Breaking News

ಇಂದಿನ ದಿನ ಭವಿಷ್ಯ: ಶ್ರಾವಣದ ಕೊನೆಯ ಶನಿವಾರದ ಗ್ರಹಚಾರ; 12 ರಾಶಿಗಳ ವೃತ್ತಿ ಮತ್ತು ಆರ್ಥಿಕ ಫಲ ಇಲ್ಲಿದೆ

ಮೇಷ: ಬೆಳ್ಳಿ ವ್ಯಾಪಾರಿಗಳಿಗೆ ಸಲ್ಪ ಹಿನ್ನಡೆಯಾಗಬಹುದು. ಕೃಷಿ ಕ್ಷೇತ್ರದಲ್ಲಿ ಉತ್ತಮ ಲಾಭ ದೊರೆಯಲಿದೆ. ಕೌಟುಂಬಿಕ ಬಾಂಧವ್ಯ ವೃದ್ಧಿಸಲಿದ್ದು, ಉದ್ಯೋಗದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ.

ವೃಷಭ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹೂಡಿಕೆ ಹಾಗೂ ಉದ್ಯಮದಲ್ಲಿ ಲಾಭಾಂಶ ಹೆಚ್ಚಾಗಲಿದೆ.

ಮಿಥುನ: ಹೊಸ ವ್ಯಾಪಾರ ಅಥವಾ ಫ್ರಾಂಚೈಸಿ ಆರಂಭಿಸಲು ಸೂಕ್ತ ದಿನ. ಮನೆಯಲ್ಲಿ ಮಂಗಳ ಕಾರ್ಯಗಳ ಆಯೋಜನೆಯಾಗಲಿದೆ. ಸಹೋದ್ಯೋಗಿಗಳ ವಿಚಾರದಲ್ಲಿ ಜಾಗರೂಕತೆ ಅಗತ್ಯ.

ಕರ್ಕಾಟಕ: ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆಕಸ್ಮಿಕ ಪ್ರಯಾಣದ ಯೋಗವಿದೆ. ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳು ಬರಬಹುದು, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಸಿಂಹ: ಹೊಸ ಉದ್ಯಮ ಆರಂಭಿಸಲು ದಿನ ಅನುಕೂಲಕರವಾಗಿದೆ. ಕೃಷಿ ವಲಯದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯ. ಆತುರದ ಹಾಗೂ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಕನ್ಯಾ: ರಿಯಲ್ ಎಸ್ಟೇಟ್ ಹಾಗೂ ಆಸ್ತಿ ವ್ಯವಹಾರಸ್ಥರಿಗೆ ಉತ್ತಮ ಲಾಭ ಸಿಗಲಿದೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿವೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವಾಗ ಜಾಗರೂಕರಾಗಿರಿ.

ತುಲಾ: ಹೊಸ ಆಸ್ತಿ ಖರೀದಿ ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣದ ಸಾಧ್ಯತೆಯಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ.

ವೃಶ್ಚಿಕ: ರೈತರಿಗೆ ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರಿಗೆ ಅನುಕೂಲಕರ ದಿನ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿಯ ಅವಕಾಶಗಳು ಕೂಡಿ ಬರಲಿವೆ. ಪರಿಶ್ರಮಕ್ಕೆ ತಕ್ಕ ಶುಭ ಫಲಿತಾಂಶ ದೊರೆಯಲಿದೆ.

ಧನು: ಕಾರ್ಯಗಳಲ್ಲಿ ಇದ್ದಕ್ಕಿದ್ದಂತೆ ವಿಘ್ನಗಳು ಎದುರಾಗಬಹುದು. ಹೈನುಗಾರಿಕೆ ಹಾಗೂ ಕಮಿಷನ್ ವ್ಯವಹಾರಗಳಲ್ಲಿ ಲಾಭವಾಗಲಿದೆ. ಕೆಲಸದ ಒತ್ತಡದಿಂದ ದಣಿವು ಅನಿಸಬಹುದು.

ಮಕರ: ನೂತನ ಕೆಲಸ-ಕಾರ್ಯಗಳನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಕರಕುಶಲ ಹಾಗೂ ಸಣ್ಣ ಉದ್ಯಮಗಳಲ್ಲಿ ಉತ್ತಮ ಆದಾಯ ಬರಲಿದೆ.

ಕುಂಭ: ಹೂಡಿಕೆಗಳಿಂದ ಉತ್ತಮ ಲಾಭ ನಿರೀಕ್ಷಿಸಬಹುದು. ಸಮಾಜದಲ್ಲಿ ಗೌರವ ಹಾಗೂ ಪ್ರಭಾವ ಹೆಚ್ಚಾಗಲಿದೆ. ಪ್ರಮುಖ ದಾಖಲೆ ಪತ್ರಗಳಿಗೆ ಸಹಿ ಮಾಡುವಾಗ ಎಚ್ಚರ ವಹಿಸಿ.

ಮೀನ: ಅನಗತ್ಯ ಖರ್ಚುಗಳು ಕಡಿಮೆಯಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ವಿವಾಹ ವಿಚಾರಗಳ ಚರ್ಚೆ ನಡೆಯಲಿದೆ. ಪ್ರಮುಖ ಕೆಲಸಗಳಲ್ಲಿ ಸಣ್ಣ ಅಸಡ್ಡೆಯೂ ಬೇಡ.

Leave a Reply

Your email address will not be published. Required fields are marked *