Breaking News

ಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿ ಕ್ರಾಂತಿ ಕಂಡು ಬೆರಗಾದ ಫ್ರೆಂಚ್ ಮಹಿಳೆ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಭಾರತದಲ್ಲಿ ಡಿಜಿಟಲ್ ಪಾವತಿ (Digital Payments) ಹಾಗೂ ಯುಪಿಐ (UPI) ವ್ಯವಸ್ಥೆ ಎಷ್ಟು ವ್ಯಾಪಕವಾಗಿ ಬಳಕೆಗೊಳ್ಳುತ್ತಿದೆ ಎಂಬುದನ್ನು ನೋಡಿ ಫ್ರಾನ್ಸ್ ದೇಶದ ಮಹಿಳೆಯೊಬ್ಬರು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ (@experiencesacree.inde) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಆಕೆ, ಚಹಾ ಅಂಗಡಿಯಿಂದ ಹಿಡಿದು ರಸ್ತೆಬದಿಯ ತಿನಿಸು ಮಾರಾಟಗಾರರು, ಆಟೋರಿಕ್ಷಾಗಳು ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲೂ ಕ್ಯೂಆರ್ ಕೋಡ್ (QR Code) ಮೂಲಕ ಸುಲಭವಾಗಿ ಹಣ ಪಾವತಿಸುವ ಭಾರತದ ವ್ಯವಸ್ಥೆಯನ್ನು ಕಂಡು ಬೆರಗಾಗಿದ್ದಾರೆ.

Video:


ಫ್ರೆಂಚ್ ಮಹಿಳೆ ಹೇಳಿದ್ದೇನು?:

ಹೋದೆಡೆಯಲ್ಲೆಲ್ಲಾ ಕ್ಯೂಆರ್ ಕೋಡ್: “ಫ್ರೆಂಚ್ ಮಹಿಳೆಯಾಗಿ ಭಾರತದಲ್ಲಿ ನನ್ನ ಮೊಬೈಲ್ ಮೂಲಕವೇ ಪ್ರತಿಯೊಂದಕ್ಕೂ ಹಣ ಪಾವತಿ ಮಾಡುತ್ತೇನೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ರಸ್ತೆ ಬದಿಯ ಫುಡ್, ಚಹಾ, ಆಟೋ ಅಥವಾ ಬೀದಿಯ ಸಣ್ಣ ಅಂಗಡಿಯಿರಲಿ, ಎಲ್ಲೆಡೆಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು” ಎಂದು ಹೇಳಿದ್ದಾರೆ.

“ಭಾರತಕ್ಕೆ ಬರುವ ಮುನ್ನ ನನಗೆ ಯುಪಿಐ ಬಗ್ಗೆ ತಿಳಿದಿತ್ತು. ಆದರೆ ಇದು ದೈನಂದಿನ ಜೀವನದಲ್ಲಿ ಇಷ್ಟೊಂದು ಆಳವಾಗಿ ಬೆರೆತುಹೋಗಿದೆ ಎಂದು ಭಾವಿಸಿರಲಿಲ್ಲ. ₹20 ಮೊತ್ತದ ತಿಂಡಿಗೂ ಸ್ಕ್ಯಾನ್ ಮಾಡಿ ಪಾವತಿಸಿ ಮುಗಿಸಬಹುದು. ಇದು ಫ್ರಾನ್ಸ್‌ಗೆ ಹೋಲಿಸಿದರೆ ನನಗಂತೂ ದೊಡ್ಡ ಅಚ್ಚರಿ ಮೂಡಿಸಿದೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವೈವಿಧ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು

“ವಿದೇಶಿಗರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಭಾರತದಲ್ಲಿ ಇದು ಕಳೆದ 10 ವರ್ಷಗಳಿಂದ ನಡೆಯುತ್ತಿದೆ. ನಾನು ಕಳೆದ 4 ವರ್ಷಗಳಿಂದ ನಗದು (Cash) ಮುಟ್ಟೇ ಇಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.”ಪೂರ್ವವೇ ಆಗಲಿ, ಪಶ್ಚಿಮವೇ ಆಗಲಿ… ಭಾರತವೇ ಎಂದಿಗೂ ಶ್ರೇಷ್ಠ (Go East or West, India is The Best)” ಎಂದು ಬರೆದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *