Breaking News

ನೇಪಾಳ ಪ್ರವಾಹದ ನಡುವೆ ನದಿ ತೀರದಲ್ಲಿ ಮಹಿಳೆಯ ಪ್ರಾರ್ಥನೆ: ವೈರಲ್ ವೀಡಿಯೊ ಬೆನ್ನಲ್ಲೇ ರಾಜಕೀಯ ವಾಕ್ಸಮರ

ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಕ್ಷಿಪ್ರ ಪ್ರವಾಹದ ನಡುವೆ, ಮಹಿಳೆಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯ ದಂಡೆಯಲ್ಲಿ ನಿಂತು ಗೋಧಿ ಹಿಟ್ಟು (ಅಟ್ಟಾ) ಹಾಗೂ ಪೂಜಾ ಸಾಮಗ್ರಿಗಳನ್ನು ನದಿಗೆ ಅರ್ಪಿಸಿ, “ಪ್ರಕೃತಿ ಮುನಿಸು ಶಮನಗೊಳಿಸು, ಎಲ್ಲರನ್ನೂ ಕಾಪಾಡು” ಎಂದು ದೈವಿಕ ಪ್ರಾರ್ಥನೆ ಮಾಡುತ್ತಿರುವ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವೀಡಿಯೊ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ವಿರೋಧ ಪಕ್ಷದ ಬೆಂಬಲಿಗರು, ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಎಕ್ಸ್​​ ಪೋಸ್ಟ್​:

ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನೂರಾರು ಜನರು ಬಲಿಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ನದಿ ದಂಡೆಯಲ್ಲಿ ನಿಂತು ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ನದಿ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ಜನರ ಗಮನ ಸೆಳೆದಿದೆ.

ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ

ಪ್ರಕೃತಿ ವಿಕೋಪದಂತಹ ಕಠಿಣ ಸನ್ನಿವೇಶದಲ್ಲೂ ಜನರ ಭಕ್ತಿ ಹಾಗೂ ನಂಬಿಕೆ ಕುಗ್ಗಿಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.ಈ ವೀಡಿಯೊವನ್ನು ಎಕ್ಸ್ (X) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೆಟ್ಟಿಗರು “ಆತ್ಮೀಯ ರಾಹುಲ್ ಗಾಂಧಿ ಅವರೇ, ನೀವು ಎಷ್ಟೇ ಪ್ರಯತ್ನಿಸಿದರೂ ಜನರ ಮನಸ್ಸಿನಲ್ಲಿರುವ ಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ!” ಎಂದು ಶೀರ್ಷಿಕೆ ಬರೆದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಹಿಂದುತ್ವ ಅಥವಾ ಧಾರ್ಮಿಕ ನಿಲುವುಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *