ಕಾಠ್ಮಂಡು : ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ರಸುವಾ ಪ್ರವಾಹ ದುರಂತದ ಬೆನ್ನಲ್ಲೇ, ನೇಪಾಳದ ಪ್ರಸಿದ್ಧ ‘ಪಲಾಂಚೋಕ್ ಭಗವತಿ’ (Palanchok Bhagwati) ದೇವಸ್ಥಾನದಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ದುರಂತ ಸಂಭವಿಸುವುದಕ್ಕೂ ಸರಿಯಾಗಿ 2 ದಿನಗಳ ಮೊದಲು ಪಲಾಂಚೋಕ್ ಭಗವತಿಯ ಕಲ್ಲಿನ ಮೂರ್ತಿಯಲ್ಲಿ ಬೆವರಿನ ಹನಿಗಳು ಪ್ರತ್ಯಕ್ಷವಾಗಿದ್ದವು ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ವಿಗ್ರಹದಲ್ಲಿ ಬೆವರು ಕಾಣಿಸಿಕೊಳ್ಳುವುದು ಮುಂಬರುವ ಆಪತ್ತು ಅಥವಾ ದುರಂತದ ಲಕ್ಷಣ ಎಂದು ಕರೆಯಲಾಗುತ್ತದೆ.
ಸ್ಥಳೀಯರ ಮತ್ತು ಪೂಜಾರಿಗಳ ಪ್ರಕಾರ, ಪಲಾಂಚೋಕ್ ಭಗವತಿಯ ವಿಗ್ರಹ ಹೀಗೆ ಬೆವರುವುದು ಇದು ಮೂರನೇ ಬಾರಿಯಾಗಿದೆ. 1974ರಲ್ಲಿ ವಿಗ್ರಹದಲ್ಲಿ ಬೆವರು ಹನಿಗಳು ಕಂಡುಬಂದ ಮಾರನೇ ದಿನವೇ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. 1987ರಲ್ಲೂ ವಿಗ್ರಹದಲ್ಲಿ ಬೆವರು ಪತ್ತೆಯಾದ ಮರುದಿನವೇ ಪ್ರಕೃತಿ ವಿಕೋಪ/ಭೂಕಂಪ ಸಂಭವಿಸಿ ಭಾರಿ ಹಾನಿಯಾಗಿತ್ತು.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್;
🚨 Godess Palanchok Bhagwati already Warned Nepal two days back 🚨
Two days ago, news came that the idol of Palanchok Bhagwati had started sweating, something traditionally believed to be a bad omen.
And then this morning, the devastating Rasuwa flood happened.
This is third… pic.twitter.com/rKP7SKbxpM
— Jeet (@JeetN25) August 26, 2026
ಇದೀಗ 2 ದಿನಗಳ ಹಿಂದೆ ಮತ್ತೆ ವಿಗ್ರಹದಲ್ಲಿ ಬೆವರು ಪತ್ತೆಯಾಗಿದ್ದು, ಬೆನ್ನಲ್ಲೇ ರಸುವಾದಲ್ಲಿ ಪ್ರವಾಹ ಬಂದು ನೂರಾರು ಜನರು ಬಲಿಯಾಗಿದ್ದಾರೆ. ಈ ವಿದ್ಯಮಾನದ ಕುರಿತು ಜನರಲ್ಲಿ ಹಾಗೂ ವಿಜ್ಞಾನಿಗಳಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ವಿಜ್ಞಾನಿಗಳ ಪ್ರಕಾರ, ಕಲ್ಲಿನ ಮೂರ್ತಿಗಳ ಮೇಲೆ ತಾಪಮಾನದ ತೀವ್ರ ಬದಲಾವಣೆ, ವಾತಾವರಣದಲ್ಲಿನ ತೇವಾಂಶ (Humidity), ಆರ್ದ್ರತೆ ಹಾಗೂ ಭೂಮಿಯಾಳದಲ್ಲಿ ಆಗುವ ಭೌಗೋಳಿಕ ಒತ್ತಡದ ಬದಲಾವಣೆಯಿಂದಾಗಿ (Condensation) ಶಿಲೆಯ ಮೇಲೆ ನೀರಿನ ಹನಿಗಳು ಮೂಡುತ್ತವೆ.
ಇದನ್ನೂ ಓದಿ: ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರಕೃತಿ ವಿಕೋಪ: 160ಕ್ಕೂ ಹೆಚ್ಚು ಬಲಿ, 133ಕ್ಕೂ ಹೆಚ್ಚು ಭಾರತೀಯ ಯಾತ್ರಿಕರು ನಾಪತ್ತೆ
ಆದರೆ, ಪ್ರತಿ ಬಾರಿಯೂ ವಿಗ್ರಹ ಬೆವರುತ್ತಿದ್ದಂತೆಯೇ ನೇಪಾಳದಲ್ಲಿ ದೊಡ್ಡ ಮಟ್ಟದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದು ಕೇವಲ ಕಾಕತಾಳೀಯವೇ ಅಥವಾ ಪ್ರಕೃತಿಯ ದೈವಿಕ ಮುನ್ಸೂಚನೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ಆತಂಕವನ್ನು ಮೂಡಿಸಿದೆ.

