Breaking News

ದೇಶ ಮತ್ತು ವಿದೇಶದಲ್ಲಿರುವ ಸಕಲ ಭಾರತೀಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ದೆಹಲಿ: ಪವಿತ್ರ ರಕ್ಷಾಬಂಧನ (Raksha Bandhan) ಹಬ್ಬದ ಶುಭ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಸಮಸ್ತ ಭಾರತೀಯರಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಈ ಕುರಿತು ವಿಶೇಷ ಸಂದೇಶ ನೀಡಿರುವ ಅವರು, ರಕ್ಷಾಬಂಧನವು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಬಣ್ಣಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಶ್ರದ್ಧಾಭಕ್ತಿಯಿಂದ ಮಣಿಕಟ್ಟಿಗೆ ಕಟ್ಟುವ ರಕ್ಷಾಸೂತ್ರವು ರಕ್ಷಣೆಯ ಪವಿತ್ರ ಬಂಧವಾಗಿದೆ. ಶಾಸ್ತ್ರಗಳಲ್ಲಿ ಬರುವ “ರಕ್ಷೇ, ಮಾ ಚಲ, ಮಾ ಚಲ” ಎಂಬ ಮಂತ್ರವು “ಈ ರಕ್ಷಣೆಯ ಬಂಧವು ಶಾಶ್ವತವಾಗಿ ನಿಲ್ಲಲಿ” ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ.

ಇಲ್ಲಿದೆ ಪೋಸ್ಟ್​​:

ಸೋದರಿಯರು ತಮ್ಮ ಸಹೋದರರು ಮತ್ತು ಒಡಹುಟ್ಟಿದವರ ಮಣಿಕಟ್ಟಿಗೆ ರಾಖಿ ಕಟ್ಟುವುದು ಕೇವಲ ಕೌಟುಂಬಿಕ ಆಚರಣೆಯಷ್ಟೇ ಅಲ್ಲ; ಇದು ಕುಟುಂಬಗಳು, ಸ್ನೇಹಿತರು ಹಾಗೂ ಇಡೀ ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ ಮತ್ತು ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ; ರಕ್ಷಾಬಂಧನ ಆಚರಣೆಗೆ ಡಿಫರೆಂಟ್ ಐಡಿಯಾ: ನಿಮ್ಮ ಸಹೋದರ-ಸಹೋದರಿಯರಿಗೆ ನೀಡಬಹುದಾದ ಅತ್ಯುತ್ತಮ ಗಿಫ್ಟ್‌ಗಳು

ಪ್ರತಿಯೊಂದು ಬಾಂಧವ್ಯವೂ ನಂಬಿಕೆ, ಸೂಕ್ಷ್ಮತೆ ಮತ್ತು ಪರಸ್ಪರ ಸಹಕಾರದ ಅಡಿಪಾಯದ ಮೇಲೆ ನಿಂತಿದೆ ಎಂಬುದನ್ನು ಈ ಹಬ್ಬವು ನೆನಪಿಸುತ್ತದೆ. ಈ ಶುಭ ಸಂದರ್ಭದಲ್ಲಿ ನಮ್ಮ ಕುಟುಂಬಗಳು ಮತ್ತು ಸಮುದಾಯಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರತಿಜ್ಞೆ ಮಾಡೋಣ. ಈ ಸೌಹಾರ್ದಯುತ ಭಾವನೆಯೊಂದಿಗೆ ‘ವಿಕಸಿತ ಭಾರತ’ದ (Viksit Bharat) ಕಡೆಗೆ ಮುನ್ನಡೆಯೋಣ ಎಂದು ರಾಷ್ಟ್ರಪತಿಗಳು ಕರೆ ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *