ಕ್ಯಾಲಿಫೋರ್ನಿಯಾ: ಜಾಗತಿಕ ಟೆಕ್ ದೈತ್ಯ ಆಪಲ್ (Apple) ತನ್ನ ಮುಂದಿನ ಬೃಹತ್ ಪ್ರಾಡಕ್ಟ್ ಲಾಂಚ್ ಇವೆಂಟ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ವರ್ಷದ ಸೆಪ್ಟೆಂಬರ್ ಲಾಂಚ್ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು, ಕಂಪನಿಯು ಬಹುನಿರೀಕ್ಷಿತ ಐಫೋನ್ 18 ಪ್ರೋ (iPhone 18 Pro) ಸರಣಿ ಹಾಗೂ ತನ್ನ ಮೊದಲ ಫೋಲ್ಡೇಬಲ್ ಐಫೋನ್ (Foldable iPhone) ಅನ್ನು ಪರಿಚಯಿಸುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 9 ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿರುವ ಆಪಲ್ ಪಾರ್ಕ್ನಲ್ಲಿ (Apple Park) ಈ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಇವೆಂಟ್ಗೆ “Surprise and shine” (ಸರ್ಪ್ರೈಸ್ ಅಂಡ್ ಶೈನ್) ಎಂಬ ಶೀರ್ಷಿಕೆ ನೀಡಲಾಗಿದೆ.ಭಾರತೀಯ ಪ್ರೇಕ್ಷಕರು ಸೆಪ್ಟೆಂಬರ್ 9 ರಂದು ರಾತ್ರಿ 10:30ಕ್ಕೆ (IST) ಆಪಲ್ ವೆಬ್ಸೈಟ್, ಯೂಟ್ಯೂಬ್ ಮತ್ತು ಆಪಲ್ ಟಿವಿ ಆಪ್ ಮೂಲಕ ಲೈವ್ ಪ್ರಸಾರ ವೀಕ್ಷಿಸಬಹುದು.
ಐಫೋನ್ 18 ಪ್ರೋ ಸರಣಿ ಮತ್ತು ಫೋಲ್ಡೇಬಲ್ ಐಫೋನ್
ಆಪಲ್ ಈ ಸಭೆಯಲ್ಲಿ ಮೂರು ಪ್ರಮುಖ ಐಫೋನ್ಗಳನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ:
iPhone 18 Pro
iPhone 18 Pro Max
iPhone Ultra (ಆಪಲ್ನ ಚೊಚ್ಚಲ ಫೋಲ್ಡೇಬಲ್ ಮಾಡೆಲ್)
ಈ ಬಾರಿ ಸಾಮಾನ್ಯ ಐಫೋನ್ 18 (Standard iPhone 18) ಸರಣಿಯು ಸೆಪ್ಟೆಂಬರ್ ಲಾಂಚ್ನಲ್ಲಿ ಇರುವುದಿಲ್ಲ. ವರದಿಗಳ ಪ್ರಕಾರ, ಆಪಲ್ ತನ್ನ ಲಾಂಚ್ ಶೆಡ್ಯೂಲ್ ಬದಲಾಯಿಸಿದ್ದು, ಬೇಸ್ ಐಫೋನ್ 18, ಐಫೋನ್ 18e ಮತ್ತು 2nd Gen ಐಫೋನ್ ಏರ್ 2027 ರ ವಸಂತ ಋತುವಿನಲ್ಲಿ ಬಿಡುಗಡೆಯಾಗಲಿವೆ.
ಐಫೋನ್ 18 ಪ್ರೋ ಪ್ರಮುಖ ವೈಶಿಷ್ಟ್ಯಗಳು
ಡಿಸೈನ್ & ಡಿಸ್ಪ್ಲೇ: ಡಿಸೈನ್ ಹಳೆಯ ಮಾದರಿಯನ್ನೇ ಹೋಲಲಿದ್ದು, ಸಣ್ಣ ಡೈನಾಮಿಕ್ ಐಲ್ಯಾಂಡ್ (Dynamic Island) ಇರಲಿದೆ.
ಪ್ರೊಸೆಸರ್ & ಚಿಪ್ಸೆಟ್: 2nm ತಂತ್ರಜ್ಞಾನ ಆಧಾರಿತ ಹೊಸ A20 Pro chip ಮತ್ತು ಆಪಲ್ನ C2 modem ಬಳಸುವ ಸಾಧ್ಯತೆಯಿದೆ.
ಕ್ಯಾಮೆರಾ ಉನ್ನತೀಕರಣ: ಮೈನ್ ಕ್ಯಾಮೆರಾಕ್ಕೆ ವೇರಿಯಬಲ್-ಅಪರ್ಚರ್ (Variable-aperture) ತಂತ್ರಜ್ಞಾನ ಸೇರ್ಪಡೆಯಾಗಬಹುದು.
ಬಣ್ಣಗಳು: ಡಾರ್ಕ್ ಚೆರ್ರಿ (Dark Cherry), ಬ್ಲ್ಯಾಕ್, ಸಿಲ್ವರ್ ಹಾಗೂ ಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬೆಲೆ: ಮೆಮೊರಿ ಬಿಡಿಭಾಗಗಳ ವೆಚ್ಚ ಹೆಚ್ಚಿರುವುದರಿಂದ ಈ ಸರಣಿಯ ಬೆಲೆಗಳು ಹಿಂದಿನ ಮಾಡೆಲ್ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ.
ಫೋಲ್ಡೇಬಲ್ ಐಫೋನ್ (iPhone Ultra) ಆಕರ್ಷಣೆ
ಈ ಇವೆಂಟ್ನ ಮುಖ್ಯ ಆಕರ್ಷಣೆಯೇ ಫೋಲ್ಡೇಬಲ್ ಐಫೋನ್ ಆಗಿರಲಿದೆ
ಡಿಸ್ಪ್ಲೇ: ಬುಕ್-ಸ್ಟೈಲ್ ವಿನ್ಯಾಸ ಹೊಂದಿರಲಿದ್ದು, 5.3 ರಿಂದ 5.5-ಇಂಚಿನ ಹೊರಭಾಗದ ಡಿಸ್ಪ್ಲೇ ಹಾಗೂ 7.6 ರಿಂದ 7.8-ಇಂಚಿನ ಒಳಭಾಗದ ಡಿಸ್ಪ್ಲೇ (ಟ್ಯಾಬ್ಲೆಟ್ನಂತಹ ಅನುಭವ) ಇರಲಿದೆ.
ವಿನ್ಯಾಸ & ತಂತ್ರಜ್ಞಾನ: ಟೈಟಾನಿಯಂ ಫ್ರೇಮ್, ಕಣ್ಣಿಗೆ ಕಾಣಿಸದಂತಹ ಕ್ರೀಸ್ (Crease-less display), ಮತ್ತು ಫೇಸ್ ಐಡಿ ಬದಲು ಪವರ್ ಬಟನ್ನಲ್ಲಿ ಟಚ್ ಐಡಿ (Touch ID) ಹೊಂದಿರಲಿದೆ.
ಬೆಲೆ: ಇದು ಆಪಲ್ನ ಅತ್ಯಂತ ದುಬಾರಿ ಫೋನ್ ಆಗಲಿದ್ದು, ಆರಂಭಿಕ ಬೆಲೆ ಸುಮಾರು $1,999 (ಸುಮಾರು ₹1.67 ಲಕ್ಷ) ದಿಂದ ಆರಂಭವಾಗಿ ಗರಿಷ್ಠ ರೂಪಾಂತರಗಳು $2,500 ವರೆಗೆ ತಲುಪಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

