ಗ್ವಾಲಿಯರ್: ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಯೂಟ್ಯೂಬ್ ಶಾರ್ಟ್ಸ್‌ಗಳಲ್ಲಿ ವೈರಲ್ ಆಗಲು ಇಂದಿನ ಯುವಪೀಳಿಗೆ (Gen Z) ಏನೆಲ್ಲ ಸಾಹಸಗಳನ್ನು ಮಾಡುತ್ತದೆ ಎನ್ನುವುದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಈ ವಿಚಿತ್ರ ಘಟನೆಯೇ ಸಾಕ್ಷಿ. ವಿದೇಶಿ ಸಾಮಾಜಿಕ ಜಾಲತಾಣಗಳ ವೈರಲ್ ಟ್ರೆಂಡ್ ಒಂದರಿಂದ ಪ್ರೇರಿತರಾದ ಯುವತಿಯೊಬ್ಬಳು ತನ್ನ ಪ್ರಿಯಕರನ ಕಾರಿನ ಸುತ್ತು 3,400 ಮುತ್ತು ನೀಡಿದ್ದಾಳೆ. ಲಿಪ್‌ಸ್ಟಿಕ್ ಗುರುತುಗಳು ಕಾರಿನ ಸುತ್ತ ಬಿದ್ದಿದೆ. ಇದೀಗ ಈ ಮೂಲಕ ಸೋಶಿಯಲ್ ಮೀಡಿಯಾಲ್ಲಿ ಹಂಗಾಮ ಸೃಷ್ಟಿಸಿದ್ದಾಳೆ. ಆದರೆ, ವೈರಲ್ ಆದ ಈ ವೀಡಿಯೊ ನೆಟ್ಟಿಗರ ಗಮನ ಸೆಳೆಯುವ ಜೊತೆಗೆ ಸಂಚಾರ ಪೊಲೀಸರ (Traffic Police) ಕಣ್ಣಿಗೂ ಬಿದ್ದಿದೆ.
ಮಾಹಿತಿಯ ಪ್ರಕಾರ, ಆದಿತ್ಯ ಸಿಕರ್ವಾರ್ ಎಂಬ ಯುವಕನ ಕಾರಿಗೆ ಆತನ ಗೆಳತಿಯು ಬಂಪರ್‌ನಿಂದ ಬೋನೆಟ್‌ವರೆಗೆ, ಬಾಗಿಲುಗಳು ಮತ್ತು ಪಿಲ್ಲರ್‌ಗಳು ಸೇರಿದಂತೆ ಎಲ್ಲೆಡೆ ಸುಮಾರು 4 ಗಂಟೆಗಳ ಕಾಲ ಶ್ರಮಿಸಿ 3,400 ಮುತ್ತುಗಳನ್ನು ನೀಡಿದ್ದಾಳೆ. ಇದಕ್ಕಾಗಿ ಸುಮಾರು ₹900 ಮೌಲ್ಯದ ಲಿಪ್‌ಸ್ಟಿಕ್ ಬಳಸಲಾಗಿತ್ತು. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ ಕೇವಲ ಕೆಲವೇ ಗಂಟೆಗಳಲ್ಲಿ 55 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು (Views) ಪಡೆದು ವೈರಲ್ ಆಗಿತ್ತು.
ವಿಡಿಯೋ:
ग्वालियर में 3 घंटे में गर्लफ्रेंड ने अपने प्रेमी की कार में 3000 हजार से अधिक किस किए। जिसके बाद यह कार सोशल मीडिया पर वायरल हो गई।
फिर पुलिस ने उस कार को पकड़कर 5500 का चालान कर दिया। pic.twitter.com/af8PzWz426
— Mr.Binod (@Mr__binod) August 25, 2026
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊ ಹಾಗೂ ಫೋಟೋಗಳನ್ನು ಗಮನಿಸಿದ ಗ್ವಾಲಿಯರ್ ಸಂಚಾರ ಪೊಲೀಸರು, ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಾಹನ ಹಾಗೂ ಅದರ ಮಾಲೀಕ ಆದಿತ್ಯ ಸಿಕರ್ವಾರ್‌ನನ್ನು ಪತ್ತೆ ಹಚ್ಚಿದ್ದಾರೆ. ವಾಹನ ಕಾಯ್ದೆಯ (Motor Vehicle Act) ಪ್ರಕಾರ, ವಾಹನದ ಮೂಲ ಬಣ್ಣ ಅಥವಾ ನೋಟವನ್ನು ಬದಲಾಯಿಸುವುದು ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಅಪರಾಧವಾಗಿದೆ.
ಇದನ್ನೂ ಓದಿ: ಏಮ್ಸ್ ವೈದ್ಯರ ಅದ್ಭುತ ಸಾಧನೆ: 209 ಕೆಜಿ ತೂಕವಿದ್ದ ವ್ಯಕ್ತಿಗೆ ಯಶಸ್ವಿ ಬೆರಿಯಾಟ್ರಿಕ್ ಸರ್ಜರಿ, 49 ಕೆಜಿ ತೂಕ ಇಳಿತ
ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಯುವಕನಿಗೆ ₹5,500 ದಂಡ (Challan) ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಲಿಪ್‌ಸ್ಟಿಕ್ ಗುರುತನ್ನೂ ಕಾರಿನಿಂದ ಸ್ವತಃ ಒರೆಸಿ, ವಾಹನವನ್ನು ತೊಳೆದು (Car Wash) ಶುಚಿಗೊಳಿಸುವಂತೆ ಕಠಿಣ ಶಿಕ್ಷೆ ನೀಡಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾದ ಯುವಕ, ಪೊಲೀಸರ ಬಳಿ ಕ್ಷಮಾಪಣೆ ಕೇಳಿದ್ದು, ಕಾರಿನಲ್ಲಿದ್ದ ಎಲ್ಲಾ ಮುದ್ದಿನ ಗುರುತುಗಳನ್ನು ಒರೆಸಿ ದಂಡ ಪಾವತಿಸಿದ್ದಾನೆ.

