ಮುಂಬೈ: ಮಾಯಾನಗರಿ ಮುಂಬೈನ ಸಿಯಾನ್ (Sion) ಪ್ರದೇಶದಲ್ಲಿ ಕಳವಳಕಾರಿ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ಹೈ-ವೋಲ್ಟೇಜ್ ಟವರ್ ಏರಿ ಹಂಗಾಮ ಸೃಷ್ಟಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆಗಸ್ಟ್ 26ರ ಸಂಜೆ ಸುಮಾರು 7:45 ರ ಸುಮಾರಿಗೆ ವ್ಯಕ್ತಿಯೊಬ್ಬ ಟವರ್ ಏರಿರುವ ಬಗ್ಗೆ ಮುಂಬೈ ಪೊಲೀಸರಿಗೆ ಕರೆ ಬಂದಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಕಾರ್ಯಾಚರಣೆ ನಡೆಸಿದ್ದಾರೆ.
ವಿಡಿಯೋ:
Mumbai: A shocking incident was reported from the Sion area of Mumbai, where a man was seen climbing a tower, with the incident captured on camera. According to preliminary information, police received information about the incident at around 7:45 pm and immediately took note of… pic.twitter.com/MDco8aWDRo
— NextMinute News (@nextminutenews7) August 27, 2026
ಟವರ್ ಏರಿ ಹೈಡ್ರಾಮಾ ನಡೆಸಿದ ವ್ಯಕ್ತಿಯು ಮಹಾರಾಷ್ಟ್ರದ ಫಲ್ಟನ್ (Phaltan) ಮೂಲದ ವೈದ್ಯ (Doctor) ಎಂದು ಮೂಲಗಳು ತಿಳಿಸಿವೆ. ಅಗತ್ಯವಾದ ವೈದ್ಯಕೀಯ / ಸೇವಾ ಪ್ರಮಾಣಪತ್ರವನ್ನು (Certificate) ನಿಗದಿತ ಅವಧಿಯಲ್ಲಿ ಸಲ್ಲಿಸಲು ವಿಳಂಬ ಮಾಡಿದ್ದಕ್ಕೆ ಈ ವೈದ್ಯನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.
ಇದನ್ನೂ ಓದಿ: ಗಂಗಾ ನದಿ ಡಾಲ್ಫಿನ್ ಹಿಡಿದು ಮನೆಗೆ ಕೊಂಡೊಯ್ದ ಮೀನುಗಾರ ಬಂಧನ
ಕೆಲಸ ಕಳೆದುಕೊಂಡ ಆಕ್ರೋಶ ಹಾಗೂ ಮಾನಸಿಕ ಒತ್ತಡದಿಂದ ವೈದ್ಯನು ಸಿಯಾನ್‌ನಲ್ಲಿರುವ ಟವರ್ ಏರಿ ಈ ರೀತಿ ಪ್ರತಿಭಟನೆ ನಡೆಸಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವೈದ್ಯನನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

