ಇಂದು (ಆಗಸ್ಟ್ 27) ವಿವಿಧ ರಾಶಿಯವರ ಗ್ರಹಗತಿಗಳ ಆಧಾರದ ಮೇಲೆ ದಿನದ ಫಲಗಳು ಹೇಗಿರಲಿವೆ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ಮತ್ತು ಯಾರಿಗೆ ಶುಭಫಲ ಸಿಗಲಿದೆ ಎಂಬ ಸಂಪೂರ್ಣ ರಾಶಿ ಭವಿಷ್ಯ ಇಲ್ಲಿದೆ.
♈ ಮೇಷ ರಾಶಿ
ವಾದ-ವಿವಾದಗಳಿಂದ ದೂರವಿದ್ದು ಶಾಂತವಾಗಿರುವುದು ಇಂದಿನ ಅಗತ್ಯ. ಗತಕಾಲದ ನಷ್ಟಗಳ ಬಗ್ಗೆ ಚಿಂತಿಸಿ ಭವಿಷ್ಯ ಹಾಳುಮಾಡಿಕೊಳ್ಳಬೇಡಿ. ದಿನಚರಿಯನ್ನು ವ್ಯವಸ್ಥಿತಗೊಳಿಸಿ. ಇತರರ ಮೇಲಿನ ನಂಬಿಕೆ ಕಡಿಮೆಯಾಗಬಹುದು ಹಾಗೂ ಕೆಲಸಗಳಲ್ಲಿ ಮಂದಗತಿ ಕಂಡುಬರಲಿದೆ.
♉ ವೃಷಭ ರಾಶಿ
ದುಡುಕಿ ನಿರ್ಧಾರ ತೆಗೆದುಕೊಂಡರೆ ತೊಂದರೆ ಕಾಯಂ. ಆಕಸ್ಮಿಕ ಪ್ರಯಾಣದಿಂದ ಉದ್ಯೋಗದಲ್ಲಿ ಸ್ವಲ್ಪ ಅಡಚಣೆಯಾಗಬಹುದು. ಇತರರ ಭಾವನೆಗಳಿಗೆ ಗೌರವ ನೀಡಿ. ನಿಮ್ಮದಲ್ಲದ ವಸ್ತು ಅಥವಾ ವಿಷಯಗಳಿಗೆ ಆಸೆ ಪಡುವುದು ಸೂಕ್ತವಲ್ಲ.
♊ ಮಿಥುನ ರಾಶಿ
ಲೆಕ್ಕಪರಿಶೋಧಕರಿಗೆ (Auditors) ಕೆಲಸದ ಒತ್ತಡ ಹೆಚ್ಚಿರಲಿದೆ. ಪ್ರಯಾಣದಲ್ಲಿ ವಿಘ್ನಗಳು ಎದುರಾಗಬಹುದು. ಕುಟುಂಬದವರ ಆರೋಗ್ಯಕ್ಕಾಗಿ ಓಡಾಟ ನಡೆಸಬೇಕಾಗಬಹುದು. ಮಿತವಾಗಿ ವ್ಯವಹರಿಸಿ, ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
♋ ಕರ್ಕಾಟಕ ರಾಶಿ
ಕೋರ್ಟ್ ಮತ್ತು ನ್ಯಾಯಾಲಯದ ವ್ಯವಹಾರಗಳಲ್ಲಿ ಶುಭ ಸುದ್ದಿ ಸಿಗುವ ವಿಶ್ವಾಸ ಮೂಡಲಿದೆ. ಮೇಲಧಿಕಾರಿಗಳ ಜೊತೆ ಸಣ್ಣಪುಟ್ಟ ಅಸಮಾಧಾನ ಮೂಡಬಹುದು. ಅನಿರೀಕ್ಷಿತ ವಾರ್ತೆಗಳನ್ನು ಕೇಳುವಿರಿ, ಅತಿಯಾದ ಕೆಲಸದ ಒತ್ತಡದಿಂದ ಆತಂಕ ಹೆಚ್ಚಾಗಬಹುದು.
♌ ಸಿಂಹ ರಾಶಿ
ಸಣ್ಣತನದ ಮನೋಭಾವನೆಯನ್ನು ಬಿಡುವುದು ಒಳ್ಳೆಯದು. ಅಪರಿಚಿತ ವ್ಯಕ್ತಿಯ ದೂರವಾಣಿ ಕರೆಯಿಂದ ಧನಲಾಭವಾಗುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ಹಳೆಯ ಸ್ನೇಹಿತರ ಭೇಟಿಯಾಗಲಿದೆ.
♍ ಕನ್ಯಾ ರಾಶಿ
ವ್ಯಾಪಾರದಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವಿರಿ. ಸದ್ಯಕ್ಕೆ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲವೆಂದು ಬೇಸರ ಬೇಡ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಜಟಿಲ ಸಮಸ್ಯೆಯೊಂದಕ್ಕೆ ಹಿರಿಯರಿಂದ ಸೂಕ್ತ ಪರಿಹಾರ ಸಿಗಲಿದೆ.
♎ ತುಲಾ ರಾಶಿ
ಅತಿಯಾದ ಅಲೆದಾಟದಿಂದ ಆಯಾಸ ಹೆಚ್ಚಾಗಲಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಪ್ರಸಂಗ ಬರಬಹುದು. ಸಣ್ಣಪುಟ್ಟ ಕಿರಿಕಿರಿಗಳಿದ್ದರೂ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುವ ಸೂಚನೆಗಳಿವೆ.
♏ ವೃಶ್ಚಿಕ ರಾಶಿ
ಅಗತ್ಯವಿಲ್ಲದ ಸಲಹೆಗಳಿಗೆ ಕಿವಿಗೊಟ್ಟು ಮನಸ್ಸು ಹಾಳುಮಾಡಿಕೊಳ್ಳಬೇಡಿ. ಇಂದು ಮೌನವಾಗಿದ್ದಷ್ಟು ಶ್ರೇಯಸ್ಕರ. ಭೂ ವ್ಯವಹಾರಗಳು ಸುಖಾಂತ್ಯ ಕಾಣಲಿವೆ. ಶೀಘ್ರ ಯಶಸ್ಸಿಗಿಂತ ಕಠಿಣ ಪರಿಶ್ರಮದ ಮೇಲೆ ನಂಬಿಕೆಯಿಡಿ.
♐ ಧನು ರಾಶಿ
ಮನಸ್ಸಿನಲ್ಲಿ ನಾನಾ ಯೋಚನೆಗಳು ಬಂದು ಸ್ಥಿರತೆ ಕಳೆದುಕೊಳ್ಳುವಿರಿ. ಕೋಪ ಮತ್ತು ಉದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಶರೀರಕ್ಕೆ ಗಾಯವಾಗದಂತೆ ಎಚ್ಚರಿಕೆ ವಹಿಸಿ. ಬರಬೇಕಾದ ಬಾಕಿ ಹಣ ಬರುವುದು ಸ್ವಲ್ಪ ವಿಳಂಬವಾಗಲಿದೆ.
♑ ಮಕರ ರಾಶಿ
ಅಂದುಕೊಂಡ ಕೆಲಸವನ್ನು ಸಾಧಿಸುವ ಛಾತಿ ಇರಲಿದೆ. ಅಧಿಕಾರ ಬಳಸಿ ಆಸೆಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವಿರಿ. ವಿದ್ಯಾರ್ಥಿಗಳು ಆಟೋಟಗಳಲ್ಲಿ ಹೆಚ್ಚಿನ ಸಮಯ ಕಳೆಯಲಿದ್ದಾರೆ. ನೋವನ್ನು ಆಪ್ತರ ಬಳಿ ಹಂಚಿಕೊಳ್ಳುವುದರಿಂದ ಸಮಾಧಾನ ಸಿಗಲಿದೆ.
♒ ಕುಂಭ ರಾಶಿ
ಅತಿಯಾದ ಪ್ರಾಮಾಣಿಕತೆ ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ತಂದುಕೊಳ್ಳಬೇಡಿ. ದಿನದ ಆರಂಭ ಸಂತಸದಿಂದ ಕೂಡಿರುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸಗಳನ್ನು ಮಾಡಲು ಹೋಗದಿರಿ. ತಾಯಿಯೊಂದಿಗೆ ಅಸಮಾಧಾನ ಮೂಡದಂತೆ ನೋಡಿಕೊಳ್ಳಿ.
♓ ಮೀನ ರಾಶಿ
ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗದೆ ಶಾಂತವಾಗಿರಿ. ಅತಿಯಾದ ನಂಬಿಕೆಯಿಂದ ವಂಚನೆಯಾಗುವ ಸಾಧ್ಯತೆಯಿದೆ. ಆಪ್ತರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಅನಗತ್ಯ ವೆಚ್ಚಗಳ ಕುರಿತು ಜಾಗ್ರತೆ ವಹಿಸಿ.

