Breaking News

ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ: ಸಿಎಂ ಡಿಕೆ ಶಿವಕುಮಾರ್‌ಗೆ ಪತ್ರ ಬರೆದು ಕರ್ನಾಟಕ ಸರ್ಕಾರದ ಬೆಂಬಲ ಕೋರಿದ ಎಂಪಿ ಬ್ರಿಜೇಷ್ ಚೌಟ

ಮಂಗಳೂರು : ರೈಲ್ವೆ ಮಂಡಳಿಯ (Railway Board) ನಿರ್ಧಾರದಂತೆ ಮುಂಬರುವ 2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ವಲಯವನ್ನು ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ಈ ನಿರ್ಧಾರಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕೋರಿ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಸದ ಜೇಷ್ ಚೌಟ  ಪತ್ರ ಬರೆದಿದ್ದಾರೆ.

ಈ ಕುರಿತು ಕೇರಳ ರಾಜ್ಯ ಸರ್ಕಾರವು ರೈಲ್ವೆ ಮಂಡಳಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿರುವುದರಿಂದ, ಕರ್ನಾಟಕ ರಾಜ್ಯವೂ ತಕ್ಷಣವೇ ಸ್ಪಂದಿಸಿ ಮೈಸೂರು ವಿಭಾಗಕ್ಕೆ ಮಂಗಳೂರನ್ನು ಸೇರಿಸುವ ಸುದೀರ್ಘ ಬೇಡಿಕೆಗೆ ಅಧಿಕೃತ ಬೆಂಬಲ ಕೋರಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ರೈಲ್ವೇ ಮಂಡಳಿಯು ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು 2026ರ ಅಕ್ಟೋಬರ್ 1ರ ದಿನಾಂಕವನ್ನು ಅಧಿಸೂಚಿಸಿದೆ.

ಇದನ್ನೂ ಓದಿ: ಮಂಗಳೂರು ರೈಲ್ವೇ ವಿಲೀನಕ್ಕೆ ಕೇರಳ ತೀವ್ರ ಆಕ್ರೋಶ: ಪ್ರಧಾನಿ ಮೋದಿ, ರೈಲ್ವೇ ಸಚಿವರಿಗೆ ದೂರು ನೀಡಲು ತೀರ್ಮಾನ

ಇಲ್ಲಿದೆ ನೋಡಿ ಪೋಸ್ಟ:


ಈ ಹೆಜ್ಜೆಯು ನೆರೆ ರಾಜ್ಯವಾದ ಕೇರಳದ ವಿರುದ್ಧದ ನಿಲುವಲ್ಲ. ಬದಲಾಗಿ ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ರೈಲ್ವೆ ಆಡಳಿತಾತ್ಮಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯವಾದ ರಾಜ್ಯದ ಹಿತಾಸಕ್ತಿಯಾಗಿದೆ. ಕರ್ನಾಟಕದ ಕರಾವಳಿ ಭಾಗದ ಜನರು ಹಾಗೂ ಪ್ರಯಾಣಿಕರು ಸುದೀರ್ಘ ಕಾಲದಿಂದ ಇಟ್ಟಿರುವ ಈ ನ್ಯಾಯಯುತ ಬೇಡಿಕೆಯ ಪರವಾಗಿ ಕರ್ನಾಟಕ ಸರ್ಕಾರವು ಗಟ್ಟಿಯಾಗಿ ನಿಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *