Breaking News

ಪಾಕ್ ಮುಂದೆ ಯಾವುದೇ ಕಾರಣಕ್ಕೂ ಸೋಲಬಾರದು ಎಂದಿದ್ದರು: ಪ್ರಧಾನಿ ಮೋದಿ ಮುಂದೆ ಬಾಕ್ಸರ್ ನರೇಂದರ್ ಬರ್ವಾಲ್ ಕಥೆ

ದೆಹಲಿ : ಕಾಮನ್‌ವೆಲ್ತ್ ಗೇಮ್ಸ್ 2026 ರಲ್ಲಿ ಬೆಳ್ಳಿ ಪದಕ (Silver Medal) ಗೆದ್ದು ಸಾಧನೆ ಮಾಡಿರುವ ಭಾರತೀಯ ಬಾಕ್ಸರ್ ನರೇಂದರ್ ಬರ್ವಾಲ್ ಅವರು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಸಂವಾದದ ವೇಳೆ ತಮಗೆ ಎದುರಾಗಿದ್ದ ರೋಚಕ ಹಾಗೂ ಕಷ್ಟಕರ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗಿನ ಸಂಭಾಷಣೆಯಲ್ಲಿ ತಮ್ಮ ಮಿಲಿಟರಿ ಜೀವನ ಹಾಗೂ ಭಾರತ-ಪಾಕ್ ನಡುವಿನ ಬಾಕ್ಸಿಂಗ್ ಹಣಾಹಣಿಯ ಕಥೆಯನ್ನು ಹಂಚಿಕೊಂಡಿದ್ದಾರೆ. “ನನಗೊಂದು ಹಳೆಯ ಘಟನೆ ನೆನಪಿಗೆ ಬರುತ್ತಿದೆ. 2015 ರ ‘ವರ್ಲ್ಡ್ ಮಿಲಿಟರಿ ಗೇಮ್ಸ್’ (World Military Games) ಪಂದ್ಯಾವಳಿಯಲ್ಲಿ ನನ್ನ ಮೊದಲ ಬಾಕ್ಸಿಂಗ್ ಕಾಳಗ ಪಾಕಿಸ್ತಾನದ ಸ್ಪರ್ಧಿಯ ವಿರುದ್ಧವೇ ಇತ್ತು. ಅದು ಸೇನಾ ಕ್ರೀಡಾಕೂಟವಾಗಿದ್ದರಿಂದ ನಮ್ಮ ಮಿಲಿಟರಿ ಮೇಲಧಿಕಾರಿಗಳು ನನಗೆ ಫೋನ್ ಮಾಡಿ, ‘ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಸೋಲಬಾರದು’ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು” ಎಂದು ನರೇಂದರ್ ತಿಳಿಸಿದರು.

“ಸೇನಾಧಿಕಾರಿಗಳ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಆಡಿದ ನಾನು ಮೊದಲ ರೌಂಡ್‌ನಲ್ಲಿ 4–1 ಮತ್ತು ಎರಡನೇ ರೌಂಡ್‌ನಲ್ಲಿ 3–2 ಅಂತರದ ಮುನ್ನಡೆ ಸಾಧಿಸಿದೆ. ಆದರೆ ಪಂದ್ಯದ ವೇಳೆ ಆಕಸ್ಮಿಕವಾಗಿ ಇಬ್ಬರ ತಲೆಗಳು ಬಲವಾಗಿ ಡಿಕ್ಕಿ ಹೊಡೆದವು. ಪರಿಣಾಮ ಇಬ್ಬರ ತಲೆಗೂ ತೀವ್ರ ಗಾಯವಾಗಿ ರಕ್ತ ಒಸರಲು ಶುರುವಾಯಿತು. ಅಂತಿಮವಾಗಿ ನಾನು ಆ ಪಂದ್ಯವನ್ನು ಗೆದ್ದೆ. ಆದರೆ ಆಟ ಮುಗಿದ ತಕ್ಷಣ ನಾವಿಬ್ಬರೂ (ಭಾರತ ಮತ್ತು ಪಾಕಿಸ್ತಾನದ ಆಟಗಾರರು) ನೇರವಾಗಿ ಆಸ್ಪತ್ರೆಗೆ ತೆರಳಿ ತಲೆಗೆ ಹೊಲಿಗೆ (Stitches) ಹಾಕಿಸಿಕೊಳ್ಳಬೇಕಾಯಿತು!” ಎಂದು ನರೇಂದರ್ ಬರ್ವಾಲ್ ನಗುತ್ತಲೇ ಪ್ರಧಾನಿ ಮೋದಿ ಅವರಿಗೆ ವಿವರಿಸಿದರು.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜ್ಞಾನೇಶ್ವರಿ ಯಾದವ್‌ಗೆ ಅಭಿನಂದನೆ: ಡಿಎಸ್‌ಪಿ ಹುದ್ದೆ, 30 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಸಿಎಂ

ದೇಶಕ್ಕಾಗಿ ಯಾವುದೇ ಕಷ್ಟ ಬಂದರೂ ಹೋರಾಡುವ ಕ್ರೀಡಾಪಟುಗಳ ಹಾಗೂ ಯೋಧರ ಈ ಮನೋಭಾವವನ್ನು ಪ್ರಧಾನಿ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *