Breaking News

ಸಾಕು ನಾಯಿಗಳನ್ನು ಬೀದಿಗೆ ಬಿಟ್ಟರೆ 25,000 ದಂಡ

ಚೆನ್ನೈ : ಮನೆಯಲ್ಲಿ ಸಾಕಿದ ನಾಯಿಗಳನ್ನು ರಸ್ತೆ ಅಥವಾ ಬೀದಿಗಳಲ್ಲಿ ಬಿಸಾಡಿ/ಬಿಟ್ಟು ಹೋಗುವ (Abandoning) ಮಾಲೀಕರಿಗೆ ತಮಿಳುನಾಡಿನ ಬೃಹತ್ ಚೆನ್ನೈ ಮಹಾನಗರ ಪಾಲಿಕೆ (GCC) ಭಾರಿ ಶಾಕ್ ನೀಡಲು ಮುಂದಾಗಿದೆ. ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಹಾಗೂ ಸಾಕುಪ್ರಾಣಿಗಳನ್ನು ತೊರೆಯುವ ಪ್ರವೃತ್ತಿಗೆ ತಡೆ ಹಾಕಲು ₹25,000 ದಂಡ ವಿಧಿಸುವ ಪ್ರಸ್ತಾಪವನ್ನು ಸಿದ್ಧಪಡಿಸಲಾಗಿದೆ. ಈ ಪ್ರಸ್ತಾಪಕ್ಕೆ ಮುಂಬರುವ ಪಾಲಿಕೆ ಕೌನ್ಸಿಲ್ (Corporation Council) ಸಭೆಯಲ್ಲಿ ಅನುಮೋದನೆ ಸಿಕ್ಕ ತಕ್ಷಣವೇ ನಿಯಮ ಜಾರಿಗೆ ಬರಲಿದ್ದು, ಸಾಕು ನಾಯಿಗಳನ್ನು ರಸ್ತೆಗೆ ಬಿಡುವ ಮಾಲೀಕರಿಂದ ದಂಡ ವಸೂಲಿ ಮಾಡಲಾಗುತ್ತದೆ.

ಸ್ತುತ ಚೆನ್ನೈನಲ್ಲಿ ಸಾಕು ನಾಯಿಗಳನ್ನು ಬೀದಿಗೆ ಬಿಡುವ ಮಾಲೀಕರ ವಿರುದ್ಧ ಯಾವುದೇ ನಿರ್ದಿಷ್ಟ ದಂಡದ ನಿಯಮವಿಲ್ಲ. ಸಾಕುಪ್ರಾಣಿಗಳನ್ನು ಹೀಗೆ ರಸ್ತೆಗೆ ಬಿಡುವುದರಿಂದಲೇ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈ ಪಾಲಿಕೆಯ 15 ವಲಯಗಳಲ್ಲಿ ಒಟ್ಟು 1,15,548 ನೋಂದಾಯಿತ ಸಾಕುಪ್ರಾಣಿಗಳಿವೆ. ಇವುಗಳಲ್ಲಿ 78,328 ನಾಯಿಗಳಿಗೆ ಮೈಕ್ರೋಚಿಪ್ (Microchip) ಅಳವಡಿಸಲಾದ ಲೈಸೆನ್ಸ್ ನೀಡಲಾಗಿದೆ. ಯಾವುದೇ ನಾಯಿಯನ್ನು ರಸ್ತೆಯಲ್ಲಿ ಬಿಟ್ಟರೆ, ಈ ಮೈಕ್ರೋಚಿಪ್ ಸ್ಕ್ಯಾನ್ ಮಾಡಿ ಮಾಲೀಕರನ್ನು ಸುಲಭವಾಗಿ ಪತ್ತೆಹಚ್ಚಿ ದಂಡ ವಿಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು

2026 ರ ಮೊದಲ ಆರು ತಿಂಗಳಲ್ಲೇ ಚೆನ್ನೈ ಪಾಲಿಕೆಗೆ ಬೀದಿ ನಾಯಿಗಳ ಕಾಟದ ಕುರಿತು ಬರೋಬ್ಬರಿ 15,477 ದೂರುಗಳು ಬಂದಿವೆ. ಗರಿಷ್ಠ ದೂರುಗಳು ತೊಂಡಿಯಾರ್‌ಪೇಟೆ (1,869 ದೂರುಗಳು) ವಲಯದಿಂದ ದಾಖಲಾಗಿವೆ. ರಾಯಪುರಂ, ಅಣ್ಣಾನಗರ, ತೇನಾಂಪೇಟೆ, ಕೋಡಂಬಾಕಂ ಮತ್ತು ಅಡ್ಯಾರ್ ವಲಯಗಳಲ್ಲೂ ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಪಾಲಿಕೆಯು ಕಳೆದ 6 ತಿಂಗಳಲ್ಲಿ 26,498 ನಾಯಿಗಳನ್ನು ಸಂತಾನಶಕ್ತಿ ಹರಣ (ABC) ಚಿಕಿತ್ಸೆಗೆ ಒಳಪಡಿಸಿದೆ.

ಇಂದಿನಿಂದ ಚೆನ್ನೈ ಪಾಲಿಕೆಯು ಬೃಹತ್ ರೇಬೀಸ್ ವಿರೋಧಿ ಲಸಿಕಾ ಅಭಿಯಾನಕ್ಕೆ (Anti-Rabies Vaccination Drive) ಚಾಲನೆ ನೀಡಿದೆ. ತಿರುವೊಟ್ಟಿಯೂರ್, ಮನಾಲಿ ಹಾಗೂ ತೊಂಡಿಯಾರ್‌ಪೇಟೆ ವಲಯಗಳಿಂದ ಈ ಅಭಿಯಾನ ಆರಂಭವಾಗಲಿದ್ದು, ಪ್ರತಿದಿನ ಸುಮಾರು 3,000 ನಾಯಿಗಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಮುಂದಿನ 75 ಕೆಲಸದ ದಿನಗಳಲ್ಲಿ ಸುಮಾರು 2 ಲಕ್ಷ ನಾಯಿಗಳಿಗೆ ಉಚಿತವಾಗಿ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ. ಮನೆಗಳಲ್ಲಿ ಸಾಕುವ ನಾಯಿ ಹಾಗೂ ಬೆಕ್ಕುಗಳಿಗೂ ಈ ಉಚಿತ ಲಸಿಕೆ ದೊರೆಯಲಿದೆ. (ಕಳೆದ ವರ್ಷ 1.47 ಲಕ್ಷ ನಾಯಿಗಳಿಗೆ ಲಸಿಕೆ ಹಾಕಲಾಗಿತ್ತು.

ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *