನವಾದ ಸೋಮವಾರ (ಆಗಸ್ಟ್ 10) ಅಲ್ಪ ಇಳಿಕೆ ಕಂಡುಬಂದಿದೆ. ಕಳೆದ ವಾರ ಗ್ರಾಮ್‌ಗೆ ಬರೋಬ್ಬರಿ ₹765 ಏರಿಕೆಯಾಗಿದ್ದ ಬಂಗಾರದ ದರ, ಇಂದು ಪ್ರತಿ ಗ್ರಾಮ್‌ಗೆ 35 ರೂ. ರಷ್ಟು ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ತುಸು ತಗ್ಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಭಾರತ ಹಾಗೂ ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ:

22 ಕ್ಯಾರಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ ₹1,39,300

24 ಕ್ಯಾರಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ ₹1,51,970

ಬೆಳ್ಳಿ ದರ: 100 ಗ್ರಾಮ್ ಬೆಳ್ಳಿಗೆ ₹24,500 (ಪ್ರತಿ ಕೆಜಿಗೆ ₹2,45,000)

ಇದನ್ನೂ ಓದಿ: 2,000 ರೂಪಾಯಿಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶುಲ್ಕ ಅನ್ವಯ?: ಸಂಸತ್ತಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಸೂದೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರಿನಲ್ಲೂ ದರ ಸ್ಥಿರವಾಗಿದ್ದು, 10 ಗ್ರಾಮ್‌ನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ₹1,39,300 ತಲುಪಿದೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ 100 ಗ್ರಾಮ್ ಬೆಳ್ಳಿ ದರ ಸುಮಾರು ₹25,000 ಗಡಿಯಲ್ಲಿದೆ. ಇನ್ನು ಗ್ರಾಹಕರು ಸಂಜೆ ಹೊತ್ತಿಗೆ ಚಿನ್ನ ಖರೀದಿ ಮಾಡಿದ್ರೆ ಇನ್ನು ಉತ್ತಮ, ಯಾಕೆಂದತರೆ ಚಿನ್ನದ ದರ ಸಂಜೆ ಹೊತ್ತಿಗೆ ನಿರ್ಧಾರವಾಗುತ್ತದೆ. ಮತ್ತೆ ಚಿನ್ನ ದರದಲ್ಲಿ ಬದಲಾಗಬಹುದು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *