ಛತರ್ಪುರ : ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ಲವ್ಕುಶ್ನಗರದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ನಾಲ್ಕು ಕೈಗಳು ಹಾಗೂ ನಾಲ್ಕು ಕಾಲುಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಸ್ಮಯಕಾರಿ ಮಗುವಿನ ಜನನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಜನ ಸಾಗರವೇ ಹರಿದುಬಂದಿದೆ.
ವೈದ್ಯರ ಪ್ರಕಾರ, ಇಂತಹ ಪ್ರಕರಣಗಳು ಅತ್ಯಂತ ಅಪರೂಪ ಗರ್ಭಾವಸ್ಥೆಯಲ್ಲಿ ಅವಳಿ ಭ್ರೂಣಗಳು (Twin fetuses) ಬೆಳೆಯುವ ಸಮಯದಲ್ಲಿ, ಒಂದರ ಬೆಳವಣಿಗೆ ಸರಿಯಾಗಿ ಆಗದೆ ಅಪೂರ್ಣಗೊಂಡಾಗ (Incomplete development of twin fetuses) ಇಂತಹ ವಿಚಿತ್ರ ದೈಹಿಕ ವ್ಯತ್ಯಾಸಗಳು ಉಂಟಾಗುತ್ತವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆರ್ಆರ್ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಮಗು ಮತ್ತು ತಾಯಿಯ ಪ್ರಸ್ತುತ ಆರೋಗ್ಯ ಪರಿಸ್ಥಿತಿಯ ಕುರಿತು ವೈದ್ಯರ ತಂಡ ಕಟ್ಟುನಿಟ್ಟಿನ ನಿಗಾ ವಹಿಸಿದೆ.

