Breaking News

ನೇಪಾಳದಲ್ಲಿ ಭೀಕರ ಪ್ರವಾಹ: 105 ಭಾರತೀಯ ಪ್ರವಾಸಿಗರು ನಾಪತ್ತೆ; ರಕ್ಷಣಾ ಕಾರ್ಯಾಚರಣೆ ತೀವ್ರ

ಖಠ್ಮಂಡು: ಟಿಬೆಟ್ ಗಡಿಗೆ ಸಮೀಪವಿರುವ ನೇಪಾಳದ ರಸುವಾ (Rasuwa) ಜಿಲ್ಲೆಯಲ್ಲಿ ಬುಧವಾರ ಹಠಾತ್ ಸಂಭವಿಸಿದ ಭೀಕರ ಪ್ರವಾಹದಿಂದಾಗಿ (Flash Floods) 105 ಭಾರತೀಯ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ. ನಾಪತ್ತೆಯಾಗಿರುವ ಭಾರತೀಯರಲ್ಲಿ 31 ಜನರು ಮಾನಸಸರೋವರ ಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಾಗಿದ್ದಾರೆ.

ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹದಿಂದಾಗಿ ಒಟ್ಟು 400 ಪ್ರವಾಸಿಗರು ನಾಪತ್ತೆಯಾಗಿದ್ದು, ಇದರಲ್ಲಿ 291 ವಿದೇಶಿಯರು ಹಾಗೂ 90ಕ್ಕೂ ಹೆಚ್ಚು ಸ್ಥಳೀಯರು ಸೇರಿದ್ದಾರೆ.ನಾಪತ್ತೆಯಾದ ಭಾರತೀಯರಲ್ಲಿ 59 ಜನರು ‘ಸ್ಮಾರ್ಟ್ ಟ್ರಾವೆಲ್ಸ್’ (Smart Travels) ಮೂಲಕ ಹಾಗೂ 46 ಜನರು ‘ಲೀಫ್ ಹಾಲಿಡೇ’ ಸಂಸ್ಥೆಯ ಮೂಲಕ ಪ್ರವಾಸ ಬುಕ್ ಮಾಡಿದ್ದರು.

ನಾಪತ್ತೆಯಾದವರಲ್ಲಿ 37 ಭಾರತೀಯ ಮೂಲದ ವಿದೇಶಿಯರು (NRI) ಸೇರಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್, ಅಮೆರಿಕ (US), ಮಲೇಷ್ಯಾ, ಯುಕೆ (UK) ಹಾಗೂ ದಕ್ಷಿಣ ಆಫ್ರಿಕಾದ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ.ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸಹಾಯ ಮಾಡಲು ನೇಪಾಳ ಸರ್ಕಾರ 1144 ಎಂಬ ಉಚಿತ ತುರ್ತು ಸಹಾಯವಾಣಿ (Helpline Number) ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಖಾಂಡ್ವಾದಲ್ಲಿ ವಿನೂತನ ಪ್ರತಿಭಟನೆ: ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ

ನೇಪಾಳ ಸೇನೆಯು ಹೆಲಿಕಾಪ್ಟರ್‌ಗಳನ್ನು ಬಳಸಿ ಇದುವರೆಗೆ 12 ಜನರನ್ನು ಯಶಸ್ವಿಯಾಗಿ ರಕ್ಷಿಸಿದೆ. ಮೈಲುಂಗ್‌ನಿಂದ (Mailung) 2 ಹಾಗೂ ಧುಂಚೆಯಿಂದ (Dhunche) 4 ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡ 5 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆಯ 4 ಹೆಲಿಕಾಪ್ಟರ್‌ಗಳು ಹಾಗೂ 8 ಖಾಸಗಿ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಆರಂಭಿಕವಾಗಿ 35 ಸೇನಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸರ್ಕಾರವು ಅತ್ಯಂತ ಹಾನಿಗೊಳಗಾದ 3 ಜಿಲ್ಲೆಗಳನ್ನು ‘ಅತಿ ಸಂಕಷ್ಟ ಪೀಡಿತ’ ಎಂದು ಘೋಷಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *