ಪುಣೆ: ಬೆಲ್ಲದ ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕುದಿಯುವ ಬೆಲ್ಲದ ಕೊಪ್ಪರಿಗೆಗೆ ಬಿದ್ದು 25 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾಡವ್ ಗಂಜ್‌ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮೂಡಿ ಗ್ರಾಮದ ನಿವಾಸಿ ಡ್ಯಾನಿಶ್ (25) ಮೃತಪಟ್ಟ ಯುವಕ. ಈ ಇಡೀ ಭೀಕರ ದೃಶ್ಯಾವಳಿಯು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುಣೆ ಜಿಲ್ಲೆಯ ಮಾಡವ್ ಗಂಜ್‌ನಲ್ಲಿರುವ ಬೆಲ್ಲ ಉತ್ಪಾದನಾ ಘಟಕದಲ್ಲಿ (Jaggery Plant) ಕೆಲಸ ಮಾಡುತ್ತಿದ್ದ ವೇಳೆ, ಡ್ಯಾನಿಶ್ ಹಠಾತ್ತಾಗಿ ನಿಯಂತ್ರಣ ತಪ್ಪಿ ಕುದಿಯುವ ಬೆಲ್ಲದ ಬೃಹತ್ ಕೊಪ್ಪರಿಗೆಗೆ (Boiling Jaggery Vat) ಬಿದ್ದಿದ್ದಾನೆ.
ಇದನ್ನೂ ಓದಿ: ಆರ್‌ಆರ್‌ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಘಟನೆ ನಡೆದ ತಕ್ಷಣ ಅಲ್ಲೇ ಇದ್ದ ಸಹೋದ್ಯೋಗಿಗಳು ಆತನನ್ನು ಕೊಪ್ಪರಿಗೆಯಿಂದ ಹೊರತೆಗೆದು ತಕ್ಷಣವೇ ಸಮೀಪದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.ತೀವ್ರ ಪ್ರಮಾಣದ ಸುಟ್ಟ ಗಾಯಗಳಿಂದ ನರಳುತ್ತಿದ್ದ ಡ್ಯಾನಿಶ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

